ಕನ್ನಡ ಪ್ರೇಮಾ ಮೆರೆದ ಪೂಜಾ ಗಾಂಧಿ. ಮುಂಗಾರು ಮಳೆ ನಟಿಗೆ ಕನ್ನಡ ಯಾಕಿಷ್ಟ? ಇಷ್ಟು ವರ್ಷ ಎಲ್ಲಿದ್ದರು ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ....
2001ರಲ್ಲಿ ಖತ್ರೋನ್ ಕೆ ಖಿಲಾಡಿ ಸಿನಿಮಾದ ಮೂಲಕ ಬಿ-ಟೌನ್ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಪೂಜಾ ಗಾಂಧಿ 2006ರಲ್ಲಿ ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ಮೇಲೆ ಮಿಲನಾ, ಕೃಷ್ಣ, ಮನ್ಮತಾ,ಗೆಳೆಯ, ಹನಿ ಹನಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಕೆಲವು ವರ್ಷಗಳ ಕಾಲ ಪೂಜಾ ಮಾಯಾವಾಗಿ ಬಿಟ್ಟಿದ್ದರು, ಎಲ್ಲಿ ಹೋಗಿದ್ದು ಎನು ಮಾಡುತ್ತಿದ್ದರು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
'ಮುಂಗಾರು ಮಳೆ ಸಿನಿಮಾದಿಂದ ನಾನು ನೋಡಲು ಹಾಗೆ ಇರುವೆ ಎಂದು ಅನೇಕು ಹೇಳುತ್ತಿರುವುದಕ್ಕೆ ಖುಷಿಯಾಗಿದೆ. ಆದರೆ ನನ್ನ ಭಾಷೆ ಬದಲಾಗಿದೆ ಆಗ ತಪ್ಪು ಸರಿ ಯೋಚನೆ ಮಾಡದೆ ಕನ್ನಡ ಹೇಗೆ ಬರುತ್ತಿತ್ತು ಹಾಗೆ ಬರೆದುಕೊಂಡೆ ಈಗ ಮಾತನಾಡುವುದು ಓದುವುದನ್ನು ಕಲಿತಿರುವೆ. ಯಾಕೆ ಕಲಿಯುತ್ತಿರುವುದು ಎಂದು ಅನೇಕರು ಪ್ರಶ್ನೆ ಮಾಡಿದ್ರು ಆದಕ್ಕೆ ಉತ್ತರ ಭಾಷೆ ಮೇಲಿರುವ ನನ್ನ ಪ್ರೀತಿ ಮತ್ತು ಕರ್ನಾಟಕದ ಮೇಲಿರುವ ನನ್ನ ಪ್ರೀತಿ ಅಂತ ಹೇಳುವುದಕ್ಕೆ ಇಷ್ಟ ಪಡುವೆ. ಒಂದು ಶಬ್ಧದಲ್ಲಿ ಹಂಚಿಕೊಳ್ಳಲು ಅಗಲ್ಲ ಏಕೆಂದರೆ ಅಷ್ಟು ಇಷ್ಟ ಪಡುತ್ತಿರುವೆ. ತುಂಬಾ ತುಂಬಾ ಖುಷಿಯಾಗುತ್ತಿದೆ ಜನರು ಅಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ ಮುಂಚೆ ಮಾತನಾಡುತ್ತಿದ್ದೆ ಈಗ ಬರೆಯುತ್ತಿರುವೆ ಓದುತ್ತಿರುವೆ' ಎಂದು ಕನ್ನಡ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಪೂಜಾ ಗಾಂಧಿ ಮಾತನಾಡಿದ್ದಾರೆ.
ಕರ್ನಾಟಕದಲ್ಲಿದ್ದು, ಕನ್ನಡ್ ಗೊತ್ತಿಲ್ಲ ಅನ್ನೋರಿಗೆ ಏನು ಮಾಡ್ಬೇಕು ಹೇಳ್ತಿದ್ದಾರೆ ಪೂಜಾ ಗಾಂಧಿ
'ನಾನು ಎಲ್ಲೂ ಹೋಗಿರಲಿಲ್ಲ ಆರೋಗ್ಯ ಹುಷಾರಿರಲಿಲ್ಲ ಆಮೇಲೆ ಸ್ವಲ್ಪ ಬ್ರೇಕ್ ತೆಗೆದುಕೊಂಡೆ ಈಗ ಅಂಗನವಾಡಿ ಮಕ್ಕಳಿಗೋಸ್ಕರ ಒಂದು ಪ್ರಾಜೆಕ್ಟ್ ಮಾಡುತ್ತಿರುವೆ ಎನ್‌ಜಿಓ ಆಕ್ಟಿವಿಟಿಯಲ್ಲಿ ಕೆಲಸ ಮಾಡಿಕೊಂಡು ಓದುತ್ತಿರುವ ಹೀಗಾಗಿ ಬ್ಯುಸಿಯಾಗಿರುವೆ ಆರಾಮ್ ಅಗಿರುವೆ ಜೀವನಕ್ಕೆ ಏನ್ ಏನೋ ಮಾಡುತ್ತಿರುವೆ ಅದಕ್ಕೆ ನೀವು ಎರಡು ಗಂಟೆ ಸಂದರ್ಶನ ಮಾಡಬೇಕಾಗುತ್ತೆ ಹೀಗಾಗಿ ಸದ್ಯಕ್ಕೆ ಇಷ್ಟೆ' ಎಂದು ಪೂಜಾ ಗಾಂಧಿ ಹೇಳಿದ್ದಾರೆ.
ಅಂಗನವಾಡಿ ಪ್ರಾಜೆಕ್ಟ್:
ಅಂಗನವಾಡಿ ಕಾರ್ಯಕರ್ತೆಯರು ಬಾಣಂತಿಯರ ಸಹೋದರಿಯಾಗಿಯೂ, ಮಕ್ಕಳ ಪಾಲಕಳಾಗಿಯೂ, ದಾದಿಯಾಗಿಯೂ ಮತ್ತು ಶಿಕ್ಷಕಳಾಗಿಯೂ ಹಲವಾರು ಪಾತ್ರ ನಿಭಾಯಿಸುತ್ತಿದ್ದಾರೆ. ಸರ್ಕಾರ ತಕ್ಷಣ ಅವರ ಬೇಡಿಕೆ ಈಡೇರಿಸಲು ಒಪ್ಪಬೇಕು ಮತ್ತು ವಿರೋಧ ಪಕ್ಷಗಳು ಅದನ್ನು ಸಂತೋಷದಿಂದ ಸ್ವಾಗತಿಸಬೇಕು ಎಂದು ಪೂಜಾ ಗಾಂಧಿ.
ದಾಸರ ಕೀರ್ತನೆ, ವಚನ ಬರೆದ ಪೂಜಾ ಗಾಂಧಿ; ಕೈ ಬರಹಕ್ಕೆ ಜೈ ಎಂದ ಕನ್ನಡಿಗರು
ರಮ್ಯಾ ಅಂದ್ರೆ ಇಷ್ಟ:
ಪೂಜಾ ಮತ್ತೊಂದು ಪತ್ರ ಹಂಚಿಕೊಂಡಿದ್ದಾರೆ. ಅದೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಬಗ್ಗೆ ಎನ್ನುವುದು ವಿಶೇಷ. ಹೌದು, ರಮ್ಯಾ ಬಗ್ಗೆ ಪೂಜಾ ಗಾಂಧಿ ಕನ್ನಡದಲ್ಲಿ ಪತ್ರ ಬರೆದಿದ್ದಾರೆ. ರಮ್ಯಾ ಯಾಕಿಷ್ಟ ಎಂದು ಪತ್ರದಲ್ಲಿ ವವರಿಸಿದ್ದಾರೆ. ರಮ್ಯಾ ಸದ್ಯ ವೀಕೆಂಡ್ ವಿತ್ ರಮೇಶ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಪ್ರಾರಂಭವಾಗುತ್ತಿದೆ. ಈಗಾಗಲೇ ರಮ್ಯಾ ಎಪಿಸೋಡ್ ಚಿತ್ರೀಕರಣವಾಗಿದ್ದು ಪ್ರೋಮೋ ಕೂಡ ಬಿಡುಗಡೆಯಾಗಿದೆ. ಪ್ರೋಮೋ ನೋಡಿದ ಪೂಜಾ ಗಾಂಧಿ, ರಮ್ಯಾ ಯಾಕಿಷ್ಟ ಆಗ್ತಾರೆ ಎಂದು ವಿವರಿಸಿದ್ದಾರೆ. 'ನನಗೆ ವೈಯಕ್ತಿಕವಾಗಿ ಆಕೆ ಯಾಕೆ ಇಷ್ಟ ಆಗ್ತಾರೆ ಎಂದರೆ ಅವರು ಸಹಕಲಾವಿದರ ಪರವಾಗಿ ನಿಲ್ಲುತ್ತಾರೆ. ಆಕೆಯಲ್ಲಿನ ಈ ಗುಣ ನನಗೆ ತುಂಬಾ ಇಷ್ಟವಾಗುತ್ತದೆ. ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ. ನಾನು ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ ಪೂಜಾ ಗಾಂಧಿ ಉತ್ತಮ ಪ್ರಯತ್ನ ಮಾಡಿದ್ದೀರಾ ಎಂದು ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ ಮಟ್ಟದ ಕನ್ನಡ ಸಿನಿಮಾಗಳು ಮೂಡಿ ಬರಲಿ' ಎಂದು ಹೇಳಿದ್ದಾರೆ.