'ಗುಲಾಲ್‌.ಕಾಂನ'ಲ್ಲಿ ಬಿಗ್ ಬಾಸ್‌ ದಿವಾಕರ!

By Kannadaprabha NewsFirst Published Nov 18, 2019, 9:12 AM IST
Highlights

ಸಾವು ಮತ್ತು ಬದುಕು... ಇವೆರಡು ಕಷ್ಟ ಮತ್ತು ಸುಖವನ್ನು ನೀಡುತ್ತವೆ. ಒಬ್ಬ ಮನುಷ್ಯನಲ್ಲಿ ಇವೆರಡು ಇದ್ದೇ ಇರುತ್ತದೆ ಎನ್ನುವ ಒಂಚೂರು ಫಿಲಾಸಫಿಯೊಂದಿಗೆ ‘ಗುಲಾಲ್.ಕಾಂ’.

ಹಾಡುಗಳನ್ನು ಬರೆದುಕೊಂಡಿದ್ದ ಶಿವು ಜಮ್ಮುಖಂಡಿ ನಿರ್ದೇಶನ ಮಾಡಿರುವ ಸಿನಿಮಾ. ಮೊನ್ನೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ತಬಲನಾಣಿ, ಬಿಗ್‌ಬಾಸ್‌ನ ದಿವಾಕರ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದಕಾಲಿ, ಮಲ್ಲೇಶ್ ಸೂರ್ಯ, ಶಂಕರ ಅಂಬಿಗೇರಿ, ಸೋನು ಪಾಟೀಲ್ ಸೇರಿದಂತೆ ಒಟ್ಟಾರೆ 120 ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ.

ಬಿಗ್ ಬಾಸ್ ಇತಿಹಾಸದಲ್ಲೇ ಹೇಳದ ಗುಟ್ಟು ರಟ್ಟು ಮಾಡಿದ ಕಿಚ್ಚ!

ಚಿತ್ರದ ಒಂದು ಹಾಡು ಪ್ರದರ್ಶನ ಮಾಡುವ ಮೂಲಕ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಚಿತ್ರದ ಆಡಿಯೋ ಬಿಡುಗಡೆಯ ದಿನ ದಿ. ಶಂಕರ್‌ನಾಗ್ ಹುಟ್ಟುಹಬ್ಬ. ತಮ್ಮ ಚಿತ್ರವನ್ನು ಶಂಕರ್‌ನಾಗ್ ಅವರಿಗೆ ಅರ್ಪಿಸುವ ಮೂಲಕ ಚಿತ್ರದ ಆಡಿಯೋ ಬಿಡುಗಡೆ ಮಾಡಿಕೊಂಡರು ಶಿವು ಜಮ್ಮುಖಂಡಿ. ಅವರೇ ಚಿತ್ರಕ್ಕೆ ಹಾಡು, ಸಂಗೀತ ಕೂಡ ಮಾಡಿದ್ದಾರೆ.

‘ಬೇಕಾದರೆ ದೀಪಿಕಾ ಟೀ ಶರ್ಟ್ ಒಳಗೂ ಕೈಹಾಕಲು ಸಿದ್ಧ’

ಪ್ರತಿಯೊಬ್ಬರ ಬದುಕಿನಲ್ಲಿ ನೋವು-ಸಾವು, ಕಷ್ಟ-ಸುಖ ಇರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಏರಿಸ್ತಾರೆ. ಆ ಒಂದು ಪಯಣವೇ ಶೀರ್ಷಿಕೆಯಾಗಿದೆ. ದೇವರು ಪ್ರತಿಯೊಬ್ಬರಿಗೂ ಶಕ್ತಿ ಕೊಟ್ಟಿರುತ್ತಾನೆ. ಅದನ್ನು  ಗುರುತಿಸಲು ಗುರು ಅಂತ ಒಬ್ಬರು ಇರಬೇಕು. ಕೋಲಾರ, ಬೆಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ ಕಡೆಯಿಂದ ಐದು ಹುಡುಗರು ಗುರುವನ್ನು ಆದರ್ಶವಾಗಿಟ್ಟುಕೊಂಡು ಅವರೊಂದು ಆಲ್ಬಂ ರಚನೆ ಮಾಡುತ್ತಾರೆ. ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಮೇಲೆ ಕತೆ
ತೆರೆದುಕೊಳ್ಳುತ್ತದೆ... ಇದು ಚಿತ್ರದ ಬಗ್ಗೆ ನಿರ್ದೇಶಕರು ಹೇಳಿದ ವಿವರಣೆ.

ಕಂಗಳು ಕಂಡ ಕನಸುಗಳು: ಚೈತ್ರಾ ವಾಸುದೇವನ್ ಬಿಗ್ ಬಾಸ್ ಅನುಭವಗಳು!

ನೃತ್ಯ ಹೈಟ್ ಮಂಜು, ಛಾಯಾಗ್ರಹಣ ಮಂಜು ಅವರದ್ದು. ಸರ್ಜನ್ ಆಗಿರುವ ಗೋಪಾಲಕೃಷ್ಣ ಹವಾಲ್ದಾರ ಹಣ ಹೂಡುವ ಜೊತೆಗೆ ‘ಹುಡುಗಿ ಹುಡುಗಿ’ ಗೀತೆಗೆ ಧ್ವನಿಯಾಗಿದ್ದು, ಇವರೊಂದಿಗೆ ಧನಂಜಯ್ ಹೆಚ್ ನಿರ್ಮಾಣದಲ್ಲಿ ಪಾಲುದಾರರು. ನಟ, ನಿರ್ದೇಶಕ ಸಂದೀಪ್ ಮಲಾನಿ, ಹಸನ್ ಷರೀಪ್‌ಚಿತ್ರತಂಡಕ್ಕೆ ಶುಭ ಹಾರೈಸಿದರು.

click me!