ಕುಲು ಮನಾಲಿಯಲ್ಲಿ ನೀನಾಸಂ ಸತೀಶ್ ಜೊತೆ ಅದಿತಿ ಪ್ರಭುದೇವ 'ಮ್ಯಾಟ್ನಿ'; ರಚಿತಾ ರಾಮ್ ಎಲ್ಲಿ?

By Kannadaprabha NewsFirst Published Feb 20, 2023, 11:00 AM IST
Highlights

ಕುಲು ಮನಾಲಿಯಲ್ಲಿ ಮ್ಯಾಟಿ ಸಿನಿಮಾ ಚಿತ್ರೀಕರಣ ಮಾಡಿದ ಅದಿತಿ ಪ್ರಭುದೇವ ಮತ್ತು ಸತೀಶ್ ನೀನಾಸಂ. ನಾಯಕಿ ರಚಿತಾ ರಾಮ್ ಎಲ್ಲಿ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು... 

ನೀನಾಸಂ ಸತೀಶ್‌ ಹಾಗೂ ರಚಿತಾ ರಾಮ್‌ ನಟನೆಯ ‘ಮ್ಯಾಟ್ನಿ’ ಚಿತ್ರಕ್ಕೆ ನಟಿ ಅದಿತಿ ಪ್ರಭುದೇವ ಜತೆಯಾಗಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಸುಂದರವಾದ ಹಾಡೊಂದನ್ನು ಕುಲು ಮನಾಲಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡು ತೆರೆ ಮೇಲೆ ನೋಡಿದಾಗ ಇಂಗ್ಲಿಷ್‌ ಸಿನಿಮಾದಂತೆ ಕಾಣುತ್ತದೆ. ವಿಟೇಂಜ್‌ ಫಾರ್ಮೆಟ್‌ನಲ್ಲಿ ಮೇಕಿಂಗ್‌ ಮಾಡಲಾಗಿದೆ. ಭೂಮಿ ಮೇಲಿನ ಸ್ವರ್ಗ ಎಂದೇ ಕರೆಸಿಕೊಳ್ಳುವ ಕುಲು ಮನಾಲಿಯಲ್ಲಿ ಹಾಡಿನ ಚಿತ್ರೀಕರಣದ ಅನುಭವನ್ನು ನೀನಾಸಂ ಸತೀಶ್‌ ಹಂಚಿಕೊಂಡಿದ್ದಾರೆ. ಮನೋಹರ್‌ ಕಾಂಪಲ್ಲಿ ನಿರ್ದೇಶನ, ಪಾರ್ವತಿ ಎಸ್‌ ಗೌಡ ನಿರ್ಮಾಣದ ಈ ಚಿತ್ರಕ್ಕೆ ಈ ಹಾಡಿನೊಂದಿಗೆ ಬಹುತೇಕರಮ ಮುಕ್ತಾಯ ಆಗಿದೆ. ನಾಗಭೂಷಣ್‌, ಪೂರ್ಣ, ಶಿವರಾಜ್‌ ಕೆ ಆರ್‌ ಪೇಟೆ, ಪೂರ್ಣಚಂದ್ರ ಅವರು ಚಿತ್ರದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುಧಾಕರ್‌ ಹಾಗೂ ಕೀರ್ತನ್‌ ಪಾಜಾರ್‌ ಛಾಯಾಗ್ರಹಣ ಚಿತ್ರಕ್ಕಿದೆ.

ಪೆಟ್ರೋಮ್ಯಾಕ್ಸ್‌ ಡಬಲ್ ಮೀನಿಂಟ್ ಸಿನಿಮಾನಾ? ಈ ವಿಡಿಯೋ ನೋಡಿ....

Latest Videos

‘ಹಾಡಿನ ಚಿತ್ರೀಕರಣಕ್ಕೆ ಹೋದಾಗ ಅಲ್ಲಿನ ಪ್ರಕೃತಿ ಸೌಂದರ್ಯ ನೋಡಿ ತುಂಬಾ ಖುಷಿ ಆಯಿತು. ನಮ್ಮ ನೆಲದ ಕುಲು ಮನಾಲಿ ಮುಂದೆ ಯಾವ ವಿದೇಶ ತಾಣದ ಸೌಂದರ್ಯ ಕಡಿಮೆಯೇ. ಕುನುಮನಾಲಿಯ ಅತ್ಯಂತ ಅಪಾಯಕಾರಿ ಹಾಗೂ ಮೈನಸ್‌ 5 ಡಿಗ್ರಿ ಸೆಲ್ಸಿಯಸ್‌ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಹಿಮಬೀಳುವಾಗ ಚಿತ್ರೀಕರಣ ಮಾಡುವುದೇ ಕಷ್ಟವಾಗಿತ್ತು. ಸೀರೆ ಮತ್ತು ಗಾಗ್ರ ಕಾಸ್ಟೂ್ಯಮ್‌ನಲ್ಲಿದ್ದ ಅದಿತಿ ಪ್ರಭುದೇವ ಅವರಿಗಂತೂ ಈ ಹಾಡಿನಲ್ಲಿ ನಟಿಸುವುದೇ ಸವಾಲಾಗಿತ್ತು. ನಾನು ಕೋಟು ಹಾಗೂ ತಾಲಿನ ಶೂ ಧರಿಸಿದ್ದೆ. ಹೀಗಾಗಿ ಕೊಂಚ ಚಳಿಯನ್ನು ತಡೆದುಕೊಂಡಿದ್ದೆ. ದಿನಕ್ಕೆ ನಾಲ್ಕರಿಂದ ಐದು ಗಂಟೆ ಚಿತ್ರೀಕರಣ ಮಾಡಿದ್ದೇವೆ. ಹಿಮ ಬೀಳುವ ಜಾಗದಲ್ಲಿ ಶೂಟಿಂಗ್‌ ಮಾಡುವಾಗ ಗಾಡಿ ಸ್ಕಿಡ್‌ ಆಗಿ ಬೆಟ್ಟದ ತುದಿಗೆ ಬಂತು ನಿಂತುಕೊಂಡಿತು. ಆ ಮಟ್ಟಿಗೆ ಸಾಹಸ ಮಾಡಿ ಶೂಟಿಂಗ್‌ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಬರಬೇಕು. ನಾವು ಅಂದುಕೊಂಡ ಹಾಡು ತೆರೆ ಮೇಲೆ ಸುಂದರವಾಗಿ ಕಾಣಿಸಬೇಕು ಎನ್ನುವ ಕಾರಣಕ್ಕೆ ಈ ಎಲ್ಲ ಸಾಹಸಗಳನ್ನು ಮಾಡಿಕೊಂಡು ಕುಲು ಮನಾಲಿಯಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ ನಟ ನೀನಾಸಂ ಸತೀಶ್‌.

ಮನೋಹರ್‌ ಕಾಂಪಲ್ಲಿಯವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್‌ 2020ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.  ಜೊತೆಗೆ ರಚ್ಚು- ಸತೀಶ್ ಫೋಟೋನೂ ವೈರಲ್ ಆಗುತ್ತಿದೆ. 'ಫಸ್ಟ್ ಲುಕ್‌ ಮ್ಯಾಟ್ನಿ. ನಿಮ್ಮಲ್ಲರ ಹಾರೈಕೆ ಎಂದಿನಂತಿರಲಿ' ಎಂದು ಸತೀಶ್‌ ಪೋಸ್ಟರ್ ಶೇರ್ ಮಾಡಿದ್ದಾರೆ. 'ಅಯೋಗ್ಯ ನಂತರ ನಮ್ಮಿಬ್ಬರ ಜೋಡಿ ನೋಡಿ, ತೆರೆಯ ಮೇಲೆ ಮತ್ತೊಂದು ಚಿತ್ರ' ಎಂದು ಡಿಂಪಲ್ ಹುಡುಗಿ ಜೊತೆ ಸೆಲ್ಫಿ ಶೇರ್ ಮಾಡಿಕೊಂಡಿದ್ದಾರೆ.'ಇಂದು ನಾನು ನನ್ನ ಮಾರ್ನಿಂಗ್ ಶೋ ಮ್ಯಾಟ್ನಿ ಬಗ್ಗೆ ಹೇಳುತ್ತಿರುವೆ. ಮುಂದಿನ ಚಿತ್ರ ನೀನಾಸಂ ಸತೀಶ್‌ ಜೊತೆ. ಸಿಕ್ಕಾಪಟ್ಟೆ ಥ್ರಿಲ್ ಅಗಿದ್ದೀನಿ,' ಎಂದು ರಚಿತಾ ರಾಮ್ ತಮ್ಮ ಮುಂದಿನ ಚಿತ್ರದ ಬಗ್ಗೆ ಬರೆದುಕೊಂಡಿದ್ದರು.

click me!