ತಂದೆ ಎಷ್ಟು ಸ್ವಾಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಂಡ ನಟ ಶಂಕರ್ ಅಶ್ವತ್ಥ್. ಸಾಮಾಜಿಕ ಜಾಲತಾಣದಲ್ಲಿ ಅಶ್ವತ್ಥ್ ಅವರನ್ನು ಹೊಗಳುತ್ತಿರುವ ನೆಟ್ಟಿಗರು..
90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ನಟ ಅಶ್ವತ್ಥ್ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತಿ ಪಡೆದಿರುವ ಕಲಾವಿದರು. ಮೈಸೂರಿನಲ್ಲಿ ಜನಿಸಿದ ಅಶ್ವತ್ಥ್ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರೂ ಸಹ ಪ್ರಸಿದ್ಧಿ ಪಡೆದಿದ್ದು ಪೋಷಕ ನಟನಾಗಿ. ತಂದೆಯಾಗಿ, ಸಹೋದರನಾಗಿ, ಪತಿಯಾಗಿ, ತಾತನಾಗಿ, ನಾರದನಾಗಿ, ಹಳ್ಳಿಗನಾಗಿ, ಪಟ್ಟಣಿಗನಾಗಿ, ಗುರುವಾಗಿ, ಅಧಿಕಾರಿಯಾಗಿ, ಸೇವಕನಾಗಿ, ಋಷಿಯಾಗಿ ಹೀಗೆ ವಿಭಿನ್ನ ಪಾತ್ರಗಳನ್ನು ಮಾಡಿ ಸಿನಿ ರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟರು.
ಈಗ ಅಶ್ವತ್ಥ್ ಅವರ ಪುತ್ರ ಶಂಕರ್ ಕನ್ನಡ ಚಿತ್ರರಂಗ ಮತ್ತು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ನಾರಾಯಣ ಆಚಾರು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಆಕ್ಟಿವ್ ಆಗಿರುವ ನಾರಾಯಣ ಆಚಾರ್ ಅವರು ತಮ್ಮ ತಂದೆ ಎಷ್ಟು ಸ್ವಾಭಿಮಾನಿ ಎಂದು ಮಾತನಾಡಿದ್ದಾರೆ.
ಆಧಾರ್ ನಂಬರ್ ಕೊಡಬೇಡಿ, ಮನೆಯೊಳಗೆ ಬಿಟ್ಟುಕೊಳ್ಳಬೇಡಿ; ನಟ ಶಂಕರ್ ಅಶ್ವಥ್ ಎಚ್ಚರಿಕೆ ವಿಡಿಯೋ ವೈರಲ್!
'ಎಷ್ಟೋ ಜನ ನನ್ನನ್ನು ಸ್ವಾಭಿಮಾನಿ ಎಂದು ಹೇಳುತ್ತಾರೆ ಆದರೆ ಎಷ್ಟರ ಮಟ್ಟಕ್ಕೆ ನಾನು ಸ್ವಾಭಿಮಾನಿ ಹೌದು ಅಲ್ಲ ನನಗೆ ಗೊತ್ತಿಲ್ಲ. ಅಕಸ್ಮಾತ್ ನಾನು ಸ್ವಾಭಿಮಾನ ಅನ್ನೋ ಪಾಠ ಕಲಿತಿದ್ದರೆ ಅದು ಈ ವ್ಯಕ್ತಿಯಿಂದ ನನ್ನ ತಂದೆ ಪರಮ ಪೂಜ್ಯ ಗುರುವಿನಿಂದ ಕಲಿತಿದ್ದು. ನನ್ನ ತಂದೆಗೆ ಸ್ವಾಭಿಮಾನ ಎಷ್ಟಿತ್ತು ಅಂದ್ರೆ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹಳ ಉತ್ತುಂಗದಲ್ಲಿದ್ದರು ಬಹಳ ಡಿಮ್ಯಾಂಡ್ ಇತ್ತು ಅಂತಹ ಸಮಯದಲ್ಲಿ ತಮ್ಮ ಸ್ವಾಭಿಮಾನಕ್ಕೆ ದಕ್ಕೆ ಬರುತ್ತೆ ಎಂದು ತಿಳಿದಾಗ ನಾನು ಚಿತ್ರರಂಗದಲ್ಲಿ ನಟಿಸುವುದಿಲ್ಲ ನಿವೃತ್ತಿ ಘೋಷಿಸುತ್ತೀನಿ ಎಂದಿದ್ದರು' ಎಂದು ಶಂಕರ್ ವಿಡಿಯೋದಲ್ಲಿ ಮಾತನಾಡಿದ್ದಾರೆ.
ನಮ್ಮ ಪಿಜಿಯಲ್ಲಿದ್ದ ಹೆಣ್ಮಗಳು ಹೂವಿ; 'ಬೆಟ್ಟದ ಹೂ' ನಟಿಯ ಹಿನ್ನಲೆ ಬಹಿರಂಗ ಪಡಿಸಿದ ಶಂಕರ್ ಅಶ್ವಥ್
'ಯಾವುದೇ ವ್ಯಕ್ತಿ ಉತ್ತುಂಗದಲ್ಲಿದ್ದಾಗ ಹಣ ಹರಿದು ಬರುತ್ತಿರುವಾಗ ಹಣ ಬೇಡ ಎಂದು ಹೇಳುವುದು ಸ್ವಾಭಿಮಾನದ ಲಕ್ಷಣವೇ. ಇದರ ಜೊತೆ ಮನೆಯಲ್ಲಿ ಅವರಿಗೆ ಸ್ವಾಭಿಮಾನ ಎಷ್ಟು ಇತ್ತು ಅಂದ್ರೆ ಅವರ ಆರೋಗ್ಯ ಸರಿ ಇಲ್ಲದೆ ಒಂದು ಸಲ ತಲೆ ಸುತ್ತಿ ಬೀಳೋ ಪರಿಸ್ಥಿತಿ ಬಂತು ಆಗ ಎದುರು ನಾನು ಕುಳಿತಿದ್ದರೂ ನನ್ನ ಸಹಾಯ ಕೇಳಲಿಲ್ಲ ತನ್ನ ಮಗ ಸಹಾಯ ಕೂಡ ಪಡೆದಿಲ್ಲ ಅಂತ ಸ್ವಾಮಿಭಾನದ ವ್ಯಕ್ತಿಯಾಗಿದ್ದರು. ನನ್ನ ತಂದೆ ಬಿದ್ದಾಗ ತಕ್ಷಣ ಹಿಡಿದುಕೊಂಡೆ ಯಾಕಪ್ಪ ಏನ್ ಆಯ್ತು ಎಂದು ಕೇಳಿದಾಗ ತಲೆ ಸುತ್ತು ಬಂದು ಬಿಡ್ತು ಕಣೋ ಅಂದ್ರು, ತಲೆ ಸುತ್ತು ಬಂದಾಗ ಹೇಳಬೇಕು ಅಲ್ವಾ ಅಪ್ಪ ಅಂದೆ ಅದಿಕ್ಕೆ ಹೇಳಿದ್ರೆ ಏನು ಮಾಡುತ್ತಿದ್ದೆ ಅಂದ್ರು ಬೀಳುವುದಕ್ಕೂ ಮುನ್ನ ಹಿಡಿದುಕೊಳ್ಳುತ್ತಿದ್ದ ಅಪ್ಪ ಅಂತ ಹೇಳಿದೆ ಅದಿಕ್ಕೆ ಆ ಸ್ವಾಭಿಮಾನಿ ಏನ್ ಹೇಳಿದರು ಗೊತ್ತಾ? ಥ್ಯಾಂಕ್ಸ್ ಅಂತ ಹೇಳಿದರು' ಎಂದು ಶಂಕರ್ ಈ ವಿಡಿಯೋ ಮುಗಿಸಿದ್ದಾರೆ.
'ನೀವು ಹಾಗೆ ಇದ್ದೀರಾ ನಿಜಾನಾ sir.. ಹಾಗೆ ಇದ್ದರೆ ಒಳ್ಳೆಯದಾಗಲಿ, ಆ ಸಮಯ ಮತ್ತೆ ಬರುವುದಿಲ್ಲ ಆಗ ಜನರು ನಮಗೆ ಸಿಗುವುದಿಲ್ಲ. ಅವರನ್ನು ನಿಮ್ಮಲ್ಲಿ ನೋಡುತ್ತಿದ್ದೀವಿ' ಎಂದು ಅಭಿಮಾನಿಗಳು ಶಂಕರ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.