777 ಚಾರ್ಲಿ ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ರಕ್ಷಿತ್ ಶೆಟ್ಟಿ ಸೇರಿ ಹಲವರ ಸಾಥ್!

By Suvarna News  |  First Published Jun 13, 2022, 8:33 PM IST
  • ಒರಾಯನ್ ಮಾಲ್‌ನಲ್ಲಿ ಸಿಎಂ ಬೊಮ್ಮಾಯಿ ಸಿನಿಮಾ ವೀಕ್ಷಣೆ
  • ಸಚಿವ ಅಶೋಕ್, ಬಿಸಿ ನಾಗೇಶ್ ಸೇರಿ ಹಲವರ ಸಾಥ್
  • ಸಿಎಂಗಾಗಿ ವಿಶೇಷ ಪ್ರದರ್ಶನ ಆಯೋಜಿಸಿದ ರಕ್ಷಿತ್ ಶೆಟ್ಟಿ, ಕಿರಣ್ ರಾಜ್

ಬೆಂಗಳೂರು(ಜೂ.13): ರಕ್ಷಿತ್ ಶೆಟ್ಟಿ ನಟಿಸಿ ನಿರ್ಮಾಣ ಮಾಡಿರೋ ಸಿನಿಮಾ 777 ಚಾರ್ಲಿ ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಮತ್ತೊಂದು ಕನ್ನಡ ಸಿನಿಮಾ ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 777 ಚಾರ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ನಗರದ ಒರಾಯನ್ ಮಾಲ್‌ನಲ್ಲಿ ಮುಖ್ಯಮಂತ್ರಿ ಹಾಗೂ ಇತರ ಸಚಿವರಿಗೆ ವಿಶೇಷ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ. ಸಂಜೆ 7.30ರ ಶೋಗೆ ಸಿಎಂ ಬೊಮ್ಮಾಯಿ ಜೊತೆಗೆ ಸಚಿವ ಆರ್ ಅಶೋಕ್, ಬಿಸಿ ನಾಗೇಶ್, ಶಾಸಕ ರಘುಪತಿ ಭಟ್ ಸೇರಿದಂತೆ ಕೆಲವರು ಸಾಥ್ ನೀಡಿದ್ದಾರೆ.

Tap to resize

Latest Videos

777 ಚಾರ್ಲಿ ‌ಸಿನಿಮಾ ನೋಡಿ ತಮ್ಮ ನಾಯಿಯನ್ನು ನೆನಪಿಸಿಕೊಂಡ ಬೊಮ್ಮಾಯಿ

ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಕೂಡ ಸಿಎಂ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಅತ್ಯುತ್ತಮ ಚಿತ್ರಗಳಿಗೆ ಬೊಮ್ಮಾಯಿ ಸದಾ ಬೆಂಬಲ ನೀಡಿದ್ದಾರೆ. ಇಷ್ಟೇ ಖುದ್ದು ಸಿನಿಮಾ ನೋಡಿ ಚಿತ್ರಕ್ಕೆ ಬೆಂಬಲ ನೀಡಿದ ಹಲವು ಊದಾಹರಣೆಗಳಿವೆ.

ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಿದ್ದ ಸಿಎಂ
ಕಾಶ್ಮೀರ ನರಮೇಧದ ನೈಜ ಘಟನೆ ಆಧಾರಿತ ದಿ ಕಾಶ್ಮೀರ್ ಫೈಲ್ಸ್ ಬಾಲಿವುಡ್ ಚಿತ್ರ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಚಿತ್ರವನ್ನು ಸಿಎಂ ಬೊಮ್ಮಾಯಿ ಒರಾಯನ್ ಮಾಲ್‌ನ ಪಿವಿಆರ್ ಸಿನಿಮಾಸ್‌ಗೆ ತೆರಳಿ ವೀಕ್ಷಿಸಿದ್ದರು. ಈ ವೇಳೆ ಸಂಪುಟದ ಕೆಲ ಸಚಿವರು, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್‌, ನಟಿ ಸುಧಾರಾಣಿ, ನಟ ಸಿಹಿ ಕಹಿ ಚಂದ್ರು, ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌ ಮತ್ತಿತರರು ಮುಖ್ಯಮಂತ್ರಿ ಅವರಿಗೆ ಸಾಥ್‌ ನೀಡಿದರು.

ರೈತರ ಕನಸು ನನಸು ಮಾಡಿದ ಸಿಎಂ, ರೈತರಿಂದ ಬೊಮ್ಮಾಯಿಗೆ ಜೋಡೆತ್ತು ಗಿಫ್ಟ್

ಇದಕ್ಕೂ ಮೊದಲು ಅವರು ಇತ್ತೀಚಿನ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಕಾರಣರಾಗಿರುವ ರಾಜ್ಯದ ನಾಲ್ವರು ನಾಯಕರನ್ನು ಅಭಿನಂದಿಸಲು ರಾಜ್ಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಈ ಕಾರ್ಯಕ್ರಮ ಇನ್ನೂ ವಿಳಂಬವಾಗುತ್ತಿತ್ತು. ಆದರೆ, ಮುಖ್ಯಮಂತ್ರಿಗಳು ಚಿತ್ರ ನೋಡಲು ಹೋಗುತ್ತಿದ್ದಾರೆ. ಪಕ್ಷದ ಆದೇಶದ ಮೇಲೆ ಚಲನಚಿತ್ರ ನೋಡಲು ಹೋಗುತ್ತಿದ್ದೇನೆ ಎಂಬ ಮಾತನ್ನು ಹೇಳಿದರು. ನೀವು (ಸಿಎಂ) ಏನೇ ಮಾಡಿದರೂ ಪಕ್ಷದ ಸೂಚನೆ ಮೇರೆಗೆ ಮಾಡುತ್ತಿದ್ದೀರಿ. ಆ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
 

click me!