'ರಾಜಾ ರಾಣಿ' ವೇದಿಕೆಯಲ್ಲಿ ಮಗನನ್ನೇ ಉಡುಗೊರೆಯಾಗಿ ನೀಡಿದ ನಟಿ ತಾರಾ. ಎಷ್ಟೇ ಸಮಸ್ಯೆ ಇದ್ದರೂ ,ನಗಿಸುವ ಕಲಾವಿದರು ಅತ್ತರೆ ಎಷ್ಟು ಸರಿ?
ರಂಗಭೂಮಿ ಕಲಾವಿದ, ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ರಾಜು ತಾಳಿಕೋಟೆ 'ರಾಜ ರಾಣಿ' ವೇದಿಕೆಯಲ್ಲಿ ತಮ್ಮ ಇಬ್ಬರು ಪತ್ನಿಯರ ಜೊತೆ ಕಾಣಿಸಿಕೊಂಡಿದ್ದಾರೆ. ಪಾಲಕ್ ಪನೀರ್, ಮನಸ್ಸು ಬಿಚ್ಚಿ ಮಾತನಾಡುವುದು, ಡ್ಯಾನ್ಸ್ ಟಾಸ್ಕ್‌ನಲ್ಲಿ ತೀರ್ಪುಗಾರರು ಮಾತ್ರವಲ್ಲದೇ ವೀಕ್ಷಕರ ಮನಸ್ಸೂ ಗೆದ್ದಿದೆ ಈ ಜೋಡಿ. ಅದರಲ್ಲೂ ಮನಸ್ಸು ಬಿಚ್ಚಿ ಮಾತನಾಡುವ ಟಾಸ್ಕ್‌ನಲ್ಲಿ ರಾಜು ಪತ್ನಿಯರು ಹೇಳಿಕೊಂಡ ನೋವಿಗೆ ನಟಿ ತಾರಾ ಸ್ಪಂದಿಸಿದ್ದಾರೆ.
ರಾಜು ತಾಳಿಕೋಟೆಗೆ ಇಬ್ಬರು ಪತ್ನಿಯರಿದ್ದಾರೆ. ಮೊದಲು ಬಾಲ್ಯ ವಿವಾಹವಾಗಿದ್ದರು. ಆಮೇಲೆ ಮತ್ತೊಬ್ಬರನ್ನು ಮದುವೆಯಾದರು. ಇಬ್ಬರೂ ಪತ್ನಿಯರ ಹೆಸರು ಪ್ರೇಮಾ. ಇಬ್ಬರೂ ಅನ್ಯೋನ್ಯವಾಗಿದ್ದಾರೆ. ಆದರೆ ವೇದಿಕೆ ಮೇಲೆ ಇಬ್ಬರೂ ಒಂದೇ ವಿಷಯಕ್ಕೆ ಕಣ್ಣೀರಿಟ್ಟಿದ್ದರು. 'ತಪ್ಪಾಯ್ತು ಅಂತ ಮಕ್ಕಳು ಬಂದರೆ ಕ್ಷಮಿಸುತ್ತೀರಾ?' ಎಂದು ಪ್ರಶ್ನೆ ಮಾಡಿದ್ದರು. ಸಿಟ್ಟಿನಲ್ಲಿಯೇ ಉತ್ತರ ಕೊಟ್ಟಿದ್ದ ರಾಜು, ಅದು ಮಾತ್ರ ಸಾಧ್ಯವಿಲ್ಲವೆಂದೇ ಹೇಳಿದ್ದರು. ಆದರೆ, ನಂತರ ಕಣ್ಣಿರಿಟ್ಟಿದ್ದರು. ಈ ವಿಚಾರ ತಿಳಿದುಕೊಂಡ ತಾರಾ ಸಂಸಾರ ಸರಿ ಮಾಡಲು ಮುಂದಾಗಿದ್ದಾರೆ.
ಮಜ್ಜಿಗೆ ಹುಳಿ ಕಲರ್ ಎನು?; ಚಂದನ್ ಶೆಟ್ಟಿ- ನಿವೇದಿತಾ ಅಡುಗೆ ಸರ್ಕಸ್ ನೋಡಿ..ಒಂದು ಎಪಿಸೋಡ್‌ನಲ್ಲಿ ಗಿಫ್ಟ್ ಕೊಡುವುದಾಗಿ ಹೇಳಿ ಪುತ್ರನನ್ನು ಕರೆಯಿಸಿ ಸಂಸಾರವನ್ನು ಒಂದು ಮಾಡುತ್ತಾರೆ. 'ಅಪ್ಪ ಮಗನ ಮಧ್ಯ ಮನಸ್ತಾಪ ಇತ್ತು ನಿಜ. ಆದರೆ ಅದೇನೂ ತುಂಬಾ ದೊಡ್ಡದಾಗಿರಲಿಲ್ಲ. ನನ್ನ ಮಗ ಸಿಕ್ಕರೋದಕ್ಕೆ ತುಂಬಾ ಖುಷಿಯಾಗಿದೆ. ಅದಕ್ಕಿಂತ ದೊಡ್ಡ ಕೊಡುಗೆ ಇನ್ನೊಂದಿಲ್ಲ,' ಎಂದು ಮೊದಲ ಪತ್ನಿ ಪ್ರೇಮಾ ಮಾತನಾಡಿದ್ದಾರೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸಿರುವುದಕ್ಕೆ ರಾಜಾ ರಾಣಿ ವೇದಿಕೆಗೆ ಧನ್ಯವಾದಗಳು. ರಾಜು ತಾಳಿಕೋಟಿಯವರನ್ನು ಅಪ್ಪನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ. ನನ್ನ ಮಗಳು ಆರೋಹಿಯನ್ನು ಮೊದಲ ಬಾರಿಗೆ ನನ್ನ ತಂದೆ ಇವತ್ತು ನೋಡುತ್ತಿದ್ದಾರೆ,' ಎಂದು ಪುತ್ರ ಭರತ್ ಸಹ ಭಾವುಕರಾಗಿ ಮಾತನಾಡಿದ್ದಾರೆ.