
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ 'ಜಾಕಿ' ಮರು ಬಿಡುಗಡೆಯು ಎಲ್ಲೆಡೆ ಸಂಚಲನ ಮೂಡಿಸಿದೆ. ಈಗ ಫಸ್ಟ್ ಟೈಮ್ ಬಿಡುಗಡೆಯಾಗಿರುವ ಹೊಸ ಚಿತ್ರದಂತೆ ಜಾಕಿ (Jackie) ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಸೋಲ್ಡ್ ಔಟ್ ಶೋಗಳು, ಮರು ಬಿಡುಗಡೆಗೊಂಡ ಮೊದಲನೇ ದಿನವೇ ಒಟ್ಟು 1 ಕೋಟಿ ರೂಪಾಯಿ ಸಂಪಾದಿಸಿದೆ. ಎರಡನೇ ದಿನದ ಶೋಗಳು ಇದೇ ರೀತಿಯ ಪ್ರತಿಕ್ರಿಯೆಯನ್ನು ಕಾಣುತ್ತಿದ್ದು,ಅಪ್ಪು ಹುಟ್ಟುಹಬ್ಬದ ದಿನದಂದು 'ಜಾಕಿ' ಇನ್ನು ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
14 ವರ್ಷಗಳ ನಂತರ 'ಜಾಕಿ' ಮಾರ್ಚ್ 15, 2024ರಂದು 175 ಚಿತ್ರಮಂದಿರಗಳಲ್ಲಿ ಭರ್ಜರಿ ಮರು ಬಿಡುಗಡೆಯನ್ನು ಕಂಡಿತು. ಇನ್ನಾವ ಮರು ಬಿಡುಗಡೆಯಾದ ಚಿತ್ರವೂ ಪಡೆಯದಂತಹ ಮತ್ತು ಊಹಿಸಲು ಸಾಧ್ಯವಾಗದಂತಹ ಪ್ರತಿಕ್ರಿಯೆಯನ್ನು ಈ ಸಿನಿಮಾ ಕಂಡಿದೆ. ಈ ಚಿತ್ರವನ್ನು ವಿತರಿಸಿದ ಕೆ.ಆರ್.ಜಿ ಸ್ಟುಡಿಯೋಸ್, ಪಿ.ಆರ್.ಕೆ ಮತ್ತು ಅಪ್ಪು ಅಭಿಮಾನಿಗಳ ಸತತ ಪರಿಶ್ರಮಕ್ಕೆ ತಕ್ಕ ಫಲವೇ ದೊರೆತಿದೆ ಎಂದರೆ ತಪ್ಪಾಗಲಾರದು.
ನೀವು ಸ್ಕೂಲ್ ಗರ್ಲ್ ಅಲ್ಲ, ದೊಡ್ಡವರಾಗಿದ್ದೀರಿ; ಸಮಂತಾಗೆ ಯಾಕೆ ಹೀಗಂದ್ರು ಸದ್ಗುರು ಜಗ್ಗಿ ವಾಸುದೇವ್!
ಈ ಕುರಿತು ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, 'ಜಾಕಿ ಒಂದು ಮಾಸ್ ಚಿತ್ರ. ಈ ಚಿತ್ರದ ಮರು ಬಿಡುಗಡೆಯ ಮೂಲಕ ನಾವು ಮತ್ತು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಸಂಭ್ರಮಿಸಲು ಇಚ್ಛಿಸುತ್ತೇವೆ. ಇದೇ ರೀತಿ ಪ್ರತಿ ವರ್ಷವೂ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ಯಾವುದಾದರೊಂದು ಚಿತ್ರವನ್ನು ಮರು ಬಿಡುಗಡೆ ಮಾಡುತ್ತೇವೆ.
ಉತ್ತರದ ಅಂಗಳದಲ್ಲಿ ಕುಳಿತು 'ಕೆಜಿಎಫ್' ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತು ಕೇಳಿ ಹೌಹಾರಿದೆ ಜಗತ್ತು!
ಮುಂದಿನ ವರ್ಷ, ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೆ. ಆರ್.ಜಿ ಸ್ಟುಡಿಯೋಸ್ ಮತ್ತು ಪಿ.ಆರ್.ಕೆ ಪುನೀತ್ ಅವರ ಚೊಚ್ಚಲ ಚಿತ್ರವಾದ 'ಅಪ್ಪು'ವನ್ನು ಮರು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದೇವೆ. ಚಿತ್ರದ ಕಲರ್ ಗ್ರೇಡಿಂಗ್ ಮತ್ತು ಇನ್ನಿತರ ಕೆಲಸಗಳು ಏಪ್ರಿಲ್ ತಿಂಗಳಲ್ಲಿ ಆರಂಭಗೊಳಲ್ಲಿವೆ' ಎಂದಿದ್ದಾರೆ.
ಒಬ್ಬರೇ ಶಾಪಿಂಗ್ ಹೋದಾಗ ನಟಿ ಪೂಜಾ ಹೆಗಡೆ ಅದೆಂಥ ತಪ್ಪು ಮಾಡ್ಬಿಟ್ರು ನೋಡ್ರಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.