ಗ್ರೀಷ್ಮಾ ಗೌಡಗೆ 'ಹಾರ್ಟ್ಲೀ' ಥ್ಯಾಂಕ್ಸ್ ಹೇಳಿದ್ಯಾಕೆ ಚಂದನ್ ಶೆಟ್ಟಿ..? ಶೆಟ್ಟರ ಬಾಯಲ್ಲಿ ಯಾರೀ ಹೊಸ ಹುಡುಗಿ..!

Published : Feb 15, 2025, 01:40 PM ISTUpdated : Feb 15, 2025, 01:53 PM IST
ಗ್ರೀಷ್ಮಾ ಗೌಡಗೆ 'ಹಾರ್ಟ್ಲೀ' ಥ್ಯಾಂಕ್ಸ್ ಹೇಳಿದ್ಯಾಕೆ ಚಂದನ್ ಶೆಟ್ಟಿ..? ಶೆಟ್ಟರ ಬಾಯಲ್ಲಿ ಯಾರೀ ಹೊಸ ಹುಡುಗಿ..!

ಸಾರಾಂಶ

ಚಂದನ್ ಶೆಟ್ಟಿ ಹಿಮಾಚಲ ಪ್ರವಾಸ ಮುಗಿಸಿ, 'ಕಾಟನ್ ಕ್ಯಾಂಡಿ' ಹಾಡಿನ ೨೦ ಮಿಲಿಯನ್ ವೀಕ್ಷಣೆ ಸಂಭ್ರಮಿಸುತ್ತಿದ್ದಾರೆ. ಸಹ-ನಿರ್ಮಾಪಕಿ ಗ್ರೀಷ್ಮಾ ಗೌಡಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಹಾಡು ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ. ಸಾಹಸ ಪ್ರವಾಸ, ಸಂಗೀತದ ಜೊತೆಗೆ ಚಂದನ್ ಬಿಡುವಿಲ್ಲದೆ ಇದ್ದಾರೆ.

ನಟ ಹಾಗೂ ಸಿಂಗರ್ ಚಂದನ್ ಶೆಟ್ಟಿ (Chandan Shetty) ಅವರು ಇತ್ತೀಚೆಗಷ್ಟೇ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಹಿಮಾಚಲ ಪ್ರದೇಶಕ್ಕೆ ಟೂರ್ ಹೋಗಿರುವುದು ಗೊತ್ತೇ ಇದೆ. ಸದ್ಯ ಹಿಮಾಚಲ ಪ್ರದೇಶ ಟೂರ್ ಮುಗಿಸಿ ಬಂದಿರುವ ಚಂದನ್ ಶೆಟ್ಟಿ, ಹೊಚ್ಚಹೊಸ ಸಾಧನೆ ಮಾಡಿ ಖುಷಿ ಎಂಜಾಯ್ ಮಾಡ್ತಿದಾರೆ. ಚಂದನ್ ಶೆಟ್ಟಿ 'ಕಾಟನ್ ಕ್ಯಾಂಡಿ' ವಿಡಿಯೋ ಸದ್ಯ 20 ಮಿಲಿಯನ್ ವ್ಯೂಸ್ ಸಮೀಪ ಬಂದು ನಿಂತಿದೆ. ಈ ಖುಷಿಯನ್ನು ಇಡೀ ಟೀಂ ಎಂಜಾಯ್ ಮಾಡ್ತಿದೆ. 

ಹೌದು, ಚಂದನ್ ಶೆಟ್ಟಿಯವರು ಇತ್ತೀಚೆಗೆ ತಮ್ಮ ಹೊಸ ಮ್ಯೂಸಿಕ್ ವಿಡಿಯೋ 'ಕಾಟನ್‌ ಕ್ಯಾಂಡಿ' ಸಕ್ಸಸ್‌ ಎಂಜಾಯ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಟನ್ ಕ್ಯಾಂಡಿ ವಿಡಿಯೋ ಕೋ ಪ್ರೊಡ್ಯೂಸರ್ ಆಗಿರುವ ಗ್ರೀಷ್ಮಾ ಗೌಡ ಅವರಿಗೆ ಶೆಟ್ಟರು ಥ್ಯಾಂಕ್ಸ್ ಹೇಳಿದ್ದಾರೆ. ಈ ಬಗ್ಗೆ 'Tysm greeshu ✨❤️ I am feeling truely overwhelmed listening to ur words'' ಎಂದು ಪೋಸ್ಟ್ ಮಾಡಿದ್ದಾರೆ ಚಂದನ್ ಶೆಟ್ಟಿ. 

ಅದೊಂದು ಫೋಟೋ ಬಗ್ಗೆ ಕ್ಲಾರಿಟಿ ಕೊಟ್ಟ ಚಂದನ್‌ ಶೆಟ್ಟಿ; Oho.. ಅದಲ್ಲ..., ಇದಂತೆ ವಿಷ್ಯ!

ಈ ಕಾಟನ್‌ ಕ್ಯಾಂಡಿ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಗಿದ್ದು, ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಸದ್ಯ ಸಾಹಸ ಟೂರ್ ಜೊತೆಗೆ ಮ್ಯೂಸಿಕ್ ವಿಡಿಯೋದ ಪ್ರಚಾರವನ್ನು ಕೂಡ ಚಂದನ್ ಶೆಟ್ಟಿಯವರು ಮಾಡುತ್ತಿದ್ದಾರೆ. ಗ್ರೀಷ್ಮಾ ಗೌಡ ಅವರಿಗೆ ಈ ಬಗ್ಗೆ ಹೃತ್ಪೂರ್ವಕ ಕೃತಜ್ಞತೆ ತಿಳಿಸಿರುವ ಚಂದನ್ ಶೆಟ್ಟಿಯವರು, ನಿಮ್ಮ ಮಾತು ಕೇಳಿ ನಾನು ಈಗ ನಾನು ತುಂಬಾ ಖುಷಿ ಅನುಭವಿಸುತ್ತಿರುವೆ ಗ್ರೀಶೂ..' ಎಂದಿದ್ದಾರೆ. ಈ ಕಾಟನ್ ಕ್ಯಾಂಡಿ ಮ್ಯೂಸಿಕ್ ವಿಡಿಯೋ ಹೊರಬರಲು ಚಂದನ್ ಶೆಟ್ಟಿಗೆ ಎಲ್ಲ ಸಜೆಶನ್ ಹಾಗೂ ಸಹಕಾರ ನೀಡಿದ್ದು ಈ ಗ್ರೀಷ್ಮಾ ಗೌಡ ಅಂತ ಅರ್ಥ ಮಾಡಿಕೊಳ್ಳಬಹುದು. 

ಒಟ್ಟಿನಲ್ಲಿ, ಅಡ್ವೆಂಚರ್‌, ಮ್ಯೂಸಿಕ್ ಎಂದು ಸದ್ಯ ತಮ್ಮ ಟೈಮ್ ಸ್ಪೆಂಡ್ ಮಾಡ್ತಿರೋ ಚಂದನ್ ಶೆಟ್ಟಿಯವರು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇದಕ್ಕೂ ಮೊದಲು ಅವರು ಆಸ್ಟ್ರೇಲಿಯಾದ ಸಿಡ್ನಿಗೆ ಹೋಗಿದ್ದರು. ಅಲ್ಲಿ ತಮ್ಮ ಬಾಲ್ಯದ 'ವಿಮಾನ ಓಡಿಸುವ' ಕನಸನ್ನು ನನಸು ಮಾಡಿಕೊಂಡು ಬಂದಿದ್ದಾರೆ. ಮುಂದೆ ಅದ್ಯಾವ ಸಾಹಸಕ್ಕೆ ರೆಡಿಯಾಗಲಿದ್ದಾರೆ ಚಂದನ್ ಶೆಟ್ಟಿ ಎಂಬುದನ್ನು ಕಾದು ನೋಡಬೇಕಾಗಿದೆ. ಈಗಂತೂ ಕಾಟನ್ ಕ್ಯಾಂಡಿ 20 ಮಿಲಿಯನ್ ವ್ಯೂಸ್ ಪಡೆದು ಮುನ್ನುಗ್ಗತೊಡಗಿದೆ. 

ಕನ್ನಡ ಇಂಡಸ್ಟ್ರಿ Casting Couch ಕರಾಳ ಮುಖ ಬಿಟ್ಟಿಟ್ಟ Puneeth ಸಿನಿಮಾ ನಟಿ ಆಶಿತಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?