ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ FIR ದಾಖಲು; ಹಾಡು ಕದ್ದಿದ್ದು ನಿಜವೇ?

By Vaishnavi ChandrashekarFirst Published Jul 15, 2024, 10:04 AM IST
Highlights

ಮತ್ತೆ ಸಂಕಷ್ಟಕ್ಕೆ ಸಿಲುಕಿದ ಸಿಂಪಲ್ ಸ್ಟಾರ್. ಪದೇ ಪದೇ ಹಾಡುಗಳನ್ನು ಕದ್ದು ಬಳಸುತ್ತಿರುವುದು ಯಾಕೆ?

ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪರಂವಾ ಸ್ಟುಡಿಯೋಸ್‌ ಅಡಿಯಲ್ಲಿ ಬ್ಯಾಚುಲರ್ ಪಾರ್ಟಿ ಸಿನಿಮಾವನ್ನು ರಕ್ಷಿತ್ ನಿರ್ಮಾಣ ಮಾಡಿದ್ದರು. ನಟ ದಿಗಂತ್, ಲೂಸ್ ಮಾದಾ ಯೋಗಿ ಹಾಗೂ ಅಚ್ಯುತ್ ಕುಮಾರ್‌ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿನಿಮಾ ಇದಾಗಿದ್ದು ದೊಡ್ಡ ಪರದೆಗಿಂತ ಓಟಿಟಿಯಲ್ಲಿ ಹೆಚ್ಚಿಗೆ ಸದ್ದು ಮಾಡಿತ್ತು. ಈಗ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. 

ಹೌದು! ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಇರುವ ಎರಡು ಹಾಡುಗಳ ವಿರುದ್ಧ ದೂರು ದಾಖಲಾಗಿದೆ. ಗಾಳಿ ಮಾತು ಹಾಗೂ ನ್ಯಾಯ ಎಲ್ಲಿದೆ ಎಂಬ ಹಾಡನ್ನು ಕದ್ದಿರುವ ಆರೋಪ ಕೇಳಿ ಬಂದಿದೆ. ನ್ಯಾಯ ಎಲ್ಲಿದೆ ಹಾಡು ಚಿತ್ರದ ಟೈಟಲ್ ಸಾಂಗ್ ಆಗಿದ್ದು, ಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆ ಎಂದು ರೋಮ್ಯಾಂಟಿಕ್ ಸಾಂಗ್ ಆಗಿದ್ದು, ಇದನು ಕದ್ದಿದ್ದಾರೆ ಎನ್ನಲಾಗಿದೆ. ಬ್ಯಾಚುಲರ್ ಪಾರ್ಟಿ ಚಿತ್ರದ ಒಟಿಟಿ ಕಾಪಿರೈಟ್ಸ್‌ ಮಾಲೀಕತ್ವ ಪಡೆದಿರುವವರು ದೂರು ನೀಡಿದ್ದಾರೆ.

Latest Videos

Bachelor Party Review ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!

ಈಗಾಗಲೆ ನವೀನ್‌ ಕುಮಾರ್‌ ಎಂಬುವವರ ಜೊತೆ ಮಾತುಕತೆ ನಡೆದಿದೆ. ಹಾಡುಗಳ ಕಾಪಿರೈಟ್‌ ಪಡೆದು ಮಾರಾಟ ಮಾಡುವ ಖ್ಯಾತ ಬ್ಯುಸಿಸೆನ್‌ ಮ್ಯಾನ್‌ ನವೀನ್‌ ಕುಮಾರ್ ಈಗ ಅನುಮತಿ ಇಲ್ಲದೆ ಹಾಡನ್ನು ಚಿತ್ರದಲ್ಲಿ ಬಳಸಿದ್ದಾರೆ ಎಂದು ಯಶವಂತಪುತ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಹಿಂದೆ  ಕಿರಿಕ್ ಪಾರ್ಟಿ ಚಿತ್ರದಲ್ಲೂ ಹಂಸಲೇಖರ ಒಂದು ಟ್ಯೂನ್‌ ಕದ್ದಿದ್ದರು ಎಂದು ಆರೋಪಿಸಲಾಗಿತ್ತು. ಯಾಕೆ ರಕ್ಷಿತ್ ಶೆಟ್ಟಿ ಚಿತ್ರಗಳಲ್ಲಿ ಕದ್ದಿರುವ ಹಾಡುಗಳು ಹೆಚ್ಚಿರುತ್ತದೆ ಎಂದು ನೆಟ್ಟಿಗರು ಪ್ರಶ್ನೆಸುತ್ತಿದ್ದಾರೆ.

ಹಿಂದು ಹುಡುಗನ ಕೈ ಹಿಡಿದ ಮೇಲೆ ಕೊರಗಜ್ಜನ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಕತ್ರಿನಾ ಕೈಫ್; ಕೋಲಾ ನೋಡಿದ್ರಾ?

ಸರಿ ಇಲ್ಲದ ಸಂಬಂಧದ ವಿಷಾದ, ದೂರಾದ ತಂದೆ ಮಗನ ಮಧ್ಯದ ಬಾಂಧವ್ಯ, ಸ್ನೇಹಿತರ ನಡುವಿನ ತರ್ಲೆ ತಮಾಷೆ ಸಂತೋಷ ಸೇರಿರುವ ಕಥನವಿದು. ಇಲ್ಲಿ ಎಲ್ಲಕ್ಕೂ ತಮಾಷೆಯ ಹೊದಿಕೆ ಇದೆ. ಎಲ್ಲಕ್ಕೂ ನಗುವಿನ ಲೇಪ ಇದೆ. ಹಾಗಾಗಿ ಇದೊಂದು ತಮಾಷೆಯಿಂದ ಆರಂಭವಾಗಿ ತಮಾಷೆಯಲ್ಲೇ ಮುಗಿಯುವ ಸಿನಿಮಾ ಎಂದು ರಾಜೇಶ್ ಶೆಟ್ಟಿ ವಿಮರ್ಶೆ ಮಾಡಿದ್ದರು. 

click me!