ಕೊರೋನಾಕ್ಕೆ ಕೋಟಿ ನಿರ್ಮಾಪಕ ರಾಮು ಬಲಿ, ಮಾಲಾಶ್ರೀ ಪತಿ ಇನ್ನಿಲ್ಲ

By Suvarna NewsFirst Published Apr 26, 2021, 9:04 PM IST
Highlights

ಹಿರಿಯ ನಿರ್ಮಾಪಕ ರಾಮು ನಿಧನ/ ಕೊರೊನಾಗೆ ಬಲಿಯಾದ ನಿರ್ಮಾಪಕ/ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನ/ ಹಿರಿಯ ನಟಿ ಮಾಲಾಶ್ರೀ ಪತಿ ರಾಮು ನಿಧನ/ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರಾಮು/ ಚಿಕಿತ್ಸೆ ಫಲಕಾರಿಯಾಗದೇ ರಾಮು ನಿಧನ

ಬೆಂಗಳೂರು (ಏ. 26) ಗೋಲಿಬಾರ್, ಎಕೆ 47, ಸಿಂಹದ ಮರಿಯಂತ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು  ಇನ್ನಿಲ್ಲ.  ನಟಿ ಮಾಲಾಶ್ರೀ ಅವರ ಪತಿ ರಾಮು ಅವರ ಆರೋಗ್ಯದಲ್ಲಿ ಏರು ಪೇರು ಉಂಟಾಗಿ ಮೂರು ದಿನಗಳ ಹಿಂದೆ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

52 ವರ್ಷದ ರಾಮು ಅವರಿಗೆ  ವಾರದ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಕನ್ನಡ ಚಿತ್ರರಂಗದಲ್ಲಿ 39 ಚಿತ್ರಗಳನ್ನು ನಿರ್ಮಿಸಿದ್ದಾರೆ. ಗೋಲಿಬಾರ್ ಚಿತ್ರದ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.  ಹೆಚ್ಚು ಹಣ ಹೂಡಿಕೆ ಮಾಡಿ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ ಕಾರಣಕ್ಕೆ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದರು. ರಾಮು ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. 

ದೆಹಲಿಯಲ್ಲಿ `ಯಮಧರ್ಮ 350.. ಸಾವಿನ ಮನೆಯಲ್ಲಿ ಕಣ್ಣೀರಿಗೂ ಅವಕಾಶವಿಲ್ಲ!

ಚೈತ್ರದ ಪ್ರೇಮಾಂಜಲಿ ಸಿನಿಮಾ ಮೂಲಕ ಕನ್ನಡ ಚಿತ್ರ ಜಗತ್ತಿಗೆ ಪರಿಚಯವಾಗಿದ್ದ ರಾಮ ಅಧಿಪತಿ ಸಿನಿಮಾದಿಂದ‌ ನಿರ್ಮಾಪಕ ರಾಗಿ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದರು. ಅರ್ಜುನ್ ಗೌಡ ರಾಮು ನಿರ್ಮಾಣದ ಕೊನೆಯ ಸಿನಿಮಾ. ಪತ್ನಿ ಮಾಲಾಶ್ರೀಗೆ ಇನ್ನೆರಡು ಸಿನಿಮಾ ನಿರ್ಮಾಣ ಮಾಡಬೇಕು, ತಾವೇ ನಿರ್ದೇಶನ ಮಾಡಬೇಕು ಎಂಬ ಆಸೆ ಹೊಂದಿದ್ದರು. 

ನಿರ್ಮಾಪಕ ರಾಮು ನಿಧನಕ್ಕೆ ಡಿಸಿಎಂ ಶೋಕ;  ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ಕನ್ನಡದ ಸಿನಿಮಾರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ʼಲಾಕಪ್‌ಡೆತ್‌ʼ, ʼಎಕೆ47ʼ, ʼಕಲಾಸಿಪಾಳ್ಯʼದಂಥ ದುಬಾರಿ ಚಿತ್ರಗಳನ್ನು ನಿರ್ಮಿಸಿದ್ದ ರಾಮು ಅವರು ಕನ್ನಡ ಚಿತ್ರರಂಗದ ನಿರ್ಮಾಣದ ಶಕ್ತಿಯನ್ನು ತೋರಿದ್ದರು. 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದ ಅವರು, ಸ್ಯಾಂಡಲ್‌ವುಡ್‌ಗೆ ಅದ್ಧೂರಿತನವನ್ನು ತಂದುಕೊಟ್ಟಿದ್ದರು. ನಿರ್ಮಾಪಕರಾಗಿ, ವಿತರಕರಾಗಿ ಅವರು ಕನ್ನಡ ಚಿತ್ರರಂಗಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಡಿಸಿಎಂ ಸ್ಮರಿಸಿದ್ದಾರೆ.

ಇಂಥ ದುಃಖದ ಸಂದರ್ಭದಲ್ಲಿ ರಾಮು ಅವರ ಪತ್ನಿ ಮಾಲಾಶ್ರೀ, ಮತ್ತವರ ಕುಟುಂಬದವರು, ಅಭಿಮಾನಿಗಳಿಗೆ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.

ಮಾತುಗಳೇ ಬರುತ್ತಿಲ್ಲ ನಿಮ್ಮಂತಹ ನಿರ್ಮಾಪಕರು ಅದಕ್ಕೂ ಮಿಗಿಲಾಗಿ ಸಹೃದಯಿ ವ್ಯಕ್ತಿ ಇಲ್ಲ ಎಂಬುದನ್ನೇ ಅರಗಿಸಿಕೊಳ್ಳಲಾಗುತ್ತಿಲ್ಲ. ಹೇ ಕ್ರೂರಿ...

Posted by Duniya Vijay on Monday, 26 April 2021

has delivered another devastating news. Producer Ramu was a kind-hearted soul for whom making enemies was impossible. I stand with , their children and family members in this hour of grief. I beg people to be vary of and save lives. pic.twitter.com/9DlKIEnh7a

— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA)

One of the most passionate Movie Producers of KFI, Ramu Sir is no more. RIP

— Puneeth Rajkumar (@PuneethRajkumar)
click me!