ಜನತಾ ಕರ್ಫ್ಯೂ: ಸೀರಿಯಲ್, ಸಿನಿಮಾ ಚಿತ್ರೀಕರಣ ಬಂದ್, ಬಿಗ್ ಬಾಸ್ ಕಥೆ ಏನು?

By Kannadaprabha News  |  First Published Apr 27, 2021, 7:26 AM IST

ಕೊರೋನಾ ಕರ್ಪ್ಯೂ ಕಾರಣ ಚಿತ್ರೀಕರಣಕ್ಕೂ ಬ್ರೇಕ್‌ ಬಿದ್ದಿದೆ. ಈಗಾಗಲೇ ಚಿತ್ರಮಂದಿರಗಳನ್ನು ಮುಚ್ಚಿಸಿರುವ ಸರ್ಕಾರ ಇದೀಗ ಚಿತ್ರೀಕರಣಕ್ಕೂ ನಿರ್ಬಂಧ ಹೇರಿದೆ.


 ಬೆಂಗಳೂರು (ಏ.27):  ಕೊರೋನಾ ತಡೆಗೆ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಿನ ಕರ್ಪ್ಯೂ ಕಾರಣ ಚಿತ್ರೀಕರಣಕ್ಕೂ ಬ್ರೇಕ್‌ ಬಿದ್ದಿದೆ. ಈಗಾಗಲೇ ಚಿತ್ರಮಂದಿರಗಳನ್ನು ಮುಚ್ಚಿಸಿರುವ ಸರ್ಕಾರ ಇದೀಗ ಚಿತ್ರೀಕರಣಕ್ಕೂ ನಿರ್ಬಂಧ ಹೇರಿದೆ. ಆದರೆ ಈಗಾಗಲೇ ಆರಂಭವಾದ ಬಿಗ್ ಬಾಸ್ ಕಥೆ ಏನು ಎನ್ನುವುದು ಇನ್ನಷ್ಟೆ ನಿರ್ಧಾರವಾಗಬೇಕಿದೆ. 

ಆ ಪ್ರಕಾರ ಸಿನಿಮಾ, ಸೀರಿಯಲ್‌, ರಿಯಾಲಿಟಿ ಶೋ ಅಥವಾ ತತ್ಸಂಬಂಧಿತ ಚಿತ್ರೀಕರಣ ಮುಂದಿನ 14 ದಿನಗಳ ಕಾಲ ಬಂದ್‌ ಆಗಲಿದೆ. ಇದರಿಂದ ಕಿರುತೆರೆಗೆ ಸಾಕಷ್ಟುಹೊಡೆತ ಬೀಳಲಿದೆ. ಸತತ ಎರಡು ವಾರ ಚಿತ್ರೀಕರಣ ನಡೆಯದಿದ್ದರೆ ಧಾರಾವಾಹಿ ಪ್ರಸಾರ ನಿಲ್ಲಿಸೋದು ಅನಿವಾರ್ಯ. ಒಂದಿಷ್ಟುಎಪಿಸೋಡ್‌ ಬ್ಯಾಂಕಿಂಗ್‌ ಮಾಡಿಟ್ಟುಕೊಂಡಿರುವ ಸೀರಿಯಲ್‌ಗಳು ಕೆಲವು ಕಾಲ ಪ್ರಸಾರ ಮುಂದುವರಿಸಬಹುದು. 

Tap to resize

Latest Videos

'ಶಿವಪ್ಪ' ಸಿನಿಮಾ ಚಿತ್ರೀಕರಣ ನಿಲ್ಲಿಸಿದ ಶಿವರಾಜ್‌ಕುಮಾರ್! ..

ಆದರೆ ಈ ಕಾರಣಕ್ಕೆ ಕಲರ್ಸ್‌ ಕನ್ನಡದ ಜನಪ್ರಿಯ ಬಿಗ್‌ಬಾಸ್‌ ರಿಯಾಲಿಟಿ ಶೋ ಕಥೆ ಏನಾಗಬಹುದು ಎಂಬುದು ಸದ್ಯದ ಕುತೂಹಲ. ಕಳೆದೆರಡು ವಾರಗಳಿಂದ ನಿರೂಪಕ ಸುದೀಪ್‌ ಅವರ ಅನುಪಸ್ಥಿತಿಯಲ್ಲಿ ಈ ಶೋ ಕಳೆಗುಂದಿತ್ತು. ಮುಂದೆ ಪ್ರಸಾರ ಅರ್ಧಕ್ಕೇ ನಿಲ್ಲಿಸಬೇಕಾದ ಸಂದಿಗ್ಧಕ್ಕೆ ಸಿಲುಕುವ ಸಾಧ್ಯತೆ ಇದೆ.

ಬೆಂಗಳೂರಿಗರ ಗಮನಕ್ಕೆ
 

click me!