ಅಕ್ಷಯ ತೃತೀಯದಂದೇ 'ಟೈಮ್‌ ಪಾಸ್' ಮಾಡ್ತಿರೋದು ಯಾಕೆ? ಏನ್ ತಮಾಷೆ ಮಾಡ್ತಿಲ್ಲ ತಾನೆ?

Published : Apr 30, 2025, 09:57 AM ISTUpdated : Apr 30, 2025, 10:00 AM IST
ಅಕ್ಷಯ ತೃತೀಯದಂದೇ 'ಟೈಮ್‌ ಪಾಸ್' ಮಾಡ್ತಿರೋದು ಯಾಕೆ? ಏನ್ ತಮಾಷೆ ಮಾಡ್ತಿಲ್ಲ ತಾನೆ?

ಸಾರಾಂಶ

ಚೇತನ್ ಜೋಡಿದಾರ್ ನಿರ್ದೇಶನದ 'ಟೈಮ್ ಪಾಸ್' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರರಂಗದ ವಾಸ್ತವಗಳನ್ನು ಹಾಸ್ಯದ ಧಾಟಿಯಲ್ಲಿ ಚಿತ್ರಿಸುವ ಈ ಚಿತ್ರದಲ್ಲಿ ಏಳು ಪಾತ್ರಗಳ ಕಥೆ ಹೆಣೆಯಲಾಗಿದೆ. ಯಾವುದೇ ಔಪಚಾರಿಕ ತರಬೇತಿಯಿಲ್ಲದೆ ಚೇತನ್ ಈ ಚಿತ್ರ ನಿರ್ದೇಶಿಸಿದ್ದಾರೆ. ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಹಿರಿಯ ಪ್ರಚಾರಕ ಮಣಿ ಕಾರ್ಯನಿರ್ವಹಿಸಿದ್ದಾರೆ.

ಹೊಸ ಹೊಸ ಅಲೋಚನೆಗಳು, ಪ್ರಯೋಗಗಳು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಮೂಡಿ ಬರಿತ್ತಿವೆ. ಸ್ಯಾಂಡಲ್‌ವುಡ್ ಅಂಗಳಕ್ಕೆ ಮತ್ತೊಂದು ಹೊಸ ಆಲೋಚನೆಯ ಹೊಸಬರ ತಂಡದ ಆಗಮನವಾಗಿದೆ. ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಟೈಮ್ ಪಾಸ್ ಚಿತ್ರದ ಮೂಲಕ ಪ್ರತಿಭಾನ್ವಿತ ಕಲಾವಿದರು, ತಂತ್ರಜ್ಞರ ಸಮಾಗಮವಾಗಿದೆ. ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡು, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಗೊಂಡಿದೆ. 

ಈ ಸಂಬಂಧವಾಗಿ ಸಿನಿಮಾ ಕುರಿತಾದ ಒಂದಷ್ಟು ವಿವರಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಅದನ್ನು ಸರಿಯಾಗಿ ಹೇಳೋದಾದರೆ, ಚಿತ್ರರಂಗದ ಪ್ರಸ್ತುತ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿದಂಥಾ ನೈಜ ಘಟನೆಗಳನ್ನು ಆಧರಿಸಿದ ಕಥಾನಕವೊಂದು ದೃಶ್ಯ ರೂಪ ಧರಿಸಿದಂತಿದೆ. ಟೈಮ್ ಪಾಸ್ ಚಿತ್ರದ ಮೂಲಕ ಚೇತನ್ ಜೋಡಿದಾರ್ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸಾಮಾನ್ಯವಾಗಿ ಹೀಗೆ ನಿರ್ದೇಶಕರಾದವರು ಬೇರೆ ಬೇರೆ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ಹೊಂದಿರುತ್ತಾರೆ. ಆದರೆ, ಚೇತನ್ ಜೋಡಿದಾರ್ ಹಿನ್ನೆಲೆ ಭಿನ್ನವಾಗಿದೆ. 

Entertainment News Live: ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ರು ಡಾ ರಾಜ್‌ಕುಮಾರ್?.. ಆ ಬಳಿಕ ಏನಾಯ್ತು?

ಏಕೆಂದರೆ, ಅವರು ಈವರೆಗೂ ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿಲ್ಲ. ಯಾವ ಸಿನಿಮಾ ಶಾಲೆಗಳಲ್ಲಿಯೂ ಕಲಿಕೆ ಮಾಡಿಲ್ಲ. ಸಿನಿಮಾಗಳನ್ನು ನೋಡುತ್ತಾ, ಯೂಟ್ಯೂಬ್ ಮೂಲಕ ನಿರ್ದೇಶನದ ಪಟ್ಟುಗಳನ್ನು ಅರಿತುಕೊಳ್ಳುತ್ತಲೇ ಅವರು ಟೈಮ್ ಪಾಸ್ ಚಿತ್ರವನ್ನು ನಿರ್ದೇಶಕನಾಗಿ ಪೂರ್ಣಗೊಳಿಸಿದ್ದಾರೆ.  ಒಂದೊಳ್ಳೆ ತಂಡದೊಂದಿಗೆ, ಪಕ್ಕಾ ಮನೋರಂಜನಾತ್ಮಕ ಚಿತ್ರವೊಂದನ್ನು ರೂಪಿಸಿರುವ ಭರವಸೆ ಅವರಲ್ಲಿದೆ.

ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ ಎಂ.ಹೆಚ್ ಕೃಷ್ಣಮೂರ್ತಿ ಮತ್ತು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಡಾರ್ಕ್ ಹ್ಯೂಮರ್ ಜಾನರಿಗೆ ಸೇರಿಕೊಳ್ಳುವ ಸಿನಿಮಾ. ಇದುವರೆಗೂ ಒಂದಷ್ಟು ಬಾರಿ ಸಿನಿಮಾ ರಂಗಕ್ಕೆ ಕನ್ನಡಿ ಹಿಡಿದಂಥಾ ಕಥನಗಳೇ ಚಿತ್ರಗಳಾದದ್ದಿದೆ. ಇಲ್ಲಿಯೂ ಕೂಡಾ ಭಿನ್ನ ಧಾಟಿಯಲ್ಲಿ ಸಿನಿಮಾ ರಂಗದ ವಾಸ್ತವಕ್ಕೆ ಕನ್ನಡಿ ಹಿಡಿದಂಥಾ ಕಥನವಿದೆಯಂತೆ. 

ಹೊಸ ಆಟ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್; ಜೊತೆಯಾಗಿದ್ದು ರಾಜವರ್ಧನ್!

ಸಿನಿಮಾ ವ್ಯಾಮೋಹ ಹೊಂದಿರುವ ಏಳು ಪಾತ್ರಗಳು ಒಂದೆಡೆ ಸಂಗಮಿಸಿ, ಆ ಮೂಲಕ ತೆರೆದುಕೊಳ್ಳುವ ರೋಚಕ ಕಥೆಯನ್ನು ಹಾಸ್ಯದ ಧಾಟಿಯಲ್ಲಿ ನಿರೂಪಿಸಲಾಗಿದೆ. ಇಲ್ಲಿ ನಾಲ್ಕು ಹಾಡುಗಳು ಮತ್ತು ಎರಡು ಫೈಟ್ ಸೀನುಗಳಿವೆ. ಹಾಡುಗಳನ್ನು ಲೈವ್ ಮ್ಯೂಸಿಕ್ ಮೂಲಕ ರೂಪಿಸಲಾಗಿದೆ. ಇಳೆಯರಾಜಾ, ಎ.ಆರ್ ರೆಹಮಾನ್ ಜೊತೆ ಕಾರ್ಯನಿರ್ವಹಿಸಿದವರೇ ಹಾಡುಗಳನ್ನು ರೂಪಿಸಿದ್ದಾರೆ. ತಂತ್ರಜ್ಞರಂತೂ ನುರಿತ ತಂತ್ರಜ್ಞರನ್ನೇ ಸರಿಗಟ್ಟುವಂತೆ ಕಾರ್ಯನಿರ್ವಹಿಸಿದ್ದಾರೆ,

ಆ ಕಾರಣದಿಂದಲೇ ಮೇಕಿಂಗ್ ನಲ್ಲಿಯೂ ಅದ್ದೂರಿತನ ಕಾಣಿಸುತ್ತದೆಂಬ ನಂಬಿಕೆ ಚಿತ್ರತಂಡದ್ದು. ಅಂದಹಾಗೆ, ಇದುವರೆಗೂ ಸರಿಸುಮಾರು ಒಂಬೈನೂರಾ ಐವತ್ತರಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರಚಾರ ಕಲೆಯ ನಿಪುಣರಾದ ಮಣಿ ಅವರೇ ಈ ಚಿತ್ರದ ಪ್ರಚಾರ ಕಲೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರಕ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಸಿನಿಮಾವನ್ನೇ ನೋಡದ ಆಂಧ್ರದ ಅಭಿಮಾನಿಯೊಬ್ಬ ಪುನೀತ್ ಹೆಸರಲ್ಲಿ ಮಾಡ್ತಿರೋದೇನು?

ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ