ಯಶ್ ಅಭಿಮಾನಿಗಳ ಅಭಿಯಾನಕ್ಕೆ ರಾಧಿಕಾ, ಶಾನ್ವಿ ಸಾಥ್!

Published : Nov 17, 2019, 10:53 AM ISTUpdated : Jan 18, 2022, 06:03 PM IST
ಯಶ್ ಅಭಿಮಾನಿಗಳ ಅಭಿಯಾನಕ್ಕೆ ರಾಧಿಕಾ, ಶಾನ್ವಿ ಸಾಥ್!

ಸಾರಾಂಶ

ಯಶ್ ಹುಟ್ಟುಹಬ್ಬಕ್ಕೆ 50 ದಿನ ಇರುವಾಗಲೇ ಅಭಿಮಾನಿಗಳಿಂದ ವಿಶೇಷ ಅಭಿಯಾನ | ಪರಿಸರ ಮಾಲಿನ್ಯ ತಡೆಗಟ್ಟುವ ಬಗ್ಗೆ ಅಭಿಮಾನಿಗಳಿಂದ ಅಭಿಯಾನ | ಈ ಅಭಿಯಾನಕ್ಕೆ ರಾಧಿಕಾ ಪಂಡಿತ್, ಶಾನ್ವಿ ಶ್ರೀವಾಸ್ತವ್ ಸಾಥ್ 

ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಸುಲ್ತಾನ್ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಅವರಿಗಿಂತ ಹೆಚ್ಚಾಗಿ ಅಭಿಮಾನಿಗಳೇ ಸೆಲಬ್ರೇಟ್ ಮಾಡುತ್ತಿದ್ದಾರೆ. ಯಶ್ ಹುಟ್ಟುಹಬ್ಬ ಜನವರಿ 8. ಇನ್ನೂ 50 ದಿನಗಳು ಬಾಲಿ ಇರುವಾಗಲೇ ಅಭಿಮಾನಿಗಳಲ್ಲಿ ಬರ್ತಡೇ ಸಂಭ್ರಮ ಶುರುವಾಗಿದೆ. ಯಶ್‌ಗಾಗಿ Be a Part or Solution but not pollution save water plants trees go green ಎನ್ನುವ ಅಭಿಯಾನವನ್ನು ಅಭಿಮಾನಿಗಳು ಶುರು ಮಾಡಿದ್ದಾರೆ.  ಇದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗುತ್ತಿದೆ. 

 

ಈ ಅಭಿಯಾನಕ್ಕೆ ಶಾನ್ವಿ ಶ್ರೀವಾಸ್ತವ್ ಕೂಡಾ ಸಾಥ್ ನೀಡಿದ್ದಾರೆ.  ನಮಸ್ಕಾರ...  ರಾಕಿಂಗ್ ಸ್ಟಾರ್ ಯಶ್ ಸಾರ್ ಅಭಿಮಾನಿಗಳಿಗೆಲ್ಲಾ.. ಯಶ್ ಸಾರ್ ಅವ್ರ ಯೋಚನೆ- ಯೋಜನೆ ಅವ್ರ ಮಾರ್ಗ ನಮಗೆಲ್ಲಾ ಸ್ಫೂರ್ತಿದಾಯಕ. ಅವ್ರ ಹಾದಿಯಲ್ಲಿ ನಡಿತಿರೋ ಅವ್ರ ಫ್ಯಾನ್ಸ್‌ ಆದ ನೀವು ಅವರ ಹುಟ್ಟುಹಬ್ಬವನ್ನು ಆಚರಿಸ್ತಿರೋ ರೀತಿ ಹೆಮ್ಮೆ ಅನಿಸ್ತದೆ. ಯಶ್ ಅವರ ಬರ್ತಡೇಗೂ 50 ದಿನ ಮೊದಲು ಅಂದ್ರೆ 50 ನೇ ದಿನವಾದ ಇಂದಿನಿಂದ ಜನವರಿ 8 ರವರೆಗೂ ನೀವು ಮಾಡ್ತಿರೋ ಈ Be a Part of solution but not pollution save water plants trees go Green ಅಮೂಲ್ಯವಾದ ಅಭಿಯಾನಕ್ಕೆ ನನ್ನನ್ನೂ ಭಾಗಿಯಾಗಿಸಿದ್ದಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಧನ್ಯವಾದಗಳನ್ನು ಹೇಳ್ತಾ ಈ ಪೋಸ್ಟರ್‌ನ ಪೋಸ್ಟ್ ಮಾಡ್ತಾ ಇದೀನಿ' ಎಂದು ಬರೆದುಕೊಂಡಿದ್ದಾರೆ. 

ಯಶ್- ಶಾನ್ವಿ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. 

ಇದೇ ರೀತಿ ರಾಧಿಕಾ ಯಶ್ ಕೂಡಾ ಸಾಥ್ ನೀಡಿದ್ದಾರೆ. ಕಾಮನ್ ಡಿಪಿಯನ್ನು ಶೇರ್ ಮಾಡಿಕೊಂಡಿದ್ದಾರೆ. 'ಹುಟ್ಟುಹಬ್ಬ ಬರೀ ಒಂದು ಸಂಭ್ರಮಾಚರಣೆಯಲ್ಲ. ಹೊಸ ಕ್ರಾಂತಿಯನ್ನು ಹುಟ್ಟುಹಾಕುವುದಕ್ಕೆ ಇದೊಂದು ಸುಸಂದರ್ಭ. ಯಶ್‌ಗೆ ಪ್ರೀತಿ ತೋರುತ್ತಿರುವ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!