
ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚಂಟ್ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿರುವುದು ಗೊತ್ತೇ ಇದೆ. ಈ ಸಮಾರಂಭಕ್ಕೆ ಗಣ್ಯಾತಿಗಣ್ಯರು ಬಂದಿದ್ದಾರೆ. ವಿಶೇಷ ಆಮಂತ್ರಣದ ಮೇರೆಗೆ ಬಹಳಷ್ಟು ವಿಐಪಿಗಳು ಅಂಬಾನಿ ಕುಟುಂಬದ ಮದುವೆಗೆ ಆಗಮಿಸಿದ್ದಾರೆ. ಕನ್ನಡದ ಕೆಜಿಎಫ್ ಖ್ಯಾತಿಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಾಗೂ ರಾಧಿಕಾ ಪಂಡಿತ್ ಜೋಡಿ (Radhika Pandit) ಈ ಮದುವೆಯಲ್ಲಿ ಅಕ್ಷರಶಃ ಮಿಂಚಿದ್ದಾರೆ. ತಮ್ಮ ಹೊಸ ಹೇರ್ ಸ್ಟೈಲ್‌ನಲ್ಲಿ ಸಖತ್ ಮಿಂಚುತ್ತಿದ್ದ ನಟ ಯಶ್, ಅಲ್ಲಿ ಸೇರಿದ್ದವರ ಗಮನ ಸೆಳೆದರು.
ನಟ ಯಶ್ ಅವರಿಗೆ ಅಂಬಾನಿ ಫ್ಯಾಮಿಲಿಯವರು ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚಂಟ್ ಮದುವೆ ಪ್ರಯುಕ್ತ ದುಬಾರಿ ಬೆಲೆಯ ಕೈ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ನಟ ಯಶ್ ಅವರು ಇದನ್ನು ಅಧಿಕೃತವಾಗಿ ಹೇಳದಿದ್ದರೂ ಕೂಡ ಸಿಕ್ಕ ಮಾಹಿತಿ ಪ್ರಕಾರ ಅನಂತ್ ಅಂಬಾನಿ ಮದುವೆಯಲ್ಲಿ ನಟ ಯಶ್ ಅವರಿಗೆ ಚಾಚದ ಗಿಫ್ಟ್ ಕೊಟ್ಟಿದ್ದು ಅದರ ಅಂದಾಜು ಬೆಲೆ ಬರೋಬ್ಬರಿ 2 ಕೋಟಿ ರೂಪಾಯಿ ಆಗಿರಬಹುದು ಎನ್ನಲಾಗುತ್ತಿದೆ. ಸಮಾರಂಭದಲ್ಲಿ ನಟ ಯಶ್ ಅವರು ತಮಿಳು ನಿರ್ದೇಶಕ ಅಟ್ಲೀ ಜೊತೆ ಮಾತನಾಡುತ್ತಿರುವುದು ಹೈಲೈಟ್ ಆಗಿದೆ.
ಟೈಗರ್ ಪ್ರಭಾಕರ್ ಅವ್ರನ್ನ ನೋಡಿದ್ದು ಅಪ್ಪ ತೀರಿಕೊಂಡಾಗ; ಭಾವುಕರಾಗಿದ್ರು, ಬಾಸ್ ಬಾಸ್ ಅಂತಿದ್ರು!
ಬೆಲೆ ಎಷ್ಟೇ ಆಗಿದ್ದರೂ ನಟ ಯಶ್ ಅಂಬಾನಿ ಕುಟುಂಬದ ಗಿಫ್ಟ್ ಪಡೆದಿರುವುದು ಕನ್ನಡನಾಡಿಗೆ ಹೆಮ್ಮೆಯೇ ಸೈ. ಏಕೆಂದರೆ ಭಾರತ ಹಾಗೂ ಇಂಟರ್‌ನ್ಯಾಷನಲ್ ಲೆವಲ್‌ನಲ್ಲಿ ಹೆಸರು ಮಾಡಿರುವ, ವಿವಿಐಪಿಗಳಿಗೆ ಮಾತ್ರವೇ ಈ ಮದುವೆಗೆ ಇನ್ವಿಟೇಶನ್ ಕೊಟ್ಟಿರುವುದು. ಅದರಲ್ಲಿ ನಮ್ಮ ಕನ್ನಡದ ಸ್ಟಾರ್ ನಟ ಯಶ್ ಸಹ ಸೇರಿರುವುದು ಯಶ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ ಎಂಬುದನ್ನು ಪತ್ಯೇಕವಾಗಿ ಹೇಳಬೇಕಿಲ್ಲ. ನಟ ಯಶ್ ಅವರು ಈ ಬಗ್ಗೆ ಯಾವತ್ತು ಅಧಿಕೃತವಾಗಿ ಹೇಳಿಕೊಳ್ಳಬಹುದು ಎಂಬುದನ್ನು ಅವರ ಫ್ಯಾನ್ಸ್ ಕಾಯುತ್ತಲೇ ಇರುತ್ತಾರೆ.
ಏನಾಗ್ತಿದೆ ಶಿವಾ.. ಮೋಡ ಕವಿದ ವಾತಾವರಣ, ಪ್ರಿಯಾಂಕಾ-ನಿಕ್ ದಾಂಪತ್ಯಕ್ಕೆ ಬಿತ್ತಾ ಕಾಕದೃಷ್ಟಿ?
ಇನ್ನು, ಅನಂತ್ ಅಂಬಾನಿ ಹಾಗು ರಾಧಿಕಾ ಮಚ್ಂಟ್ ಮದುವೆ ಸಮಾರಂಭಕ್ಕೆ ಆಮಂತ್ರಿತರಾಗಿ ಕತ್ರಿನಾ ಕೈಫ್, ವಿಕ್ಕಿ ಕೌಶಾಲ್, ದೀಪಿಕ
ಆ ಪಡುಕೋಣೆ, ರಣವೀರ್ ಸಿಂಗ್, ಶಾರುಖ್ ಖಾನ್ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿ ವಧುವರರಿಗೆ ಶುಭ ಹಾರೈಸಿದ್ದಾರೆ. ಬಹಳಷ್ಟು ಗಣ್ಯರು ಹಾಜರಿದ್ದು ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್ ಜೋಡಿಗೆ ಹಾರೈಸಿದ್ದಾರೆ. ದೇಶದ ಗಣ್ಯ ಫ್ಯಾಮಿಲಿಯ ಆದರಾತಿಥ್ಯ ಸ್ವೀಕರಿಸಿ ಖುಷಿಗೊಂಡು ಬಂದಿದ್ದಾರೆ. ಅಂದಹಾಗೆ, ಈ ಮದುವೆ ಇತಿಹಾಸ ಸೃಷ್ಟಿಸಲಿದೆ ಎನ್ನಲಾಗುತ್ತಿದ್ದು, ಅದ್ದೂರಿಯಲ್ಲಿ ಅದ್ದೂರಿ ಮದುವೆ ಎನ್ನಬಹುದು. ಒಟ್ಟಿನಲ್ಲಿ, ಕನ್ನಡದ ಸ್ಟಾರ್ ಜೋಡಿ ಯಶ್-ರಾಧಿಕಾ ಪಂಡಿತ್ ಜೋಡಿ ಕೂಡ ಹಾಜರಿ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.