‘ಬಾರೋ ಕಂದ’... ವಸಿಷ್ಠ ಸಿಂಹ ವಿಐಪಿ ಸಿನಿಮಾದಲ್ಲಿ ಕೆ.ಎಸ್‌.ಚಿತ್ರಾ ಹಾಡು!

By Govindaraj S  |  First Published Jul 12, 2024, 5:27 PM IST

ಸಿನಿಮಾ ಗೀತೆಗಳ ದಂತಕತೆ ಕೆ ಎಸ್ ಚಿತ್ರಾ ಇದೀಗ ವಸಿಷ್ಠ ಸಿಂಹ ನಟನೆಯ ‘ವಿಐಪಿ’ ಸಿನಿಮಾದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ವಿ ನಾಗೇಂದ್ರ ಪ್ರಸಾದ್ ರಚನೆಯ ತಾಯಿ - ಮಗನ ಬಾಂಧವ್ಯ ಸಾರುವ ‘ಬಾರೋ ಕಂದ’ ಎಂಬ ಹಾಡನ್ನು ಹಾಡಿದ್ದಾರೆ.
 


ಸಿನಿಮಾ ಗೀತೆಗಳ ದಂತಕತೆ ಕೆ ಎಸ್ ಚಿತ್ರಾ ಇದೀಗ ವಸಿಷ್ಠ ಸಿಂಹ ನಟನೆಯ ‘ವಿಐಪಿ’ ಸಿನಿಮಾದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ವಿ ನಾಗೇಂದ್ರ ಪ್ರಸಾದ್ ರಚನೆಯ ತಾಯಿ - ಮಗನ ಬಾಂಧವ್ಯ ಸಾರುವ ‘ಬಾರೋ ಕಂದ’ ಎಂಬ ಹಾಡನ್ನು ಹಾಡಿದ್ದಾರೆ. ಹರ್ಷವರ್ಧನ್ ರಾಜ್ ಈ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ದೇಶಕಂಡ ಜನಪ್ರಿಯ ಗಾಯಕಿ ಚಿತ್ರ ಅವರು ನಮ್ಮ ಸಿನಿಮಾದ ಹಾಡನ್ನು ಹಾಡಿದ್ದು ತುಂಬಾ ಸಂತೋಷವಾಗಿದೆ.  'ಬಾರೋ ಕಂದ' ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.‌ 

ಹಾಡು ಹಾಡಿದ ನಂತರ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್ ಅವರ ಬಳಿ ನಾನು ಹಾಡಿರುವುದು ನಿಮಗೆ ಇಷ್ಟವಾಯಿತಾ? ಇಲ್ಲವಾದ್ದಲ್ಲಿ ಇನ್ನೊಮ್ಮೆ ಹಾಡುತ್ತೇನೆ ಎಂದರು. ಅಂತಹ ದೊಡ್ಡ ಗಾಯಕಿಯಾದರೂ ಅವರಲ್ಲಿರುವ ಸರಳತೆ ಎಲ್ಲರಿಗೂ ಮಾದರಿ ಎಂದು ತಿಳಿಸಿರುವ ಕಾರ್ಯಕಾರಿ ನಿರ್ಮಾಪಕ ಅಫ್ಜಲ್, ಬೆಂಗಳೂರು ಸುತ್ತಮುತ್ತ ವಿಐಪಿ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದೆ ಎಂದಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ ಅವರ ಫಸ್ಟ್ ಲುಕ್ ಪೋಸ್ಟರ್‌ನಿಂದ 'ವಿಐಪಿ' ಚಿತ್ರ ಎಲ್ಲೆಡೆ ಜನಪ್ರಿಯವಾಗಿದೆ. ಆಕ್ಷನ್ ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ಅದ್ಭುತ ಸಾಹಸ ಸನ್ನಿವೇಶಗಳಿದೆ. 

Latest Videos

undefined

ವಸಿಷ್ಠ ಈವರೆಗಿನ ಪಾತ್ರಗಳಿಗಿಂತ ನಮ್ಮ ಚಿತ್ರದ ಪಾತ್ರ ವಿಭಿನ್ನವಾಗಿರುತ್ತದೆ ಎಂದು ನಿರ್ದೇಶಕ ಬ್ರಹ್ಮ ತಿಳಿಸಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ ಅವರ ಫಸ್ಟ್ ಲುಕ್ ಪೋಸ್ಟರ್​ನಿಂದ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳು ಇವೆ. ವಸಿಷ್ಠ ಸಿಂಹ ಅವರು ಈವರೆಗೆ ಮಾಡಿರದಂತಹ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡುತ್ತಿದ್ದಾರೆ ಎಂದಿದ್ದಾರೆ ನಿರ್ದೇಶಕ ಬ್ರಹ್ಮ. ಕಲಾಸೃಷ್ಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಸ್ ಮೋಹನ್ ಕುಮಾರ್ ಹಾಗೂ ಆರ್ ಅಚ್ಯುತ್ ರಾವ್ ನಿರ್ಮಾಣದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಬ್ರಹ್ಮ ಈ ಚಿತ್ರದ ನಿರ್ದೇಶಕರು.

ರಾಜ್‌ ಬಿ ಶೆಟ್ಟಿ 'ರೂಪಾಂತರ'ದಲ್ಲಿ ಒಂದಲ್ಲ, ಎರಡಲ್ಲ 5 ಕಥಾಸರಣಿಗಳು: ಈ ದಿನದಂದು ಸಿನಿಮಾ ರಿಲೀಸ್?

ಇದಕ್ಕೂ ಹಿಂದೆ ಚಿತ್ರಾ ಅವರು ಸುದೀಪ್‌ ನಟನೆಯ ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಹಾಡಿದ್ದರು. ಅದಕ್ಕೂ ಮೊದಲು ಯೋಗರಾಜ ಭಟ್‌ ನಿರ್ದೇಶನದ ‘ಗಾಳಿಪಟ’ ಸಿನಿಮಾಗೆ ಇವರು ಹಾಡಿದ ‘ನದೀಂ ಧೀಮ್ ತನಾ’ ಹಾಡು ಬಲು ಜನಪ್ರಿಯವಾಗಿತ್ತು. ಸದ್ಯ ಚಿತ್ರ ಹಾಡಿರುವ ‘ವಿಐಪಿ’ ಆ್ಯಕ್ಷನ್‌ ಥ್ರಿಲ್ಲರ್‌ಗೆ ಬ್ರಹ್ಮ ನಿರ್ದೇಶಕರು. ಆರ್‌ಎಸ್‌ ಮೋಹನ್ ಕುಮಾರ್ ಹಾಗೂ ಆರ್ ಅಚ್ಯುತ್ ರಾವ್ ನಿರ್ಮಾಪಕರು. ತೇಜಸ್ವಿನಿ ಶರ್ಮ ನಾಯಕಿ. ಸುನೀಲ್ ಪುರಾಣಿಕ್, ಬಲ ರಾಜವಾಡಿ , ಅಫ್ಜಲ್ , ಸ್ಪರ್ಶ ರೇಖಾ, ಸುಚೇಂದ್ರ ಪ್ರಸಾದ್ ಅಭಿನಯಿಸುತ್ತಿದ್ದಾರೆ.

click me!