ರವಿಚಂದ್ರನ್​ ವಿವಾಹ ವಾರ್ಷಿಕೋತ್ಸವ: ಮದುವೆ ದಿನವೇ ಪತ್ನಿ ಜೊತೆ ತುಂಟಾಟ ನೋಡಿ! ಹಳೆ ವಿಡಿಯೋ ವೈರಲ್​

Published : Feb 15, 2025, 04:30 PM ISTUpdated : Feb 15, 2025, 06:01 PM IST
ರವಿಚಂದ್ರನ್​ ವಿವಾಹ ವಾರ್ಷಿಕೋತ್ಸವ:  ಮದುವೆ ದಿನವೇ ಪತ್ನಿ ಜೊತೆ ತುಂಟಾಟ ನೋಡಿ! ಹಳೆ ವಿಡಿಯೋ ವೈರಲ್​

ಸಾರಾಂಶ

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಮತಿ ೩೯ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. 1989ರ ಫೆಬ್ರವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರವಿಚಂದ್ರನ್ ತಂದೆ, ನಿರ್ಮಾಪಕ ಎನ್. ರಾಸ್ವಾಮಿ, ಸುಮತಿಯವರನ್ನು ಆಯ್ಕೆ ಮಾಡಿದ್ದರು. ಮದುವೆಯ ವಿಡಿಯೋದಲ್ಲಿ ರವಿಚಂದ್ರನ್ ತುಂಟಾಟ ವೈರಲ್ ಆಗಿದೆ.

ಕ್ರೇಜಿಸ್ಟಾರ್​, ರಸಿಕ, ಪ್ರೇಮಲೋಕವನ್ನೇ ಧರೆಗಿಳಿಸುವ ನಾಯಕ ಎಂದೆಲ್ಲಾ ಬಿರುದು ಬಾವಲಿಗಳನ್ನು ಪಡೆದುಕೊಂಡಿರುವ ರವಿಮಾಮ ಅರ್ಥಾತ್​ ಸ್ಯಾಂಡಲ್​ವುಡ್​ ಸ್ಟಾರ್​ ರವಿಚಂದ್ರ ಅವರು ಇದೀಗ ತಮ್ಮ 39ನೇ  ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. 14 ಫೆಬ್ರುವರಿ 1986ರಂದು ಇವರು ಸುಮತಿ ಅವರ ಕೈಹಿಡಿದಿದ್ದು, ದಂಪತಿ ನಿನ್ನೆ  ಮದುವೆಯ ಸಂಭ್ರಮದ ದಿನವನ್ನು  ಆಚರಿಸಿಕೊಂಡಿದ್ದಾರೆ.  ರವಿಚಂದ್ರನ್​ ಅವರು ಸಕತ್​ ಫೇಮಸ್​ ಆಗಿದ್ದರೂ ಇವರ ಪತ್ನಿ ಸುಮತಿ ಮಾತ್ರ   ಸಾರ್ವಜನಿಕವಾಗಿ ಕಾಣಿಸಿಕೊಂಡದ್ದೇ ಬಲು ಕಡಿಮೆ. ಆದರೆ ಕೆಲ ವರ್ಷಗಳ ಹಿಂದೆ,  ತಮ್ಮ ಎರಡನೇ ಮಗ ವಿಕ್ರಮ್ ಮೊದಲ ಸಿನಿಮಾ 'ತ್ರಿವಿಕ್ರಮ' ಲಾಂಚ್ ಆದ ಸಂದರ್ಭದಲ್ಲಿ ಮೊದಲ ಬಾರಿಗೆ ಮಾತನಾಡಿದ್ದರು.  ಆ್ಯಂಕರ್​ ಅಕುಲ್ ಒತ್ತಾಯಕ್ಕೆ ಮಣಿದು ಅವರು ಮಾತನಾಡಿದ್ದರು. ಇದನ್ನು ಕೇಳಿ ಖುದ್ದು ರವಿಚಂದ್ರನ್​ ಅವರೇ ನಕ್ಕು ಬಿಟ್ಟಿದ್ದರು.
 
ಅಷ್ಟಕ್ಕೂ ರವಿಚಂದ್ರನ್​ ಮತ್ತು ಸುಮತಿ ಅವರದ್ದು ಅರೇಂಜ್ಡ್​ ಮ್ಯಾರೇಜ್​. ತಮ್ಮ ಬದುಕಿನ ಏಳು ಬೀಳುಗಳಲ್ಲಿ ಸದಾ ಪತ್ನಿ ಜೊತೆಯಾಗಿ ನಿಂತಿರುವ ಬಗ್ಗೆ ಯಾವಾಗಲೂ ನಟ ಹೇಳುತ್ತಲೇ ಇರುತ್ತಾರೆ.  ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾಳೆ ಎಂದು ಹೊಗಳುತ್ತಿರುತ್ತಾರೆ. ಅಷ್ಟಕ್ಕೂ, ಸುಮತಿ ಅವರನ್ನು ಮಗನಿಗೆ ಜೋಡಿ ಮಾಡಿದ್ದು, ರವಿಚಂದ್ರನ್​ ಅವರ ತಂದೆ  ಎನ್‌. ರಾಸ್ವಾಮಿ. ಇವರು ಕನ್ನಡ ಚಿತ್ರರಂಗದ ಖ್ಯಾತ  ನಿರ್ಮಾಪಕ.  ಅಷ್ಟರಲ್ಲಿಯೇ ರವಿಚಂದ್ರನ್​ ಅವರು ನಟಿಯೊಬ್ಬರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ  ಅಪ್ಪನ ಪ್ರೀತಿಯ ಮುಂದೆ ತನ್ನ ಪ್ರೀತಿ ದೊಡ್ಡದಲ್ಲ, ಅವರ ಮನಸ್ಸು ನೋಯಿಸಬಾರದು ಎಂದು ಸುಮತಿ ಅವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದರು ಎನ್ನಲಾಗುತ್ತಿದೆ.

Junior Appu: ಇವರೇ ಜ್ಯೂನಿಯರ್​ ಅಪ್ಪು! ಪುನೀತ್​ ರಾಜ್​ರನ್ನು ಹೋಲುವ ಯುವಕನ ಡೈಲಾಗ್​ಗೆ ಫ್ಯಾನ್ಸ್​ ಫಿದಾ
 
ಇದೀಗ 14 ಫೆಬ್ರುವರಿ 1986ರ ವಿಡಿಯೋ ವೈರಲ್​ ಆಗಿದೆ. ಇದು ರವಿಚಂದ್ರನ್​ ಅವರ ಮದುವೆಯ ವಿಡಿಯೋ. ರವಿಚಂದ್ರನ್​ ಅವರಿಗೆ ಈಗ 63 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಇವರನ್ನು ರಸಿಕರ ರಾಜ ಎಂದೇ ಕರೆಯುವುದು ಉಂಟು. ಮೇಕಪ್​ ಮಾಡಿ ನಿಲ್ಲಿಸಿದರೆ ನಾಯಕನಾಗಿಯೂ ಮಿಂಚಲು ಇವರು ಸೈ. ರೊಮಾನ್ಸ್​ಗೂ ಸೈ ಎನ್ನಿಸುವ ಮೈಕಟ್ಟು ಇದೆ. ಇದೇ ಕಾರಣಕ್ಕೆ ಇಂದಿಗೂ ಅವರು ಕ್ರೇಜಿಸ್ಟಾರ್​ ಪಟ್ಟ ಉಳಿಸಿಕೊಂಡಿದ್ದಾರೆ. ಇನ್ನು 39 ವರ್ಷಗಳ ಹಿಂದೆ ಇವರು ಹೇಗಿದ್ದಿರಬೇಡ? ಈ ವಿಡಿಯೋದಲ್ಲಿ ಮದುವೆಯ ದಿನ ಊಟದ ಸಮಯದಲ್ಲಿ ಪತ್ನಿಯ ಜೊತೆ ಮಾಡಿರುವ ಚಿಕ್ಕದೊಂದು ತುಂಟಾಟದ ವಿಡಿಯೋ ಈಗ ವೈರಲ್​ ಆಗಿದೆ. 

ವೀರೇಶ್​ 127 ಎನ್ನುವ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಇದರಲ್ಲಿ ಅವರ ಪತ್ನಿ ಸುಮತಿ ಕಾಜೂ ಬರ್ಫಿ ತಿನ್ನಿಸಲು ಅದನ್ನು ಕೈಗೆತ್ತಿಕೊಳ್ಳುತ್ತಾರೆ. ಆದರೆ, ತುಂಟ ರವಿಚಂದ್ರನ್​ ಅವರು, ನನಗೆ ಅದು ಬೇಡ, ಜಾಮೂನು ಬೇಕು ಎಂದು ಹೇಳಿ, ಪತ್ನಿಯ ಬಾಳೆಯಲ್ಲಿದ್ದ ಜಾಮೂನು ತಿನ್ನಿಸಿಕೊಳ್ಳುವ ವಿಡಿಯೋ ಇದಾಗಿದೆ. ಇದೇ ವಿಡಿಯೋದಲ್ಲಿ ಮದುವೆಯ ದಿನ ನಡೆದ ಕೆಲವೊಂದು ಸಂಪ್ರದಾಯಗಳು, ಮದುವೆಗೆ ಆಗಮಿಸಿದ್ದವರ ಒಂದಿಷ್ಟು ದೃಶ್ಯಗಳನ್ನು ನೋಡಬಹುದಾಗಿದೆ. 

Prabhu Mundkur: ಮನೆ ಓನರ್​ಗಾಗಿ ಲಿವ್​ ಇನ್​ನಲ್ಲಿ ಇರಬೇಕಾಯ್ತು! ಮದ್ವೆಯಾಗದೇ ಒಟ್ಟಿಗಿದ್ದ 'ಮರ್ಫಿ' ನಟನ ರೋಚಕ ಕಥೆ ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ