ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ನಾಟಿಕೋಳಿ ಸಾರನ್ನು ಗಿಫ್ಟ್ ನೀಡಿದ Jr.NTR: ಫೋಟೋ ವೈರಲ್

By Shruthi KrishnaFirst Published Jun 6, 2023, 4:50 PM IST
Highlights

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್ ನಾಟಿಕೋಳಿ ಸಾರನ್ನು ಗಿಫ್ಟ್ ಆಗಿ ಕಳುಹಿಸಿದ್ದಾರೆ. 

ಪ್ರಶಾಂತ್ ನೀಲ್ ಕನ್ನಡ ಸಿನಿಮಾರಂಗದ ಖ್ಯಾತ ನಿರ್ದೇಶಕ. ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ. ಜಾಗತಿಕ ಮಟ್ಟದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಜೂನ್ 4 ಪ್ರಶಾಂತ್ ನೀಲ್ ಹುಟ್ಟುಹಬ್ಬ. ಖ್ಯಾತ ನಿರ್ದೇಶಕನ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಸಿನಿಮಾ ಗಣ್ಯರು ವಿಶ್ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರಿಗೆ ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್ ವಿಶೇಷ ಗಿಫ್ಟ್ ಕಳುಹಿಸಿ ಕೊಡುವ ಮೂಲಕ ವಿಭಿನ್ನವಾಗಿ ಬರ್ತಡೇ ವಿಶ್ ಮಾಡಿದ್ದಾರೆ. 

ಪ್ರಭಾಸ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಸಲಾರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾ ಬಳಿಕ ಪ್ರಶಾಂತ್ ವನೀಲ್ ಜೂ.ಎನ್ ಟಿ ಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಜೂ.ಎನ್ ಟಿ ಆರ್, ಪ್ರಶಾಂತ್ ನೀಲ್ ಅವರಿಗೆ ಮನೆಯಲ್ಲೇ ತಯಾರಿಸಿದ ನಾಟಿಕೋಳಿ ಸಾರು ಮಾಡಿ ಕಳುಹಿಸಿದ್ದಾರೆ. ಜೂ.ಎನ್ ಟಿ ಆರ್ ಮನೆಯ ನಾಟಿಕೋಳಿ ಸಾರಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂ.ಎನ್ ಟಿ ಆರ್ ಕಳುಹಿಸಿದ್ದ ನಾಟಿಕೋಳಿನ ಸಾರಿನ ಫೋಟೋವನ್ನು ಪ್ರಶಾಂತ್ ನೀಲ್ ಪತ್ನಿ ಲಿಕಿತಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಫೋಟೋ ಶೇರ್ ಮಾಡಿ ನಾಟಿಕೋಳಿ ಸಾರು ಎಂದು ಬರೆದಿದ್ದಾರೆ. ಜೊತೆಗೆ ಜೂ.ಎನ್ ಟಿ ಆರ್ ಅಣ್ಣಯ್ಯ ಎಂದು ಕರೆದು ಧನ್ಯವಾದ ತಿಳಿಸಿದ್ದಾರೆ.  ಜೂ.ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಕುಟುಂಬದ ನಡುವೆ ಉತ್ತಮವಾದ ಸ್ನೇಹ ಬಾಂಧವ್ಯವಿದೆ. ಆಗಗಾ ಎರಡೂ ಕುಟುಂಬದವರು ಒಟ್ಟಿಗೆ ಸೇರುತ್ತಾರೆ ಸಂಭ್ರಮಿಸುತ್ತಿದ್ದಾರೆ. ಇಬ್ಬರು ಕುಟುಂಬದ ಫೋಟೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಪ್ರಶಾಂತ್ ನೀಲ್ ಅವರಿಗೆ ವಿಶೇಷವಾದ  ನಾಟಿಕೋಳಿ ಸಾರು ಮಾಡಿ ಕಳುಹಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. 

ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್'ನಲ್ಲಿ ಕನ್ನಡದ ಖ್ಯಾತ ನಟ; ಚಿತ್ರದ ಬಗ್ಗೆ ಹೇಳಿದ್ದೇನು?

NTR31

ಪ್ರಶಾಂತ್ ನೀಲ್ ಮತ್ತು ಜೂ.ಎನ್ ಟಿ ಆರ್ ಸಿನಿಮಾಗೆ NTR31 ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ಇದು ದಕ್ಷಿಣ ಭಾರತದ ಬಹುನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಜೂ.ಎನ್ ಟಿ ಆರ್ ಹುಟ್ಟುಹಬ್ಬದ ಸಮಯದಲ್ಲಿ ಫಸ್ಟ್ ಲುಕ್ ರಿಲೀಸ್ ಆಗಿದೆ. ಜೂ.ಎನ್ ಟಿ ಆರ್ ಈ ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸಿಕ್ಕಾಪಟ್ಟೆ ಆಕ್ಷನ್ ದೃಶ್ಯಗಳನ್ನು ಹೊಂದರಲಿದೆ ಎಂದು ಹೇಳಲಾಗುತ್ತಿದೆ. 

'ಡಾರ್ಲಿಂಗ್ ಫ್ರೆಂಡ್' ಪ್ರಶಾಂತ್ ನೀಲ್ ಹುಟ್ಟುಹಬ್ಬ ಆಚರಿಸಿದ ಪ್ರಭಾಸ್: ಇಲ್ಲಿವೆ ಸುಂದರ ಫೋಟೋಗಳು

ಜೂ.ಎನ್ ಟಿ ಆರ್ ಬಗ್ಗೆ ಪ್ರಶಾಂತ್ ನೀಲ್ ಮಾತು 

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ನೀಡಿದ ಸಂದರ್ಶನದಲ್ಲಿ ಜೂ.ಎನ್ ಟಿ ಆರ್ ಬಗ್ಗೆ ಮಾತನಾಡಿದ್ದ ಪ್ರಶಾಂತ್ ನೀಲ್, 'ನಾನು ಕಳೆದ 15 ರಿಂದ 20 ವರ್ಷಗಳಿಂದ ಎನ್‌ಟಿಆರ್ ಅವರ ಅಭಿಮಾನಿಯಾಗಿದ್ದೇನೆ. ಸ್ಕ್ರಿಪ್ಟ್ ಕೆಲಸವನ್ನು ಪ್ರಾರಂಭಿಸುವ ಮೊದಲು ನಾವು ಆಕಸ್ಮಿಕವಾಗಿ 10 ರಿಂದ 15 ಬಾರಿ ಭೇಟಿಯಾಗಿದ್ದೇವೆ. ನಾನು ಅವನನ್ನು ಸ್ವಲ್ಪ ಹೆಚ್ಚು ಅರ್ಥಮಾಡಿಕೊಳ್ಳಲು ಬಯಸುತ್ತೇನೆ ಮತ್ತು ಅದು ನನ್ನ ಎಲ್ಲಾ ನಟರೊಂದಿಗೆ ನನ್ನ ಪ್ರಕ್ರಿಯೆಯಾಗಿದೆ. ಎನ್‌ಟಿಆರ್‌ ಅವರೊಂದಿಗಿನ ಉತ್ತಮ ಪ್ರಯಾಣ ಇದಾಗಿದೆ, ಕಳೆದ 2 ವರ್ಷಗಳಿಂದ ನಾವು ಆತ್ಮೀಯ ಸ್ನೇಹಿತರಾಗಿದ್ದೇವೆ. ನಾನು ಬರೆದ ಕಥೆಯನ್ನು ಅವರು ಇಷ್ಟಪಟ್ಟಿದ್ದಾರೆ ಮತ್ತು ನಾವು ಇದೀಗ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾನು ತುಂಬಾ ಉತ್ಸುಕನಾಗಿದ್ದೇನೆ' ಎಂದು ಅವರು ಹೇಳಿದ್ದರು.
 

click me!