ಭಾರತಿ ಬಿಟ್ಟು ಬೇರೆ ಸಹನಟಿ ಒಬ್ರನ್ನು ಮದ್ವೆ ಆಗಿದ್ರಾ ವಿಷ್ಣುವರ್ಧನ್?

By Contributor Asianet  |  First Published Jul 14, 2024, 10:05 PM IST

ಸಿನಿಮಾರಂಗದಲ್ಲಿ ಈ ಗಾಳಿಸುದ್ದಿ ಅಥವಾ ಗಾಸಿಪ್ ಎನ್ನುವುದು ಸಾಮಾನ್ಯವಾಗಿ ಯಾರನ್ನೂ ಬಿಟ್ಟಿಲ್ಲ. ಅದರಲ್ಲೂ ವಿಷ್ಣುವರ್ಧನ್ ಅವರಂಥ ಸೂಪರ್ ಸ್ಟಾರ್ ಆಗಿದ್ದರಂತೂ ಮುಗಿದೇ ಹೋಯ್ತು. ಯಾರ ಜೊತೆ ಕುಂತರೂ ನಿಂತರೂ, ಮಾತನಾಡಿದರೂ ಕೊನೆಗೆ ನೋಡಿದರೂ ಮುಗಿಯಿತು. ಹಾಗೆಯೇ ಹರಿದಾಡಿದ ಗಾಳಿಸುದ್ದಿ ಬಗ್ಗೆ ಇಲ್ಲಿ ಮೆಲಕು ಹಾಕಲಾಗಿದೆ. 


ನಟರಾದ ವಿಷ್ಣುವರ್ಧನ್, ರಾಜ್‌ಕುಮಾರ್ ಅವರೆಲ್ಲರೂ ಸ್ಟಾರ್‌ಗಳಾಗಿದ್ದ ಕಾಲದಲ್ಲಿ ಪತ್ರಕರ್ತರು ಚಿತ್ರದ ಶೂಟಿಂಗ್ ಸ್ಥಳಗಳಿಗೇ ಹೋಗಿ ಅಲ್ಲಿ ಕಲಾವಿದರ ಸಂದರ್ಶನ ತೆಗೆದುಕೊಳ್ಳುತ್ತಿದ್ದರು. ಅಂತ ಒಂದು ಸಮಯದಲ್ಲಿ ನಟ ವಿಷ್ಣುವರ್ಧನ್ ಅವರಿಗೆ ಮಾಧ್ಯಮದ ಮಿತ್ರರೊಬ್ಬರು ಸಾಕಷ್ಟು ಧೈರ್ಯ ತಂದುಕೊಂಡು 'ಸರ್, ನಿಮಗೆ ನಾನೊಂದು ಪ್ರಶ್ನೆ ಕೇಳಬೇಕು. ನೀವು ಸಹನಟಿಯೊಬ್ಬರನ್ನು ಮದುವೆಯಾಗಿ, ಅವರಿಗೆ ಫ್ಲಾಟ್ ಸಹ ಕೊಡಿಸಿದ್ದೀರಿ ಎಂದು ಗಾಳಿ ಸುದ್ದಿಯಿದೆ. ಇದಕ್ಕೆ ಏನಂತೀರಾ?' ಎಂದು ಕೇಳಿದ್ದರಂತೆ. 

ಅದಕ್ಕೆ ಸ್ವಲ್ಪವೂ ಕೋಪಗೊಳ್ಳದೇ, ಅಂಜಿಕೊಳ್ಳದೇ ನಟ ವಿಷ್ಣುವರ್ಧನ್ ಅವರು 'ನೀವೇ ಗಾಳಿ ಸುದ್ದಿ ಅಂತ ಹೇಳ್ತಿದೀರಾ. ಮತ್ಯಾಕೆ ನನ್ನ ಕೇಳ್ತಿದೀರ?' ಎಂದು ಕೇಳುತ್ತಾರೆ. ನಾನು ಈ ರೀತಿ ರೂಮರ್‌ಗಳಿಗೆ ಯಾವತ್ತೂ ಬೆಲೆ ಕೊಟ್ಟಿಲ್ಲ, ತಲೆನೂ ಕೆಡಿಸ್ಕೊಂಡಿಲ್ಲ. ನಾನು ಅದಕ್ಕೆಲ್ಲಾ ಇಮ್ಯೂನ್ ಆಗ್ಬಿಟ್ಟಿದೀನಿ,' ಎಂದೇ ವಿಶ್ವಾಸದಿಂದ ಹೇಳಿದ್ದಾರೆ.

Tap to resize

Latest Videos

ಯಶ್‌ಗೆ ದುಬಾರಿ ವಾಚ್ ಗಿಫ್ಟ್ ಕೊಟ್ರಾ ಅಂಬಾನಿ ಫ್ಯಾಮಿಲಿ? ಬೆಲೆ ಎಷ್ಟು ಇರ್ಬಹುದು ಅನ್ನೋದೇ ಚರ್ಚೆ ಗುರೂ..!

ಹೀಗೆ ಆ ಪತ್ರಕರ್ತರೊಂದಿಗೆ ಮುಂದುವರೆಸಿದ ನಟ ವಿಷ್ಣುವರ್ಧನ್ ಅವರು 'ಒಳ್ಳೇ ಸ್ನೇಹನಾ ಫ್ಲಾಟ್ ತನ್ಕ ತಂದಿಟ್ಟಿದಾರೆ. ಆ ಹುಡುಗಿ ಇನ್ನೂ ಓದ್ತಾ ಇದಾಳೆ. ಸಿನಿಮಾದಲ್ಲಿ ಆಸಕ್ತಿ ಕೂಡ ಇಲ್ಲ. ಏನೋ ಒಂದ್ ಸಿನಿಮಾದಲ್ಲಿ ಚಾನ್ಸ್ ಸಿಕ್ತು ಅಂತ ಸಿನಿಮಾದಲ್ಲಿ ನಟಿಸಿದಾಳೆ ಅಷ್ಟೇ. ಮತ್ತೇನೂ ಇಲ್ಲ,' ಎಂದು ಹೇಳುತ್ತಾರೆ. ಅದಕ್ಕೆ ಪತ್ರಕರ್ತರು, 'ಹಾಗಿದ್ರೆ, ನೀವು ಈ ಸಿನಿಮಾ ನಿರ್ಮಾಪಕರಿಗೆ ಇದೇ ಹಿರೋಯಿನ್ ಹಾಕ್ಕೊಳಿ ಅಂತ ಹೇಳಿರ್ಬೇಕು, ಅದಕ್ಕೇ ಈ ವದಂತಿ ಹಬ್ಬಿರ್ಬೇಕು,' ಎಂದು ಮತ್ತಷ್ಟು ಉಪ್ಪ ಖಾರ ಸೇರಿಸುವಂತೆ ಕೇಳುತ್ತಾರೆ. . 

ಆಗಲೂ ಸ್ವಲ್ಪವೂ ಸಹನೆ ಕಳೆದುಕೊಳ್ಳದ ಸಾಹಸಸಿಂಹ ವಿಷ್ಣು ಅವರು 'ನಾನು ಯಾವುದೇ ಸಿನಿಮಾಗೂ ಇದೇ ಹೀರೋಯಿನ್ ಹಾಕ್ಕೊಳ್ಳಿ, ಇದೇ ಡೈರೆಕ್ಟರ್ ಹಾಕ್ಕೊಳ್ಳಿ ಅಂತ ಹೇಳೂ ಇಲ್ಲ, ಒತ್ತಾಯ ಮಾಡಿಯೂ ಇಲ್ಲ. ಅದು ನನ್ ಕೆಲಸವೂ ಅಲ್ಲ. ಇಂತಹ ವಿಷ್ಯದಲ್ಲಿ ನಾನ್ಯಾಕೆ ತಲೆ ಹಾಕ್ಲಿ? ಇಂಥ ಒಂದು ವಿಷ್ಯ ಎಲ್ಲಿಂದ ಬಂದು ಹಬ್ಬಿತೋ ಗೊತ್ತಿಲ್ಲ. ನಿಮ್ಗೆ ಅಷ್ಟು ಕೇಳ್ಬೇಕು ಅಂತಿದ್ರೆ ನೀವು ನಮ್ ಭಾರತಿಯವ್ರನ್ನೇ ಕೇಳಿ. ಅವ್ರಿಗೆ ನನ್ ಬಗ್ಗೆ ಎಲ್ಲಾನೂ ಗೊತ್ತಿದೆ, ನಿಮ್ಗೆ ಎಲ್ಲದಕ್ಕೂ ಅವರಿಂದನೇ ಉತ್ತರ ಸಿಗುತ್ತೆ,' ಅಂತಾರೆ. 

'ಪಾಪ, ಇವೆಲ್ಲಾ ಅವ್ರನ್ನ ಯಾಕೆ ಕೇಳೋದು ಅಂತ ಪತ್ರಕರ್ತರು ಹೇಳಲು 'ಹಾಗಲ್ಲ, ನನ್ ಬಗ್ಗೆ ಅವ್ರಿಗೆ ಎಲ್ಲಾನೂ ಗೊತ್ತಿದೆ. ನನ್ ಹತ್ತಿರದವ್ರು ಅಂದ್ರೆ ಭಾರತಿಯವ್ರನ್ನ ಕೇಳಿದ್ರೆ ನನ್ ಬಗ್ಗೆ ನಿಮ್ಗೆ ಎಲ್ಲಾ ವಿಷ್ಯನೂ ಗೊತ್ತಾಗುತ್ತೆ. ಮತ್ತೆ ನನ್ನ ಹತ್ರ ಏನೂ ಕೇಳ್ಬೇಕಾಗಿಯೇ ಇಲ್ಲ,' ಎಂದು ಡಾ ವಿಷ್ಣುವರ್ಧನ್ ಅವ್ರು ಉತ್ತರ ಕೊಡ್ತಾರೆ. 

ಟೈಗರ್ ಪ್ರಭಾಕರ್ ಅವ್ರನ್ನ ನೋಡಿದ್ದು ಅಪ್ಪ ತೀರಿಕೊಂಡಾಗ; ಭಾವುಕರಾಗಿದ್ರು, ಬಾಸ್ ಬಾಸ್ ಅಂತಿದ್ರು!

ಹೀಗೆ, ಸಿನಿಮಾರಂಗದಲ್ಲಿ ಈ ಗಾಳಿಸುದ್ದಿ ಅಥವಾ ಗಾಸಿಪ್ ಎನ್ನುವುದು ಸಾಮಾನ್ಯವಾಗಿ ಯಾರನ್ನೂ ಬಿಟ್ಟಿಲ್ಲ. ಅದರಲ್ಲೂ ವಿಷ್ಣುವರ್ಧನ್ ಅವರಂಥ ಸೂಪರ್ ಸ್ಟಾರ್ ಆಗಿದ್ದರಂತೂ ಮುಗಿದೇ ಹೋಯ್ತು. ಯಾರ ಜೊತೆ ಕುಂತರೂ ನಿಂತರೂ, ಮಾತನಾಡಿದರೂ ಕೊನೆಗೆ ನೋಡಿದರೂ ಮುಗಿಯಿತು, ಅಲ್ಲೊಂದು ಗಾಳಿ ಸುದ್ದಿ ರೆಡಿಯಾಯ್ತು ಅಂತಲೇ ಲೆಕ್ಕ. ಆದರೆ, ಅನೈತಿಕ ಸಂಬಂಧಕ್ಕೆ ಎಂದೂ ಮನಸ್ಸು ಮಾಡದ ನಟ ವಿಷ್ಣುವರ್ಧನ್‌ನಂದ ವ್ಯಕ್ತಿತ್ವದ ನಟರು ಯಾವತ್ತೂ ಇಂಥ ತೆಲೆ ಬುಡ ಇಲ್ಲದ ಗಾಳಿ ಸುದ್ದಿಗೆ ರಿಯಾಕ್ಟೂ ಮಾಡುತ್ತಲೂ ಇರಲಿಲ್ಲ, ತಲೆಯನ್ನು ಕೆಡಿಸಿಕೊಳ್ಳುತ್ತಿರಲಿಲ್ಲ. ಹಾಗಂಥ ಯಾರಾದ್ರೂ ಆ ವಿಷಯ ಎತ್ತಿದ್ದರೆ ಸಹನೆ ಕೊಳ್ಳದೇ ಉತ್ತರಿಸುತ್ತಿದ್ದು ದೊಡ್ಡ ವಿಷಯವಾಗಿತ್ತು. 

ಭಾರತಿಯವರನ್ಜು ಮದುವೆ ಮಾಡಿಕೊಂಡಾಗಿನಿಂದಲೂ ಯಾವುದೇ ಬೇರೆ ನಟಿಯರ ಪ್ರೇಮಪಾಶಕ್ಕೆ ದಾದಾ ವಿಷ್ಣುವರ್ಧನ್ ಸಿಕ್ಕಿಹಾಕಿಕೊಳ್ಳಲೇ ಇಲ್ಲ. ಜೊತೆಗೆ, ಅಂತಹ ಗಾಳಿ ಸುದ್ದಿಗಳನ್ನು ಚೆನ್ನಾಗಿ ಹ್ಯಾಂಡಲ್‌ ಮಾಡುವುದನ್ನು ನಟ ವಿಷ್ಣುವರ್ಧನ್ ಅವರು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಯಾವತ್ತೂ ಅಂತಹ ಪ್ರಶ್ನೆಗಳಿಗೆ ನಟ ವಿಷ್ಣುವಧ್ನ್ ಕೂಲಾಗಿ ಕೋಪ ಮಾಡಿಕೊಳ್ಳದೇ ಉತ್ತರ ಕೊಡುತ್ತಿದ್ದರು. ಒಟ್ಟಿನಲ್ಲಿ, ಇಂಥ ಮೇರು ನಟರ ಬದುಕಿನಲ್ಲೂ ಹೀಗೊಂದು ಗಾಳಿ ಸುದ್ದಿ ಬಂದಿತ್ತು. ಆದರೆ ಅದು ಅಪ್ಪಟ ಸುಳ್ಳೆಂಬುವದು ಮಾತ್ರ ಸತ್ಯ.ಇಂಥ ಮಹಾನ್ ವ್ಯಕ್ತಿತ್ವ ಇರೋ ನಟರೂ ನಮ್ಮ ನಡುವೆ ಇದ್ದರೆಂಬುವುದು ನಿಜಕ್ಕೂ ಕನ್ನಡಿಗರು ಹೆಮ್ಮೆ.. 

click me!