ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮದ ಜತೆ ಕೈ ಜೋಡಿಸದ ಪ್ರಕಾಶ್ ರಾಜ್!

Published : Sep 29, 2023, 02:25 PM ISTUpdated : Sep 29, 2023, 02:28 PM IST
ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮದ ಜತೆ ಕೈ ಜೋಡಿಸದ ಪ್ರಕಾಶ್ ರಾಜ್!

ಸಾರಾಂಶ

ಕಾವೇರಿ ಹೋರಾಟ (Cauvery Water) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದೇ ವಾರದಲ್ಲಿ ಕಾವೇರಿ ನೀರಿಗಾಗಿ ಎರಡು ಬಂದ್ ಆಗಿದೆ. ಇದೀಗ ಬೆಂಗಳೂರಿನಲ್ಲಿ ತಮಿಳು ನಟ ಸಿದ್ಧಾರ್ಥ್‌ ಸುದ್ದಿಗೋಷ್ಠಿಗೆ 'ಕರವೇ ಸ್ವಾಭಿಮಾನಿ ಸೇನೆ' ಕಡೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಟ ಪ್ರಕಾಶ್ ರಾಜ್‌ ಕನ್ನಡಿಗರ ಪರವಾಗಿ ಕ್ಷಮೆ ಕೇಳಿದ್ದಾರೆ. 

ಕನ್ನಡಿಗ, ನಟ ಪ್ರಕಾಶ್ ರಾಜ್ (ಪ್ರಕಾಶ್ ರೈ) ಇಂದು (29 ಸೆಪ್ಟೆಂಬರ್ 20203) ಕನ್ನಡ ಚಿತ್ರದ್ಯೋಮ ಹಮ್ಮಿಕೊಂಡಿರುವ ಕಾವೇರಿ ನದಿ ನೀರಿನ ಹೋರಾಟ ಚಳುವಳಿ'ಗೆ ಕೈ ಜೋಡಿಸಿಲ್ಲ. ನಿನ್ನೆ ತಮಿಳು ನಟ ಸಿದ್ಧಾರ್ಥ್ (Siddharth)ಅವರಿಗೆ ಸಪೋರ್ಟ್‌ ಮಾಡಿ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರೈ ಈ ಬಗ್ಗೆ ಹಲವರ ವಿರೋಧ ಅನುಭವಿಸಿದ್ದರು. ಇದೀಗ ಕನ್ನಡ ಚಿತ್ರೋದ್ಯಮದ ಜತೆ ಹೆಜ್ಜೆ ಹಾಕದ ಪ್ರಕಾಶ್ ರಾಜ್ ನಡೆ ಖಂಡಿತವಾಗಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. 

ಕಾವೇರಿ ಹೋರಾಟ (Cauvery Water) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದೇ ವಾರದಲ್ಲಿ ಕಾವೇರಿ ನೀರಿಗಾಗಿ ಎರಡು ಬಂದ್ ಆಗಿದೆ. ಇದೀಗ ಬೆಂಗಳೂರಿನಲ್ಲಿ ತಮಿಳು ನಟ ಸಿದ್ಧಾರ್ಥ್‌ ಸುದ್ದಿಗೋಷ್ಠಿಗೆ 'ಕರವೇ ಸ್ವಾಭಿಮಾನಿ ಸೇನೆ' ಕಡೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಟ ಪ್ರಕಾಶ್ ರಾಜ್‌ ಕನ್ನಡಿಗರ ಪರವಾಗಿ ಕ್ಷಮೆ ಕೇಳಿದ್ದಾರೆ. ಈ ಸಂಗತಿ ಈಗ ಪ್ರಕಾಶ್‌ ರಾಜ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರೋದ್ಯಮದ ಭಾಗವಾಗಿರುವ ಪ್ರಕಾಶ್ ರೈ, ಕಾವೇರಿ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕಿತ್ತು ಎಂಬುದು ಹಲವರ ವಾದವಾಗಿದೆ.

ಕಾವೇರಿ ಹೋರಾಟ ಒಂದಾದ ಸ್ಯಾಂಡಲ್‌ವುಡ್‌, ದೊಡ್ಡ ಸ್ಟಾರ್ಸ್ ಮಾತ್ರ ಯಾಕೆ ಬಂದಿಲ್ಲ!

ತಮಿಳು ನಟ ಸಿದ್ಧಾರ್ಥ್ ಪ್ರೆಸ್‌ಮೀಟ್ ಸಪೋರ್ಟ್ ಮಾಡಿ, ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್ , "ದಶಕಗಳಷ್ಟು ಹಳೆಯದಾದ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ಮುಖಂಡರನ್ನು ಪ್ರಶ್ನಿಸುವ ಬದಲು, ಕೇಂದ್ರದ ಮಧ್ಯಸ್ಥಿಕೆಗೆ ಒತ್ತಡ ಹೇರದ ಅನುಪಯುಕ್ತ ಸಂಸದರನ್ನು ಪ್ರಶ್ನಿಸುವ ಬದಲು  ಈ ರೀತಿ ಜನಸಾಮಾನ್ಯರಿಗೆ ಮತ್ತು ಕಲಾವಿದರಿಗೆ ತೊಂದರೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗನಾಗಿ , ಕನ್ನಡಿಗರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಸಿದ್ದಾರ್ಥ್‌ "ಎಂದು ತಮ್ಮ 'x'ನಲ್ಲಿ ಬರೆದುಕೊಂಡಿದ್ದಾರೆ.

ಕಾವೇರಿ ಹೋರಾಟದಲ್ಲಿ ಕಾಣಿಸದ ಕನ್ನಡದ 'ತ್ರಿಬ್ಬಲ್ ಆರ್ (RRR)' ಸ್ಟಾರ್ ನಟರು!

ಒಟ್ಟಿನಲ್ಲಿ, ನಟ ಪ್ರಕಾಶ್ ರಾಜ್ ತಮ್ಮ ವಿಶೇಷ ಅಥವಾ ವಿಪರೀತ ಎನಿಸುವ ನಡೆಯಿಂದ ಹಲವಾರು ಬಾರಿ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ. ಇದೀಗ, ತಮ, ತಮ್ಮದೇ ಕನ್ನಡ ಚಿತ್ರೋದ್ಮದ ಭಾಗವಾಗಿಯೂ ಪ್ರಕಾಶ್ ರಾಜ್ ಕಾವೇರಿ ನೀರು ಹೋರಾಟಕ್ಕೆ ಧುಮುಕದೇ ಸೆಪರೇಟ್ ಆಗಿ ನಿಂತಿರುವುದು, ಈ ಸಮಯದಲ್ಲೂ ರಾಜಕೀಯ ಮಾಡುತ್ತಿರುವುದನ್ನು ಹಲವರು ಖಂಡಿಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?