ಮೈಸೂರಿಗೆ ತೆರಳಲು ನ್ಯಾಯಾಲಯದಿಂದ ದರ್ಶನ್‌ಗೆ ಅನುಮತಿ: ಅಸಲಿ ಕಾರಣವೇನು?

Published : Dec 20, 2024, 05:49 PM IST
ಮೈಸೂರಿಗೆ ತೆರಳಲು ನ್ಯಾಯಾಲಯದಿಂದ ದರ್ಶನ್‌ಗೆ ಅನುಮತಿ: ಅಸಲಿ ಕಾರಣವೇನು?

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ಗೆ ಮೈಸೂರಿಗೆ ತೆರಳಲು ಅನುಮತಿ ನೀಡಿನಗರದ 7ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರು (ಡಿ.20): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ಗೆ ಮೈಸೂರಿಗೆ ತೆರಳಲು ಅನುಮತಿ ನೀಡಿನಗರದ 7ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ. ಮೈಸೂರಿನಲ್ಲಿರುವ ವಯೋ ಸಹಜ ಆರೋಗ್ಯ ಸಮಸ್ಯೆಗಳನ್ನು ನರಳುತ್ತಿರುವ 76 ವರ್ಷದ ತನ್ನ ತಾಯಿಯನ್ನು ಕಂಡು ಆರೈಕೆ ಮಾಡಬೇಕಿದೆ. ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ತನ್ನ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಅಭಿಪ್ರಾಯ ಪಡೆಯಬೇಕಿದೆ. ಹಾಗಾಗಿ, ನಾಲ್ಕು ವಾರಗಳ ಕಾಲ ಮೈಸೂರಿಗೆ ಹೋಗಿ ನೆಲೆಸಲು ಅನುಮತಿ ನೀಡಬೇಕು ಎಂದು ಕೋರಿ ದರ್ಶನ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್ ಮೈಸೂರಿಗೆ ತೆರಳಿ, ಎರಡು ವಾರಗಳ ಕಾಲ ನೆಲೆಸಲು ಅನುಮತಿ ನೀಡಿ ಆದೇಶಿಸಿದೆ. ದರ್ಶನ್ ಅವರು ಡಿ.20ರಿಂದ ಮೈಸೂರಿಗೆ ತೆರಳಬಹುದು.2025ರಜ.5ರವರೆಗೆ ಮೈಸೂರಿನಲ್ಲಿಯೇನೆಲೆಸಬಹುದು ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ. ಇದರಿಂದ ಪ್ರಕರಣ ಸಂಬಂಧ ಮೈಸೂರಿನಿಂದಲೇ ಬಂಧನವಾಗಿದ್ದ ದರ್ಶನ್, ಆರು ತಿಂಗಳ ನಂತರ ಮರಳಿ ಮೈಸೂರಿಗೆ ಹೋಗಲು ಅವಕಾಶ ಸಿಕ್ಕಿದೆ. ಇದೇ ವೇಳೆ ಜಗದೀಶ್ ಹಾಗೂ ಅನುಕುಮಾರ್‌ಗೆ ಚಿತ್ರದುರ್ಗಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಅವರು ಚಿತ್ರದುರ್ಗದ ನಿವಾಸಿಗಳಾಗಿದ್ದಾರೆ ಅವರ ಕುಟುಂಬದವರು ಅಲ್ಲಿಯೇ ನೆಲೆಸಿದ್ದಾರೆ. ಕುಟುಂಬಸ್ಥರ ಭೇಟಿ ಮಾಡುವುದಕ್ಕಾಗಿ ಚಿತ್ರದುರ್ಗಕ್ಕೆ ತೆರಳಿ ಜ.10ರವರೆಗೆ ನೆಲಸಲು ಈ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಅನುಮತಿ ನೀಡಿದೆ.

ಬಿಜಿಎಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌: ಬೆನ್ನು ನೋವಿನ ಕಾರಣಕ್ಕೆ ಆಸ್ಪತ್ರೆ ಸೇರಿದ್ದ ಕೊಲೆ ಆರೋಪಿ ನಟ ದರ್ಶನ್‌ ಬುಧವಾರ ಬಿಜಿಎಸ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಳಗ್ಗೆ 10.30ಕ್ಕೆ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ತಮ್ಮ ಪುತ್ರ ವಿನೀಶ್‌ ಹಾಗೂ ನಟ ಧನ್ವೀರ್‌ ಜತೆಗೂಡಿ ದರ್ಶನ್‌ ಆಸ್ಪತ್ರೆಯಿಂದ ತೆರಳಿದರು. ಆಸ್ಪತ್ರೆಯಿಂದ ನೇರವಾಗಿ ಪತ್ನಿ ವಿಜಯಲಕ್ಷ್ಮೀಯವರ ಹೊಸಕೆರೆಹಳ್ಳಿಯಲ್ಲಿರುವ ನಿವಾಸಕ್ಕೆ ದರ್ಶನ್‌ ತೆರಳಿದ್ದಾರೆ. ಧನ್ವೀರ್‌ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಕುಂಟುತ್ತಲೇ ಆಸ್ಪತ್ರೆಯಿಂದ ಹೊರ ಬಂದ ದರ್ಶನ್‌ ಜೊತೆ ಮಗ ವಿನೀಶ್‌ ಕೂಡ ಇದ್ದ. ನಟ ಧನ್ವಿರ್‌ ಅವರೇ ಕಾರು ಚಾಲನೆ ಮಾಡಿ ದರ್ಶನ್‌ರನ್ನು ಕರೆದುಕೊಂಡು ಹೊರಟರು.

ಜಾಮೀನು ಸಿಕ್ಕಿದೆ ಕಣ್ರೋ.. ಆರೋಪ ಬಾಕಿ ಇದೆ.. ತಡ್ಕಳ್ರೋ: ದರ್ಶನ್ ಗ್ಯಾಂಗ್ ನಗು ತಾತ್ಕಾಲಿಕ!

ಬೆನ್ನುನೋವಿನ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಉದ್ದೇಶದಿಂದ ದರ್ಶನ್ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಜಾಮೀನು ಮಂಜೂರಾದ ಮೇಲೆ ಇದೀಗ ದರ್ಶನ್‌ ಅವರು ಶಸ್ತ್ರಚಿಕಿತ್ಸೆ ಮಾಡದೆ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಸರ್ಜರಿ ಮಾಡಿಸಿಕೊಳ್ಳದೆ ಹೋದರೆ ಪಾರ್ಶ್ವವಾಯು ಆಗುವ ಸಂಭವವಿದೆ ಎಂದು ದರ್ಶನ್‌ ಪರ ವಕೀಲರು ಈ ಮೊದಲು ವಾದ ಮಂಡಿಸಿದ್ದರಿಂದ ಈಗ ಸರ್ಜರಿ ಮಾಡದೇ ದರ್ಶನ್‌ ಹೇಗೆ ಡಿಸ್‌ಚಾರ್ಜ್‌ ಆದರು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ. ದರ್ಶನ್‌ ಮನೆಯಲ್ಲಿಯೇ ಫಿಸಿಯೋಥೆರಪಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದು, ಫಿಸಿಯೋಥೆರಪಿಸ್ಟ್‌ ಒಬ್ಬರು ಪ್ರತಿದಿನ ಮನೆಗೆ ಬಂದು ಫಿಸಿಯೋಥೆರಪಿ ಕೊಟ್ಟು ಹೋಗುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ದರ್ಶನ್‌ ಮತ್ತು ಸಹಚರರಿಗೆ ಶುಕ್ರವಾರವಷ್ಟೇ ಜಾಮೀನು ಮಂಜೂರಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್