
ಕಳೆದ ತಿಂಗಳು ಜೂನ್ 07ರಂದು, ಅಂದರೆ 07 ಜೂನ್ 2024ರಂದು ಸಿಂಗರ್ ಹಾಗು ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಅವರಿಬ್ಬರೂ ತಮ್ಮ ದಾಂಪತ್ಯಕ್ಕೆ ಗುಡ್ ಬೈ ಹೇಳಿದ್ದಾರೆ. ಇದು ಬಹುತೇಕ ಎಲ್ಲರಿಗೂ ಗೊತ್ತಿದೆ, ಈಗ ಇದು ಓಲ್ಡ್ ಮ್ಯಾಟರ್. ಆದರೆ, ನ್ಯೂ ಮ್ಯಾಟರ್ ಏನು ಅಂದ್ರೆ, ವಿಚ್ಛೇದನ ತೆಗೆದುಕೊಂಡ ತಿಂಗಳುಗಳ ಬಳಿಕ ಚಂದನ್ ಶೆಟ್ಟಿ ತಮ್ಮಿಬ್ಬರ ಮನಸ್ತಾಪ ಹಾಗೂ ಡಿವೋರ್ಸ್‌ಗೆ ಸತ್ಯವಾದ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಇದು ಅವರಿಬ್ಬರಿಗೆ ಸಂಬಂಧಪಟ್ಟ ವೈಯಕ್ತಿಕ ಘಟನೆಯಾದರೂ ಅಲ್ಲದೇ ಹಲವರಿಗೆ ಪಾಠ ಆಗುವಂತಿದೆ ಎನ್ನಬಹುದು. ಹಾಗಿದ್ದರೆ, ಚಂದನ್ ಶೆಟ್ಟಿ ಹೇಳಿದ್ದೇನು ನೋಡಿ.. 'ಲವ್ ಮಾಡುವಾಗ ಎಲ್ಲವೂ ಸಿಂಪಲ್ ಅಂತಲೇ ಅನ್ನಿಸುತ್ತದೆ. ಆದರೆ, ಮದುವೆ ಮಾಡಿಕೊಂಡು ನಮ್ಮದೇ ಗೂಡಿಗೆ ಬಂದಮೇಲೆ ನಿಜವಾದ ಸಮಸ್ಯೆ ಶುರುವಾಗುತ್ತದೆ. ಪ್ರೀತಿ ಹುಟ್ಟೊದು ಸಹಜ, ಆದ್ರೆ ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
ಕ್ಯಾಮೆರಾ ಎದುರೇ ಕಿತ್ತಾಡ್ಕೊಂಡ ಗಾಯತ್ರಿ-ಅನಂತ್ ನಾಗ್, ಬೆಂಕಿಗೆ ತುಪ್ಪ ಸುರಿದಿದ್ಯಾಕೆ ರಮೇಶ್ ಅರವಿಂದ್..?!
ಹುಡುಗಿ ಚೆನ್ನಾಗಿದ್ದಾಳೆ, ಹುಡುಗಿ ಫ್ಯಾಮಿಲಿ ಕೂಡ ಒಳ್ಳೇಯದು, ಹುಡುಗಿ ಅರ್ಥಿಕವಾಗಿ ಕೂಡ ಇಂಡಿಪೆಂಡೆಂಟ್ ಆಗಿದ್ದಾಳೆ ಎಂದು ನೋಡುವ ಬದಲು ಆ ಹುಡುಗಿಯ ಮನಸ್ಸುನ್ನು ಅರ್ಥ ಮಾಡಿಕೊಳ್ಳಬೇಕು. ಯಾರೇ ಆದರೂ ಲವ್ ಮಾಡುವಾಗ ಇನ್ನೊಬ್ಬರ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಇಲ್ಲವಾದರೆ, ಮದುವೆ ಬಳಿಕ ನಮ್ಮಿಬ್ಬರಂತೆ ಸಮಸ್ಯೆಗಳು ಶುರುವಾಗುತ್ತವೆ.
ನಾನು ನಿವೇದಿತಾಳನ್ನು ಮದುವೆಯಾಗಲು ಸರಿಸುಮಾರು 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ. ಆ ಹಣವನ್ನು ಇಟ್ಟುಕೊಂಡಿದ್ದರೆ ಈಗ ಅದು ಸಹಾಯಕ್ಕೆ ಬರುತ್ತಿತ್ತು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಜೊತೆಗೆ, ಯಾರೇ ಆಗಲಿ, ಲವ್ ಹಾಗು ಮದುವೆ ವಿಷಯದಲ್ಲಿ ಸಡನ್ನಾಗಿ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ' ಎಂದಿದ್ದಾರೆ ಚಂದನ್ ಶೆಟ್ಟಿ.
ಸುಮಲತಾ ಪೋಸ್ಟ್ ಅರ್ಥವೇನು? ದರ್ಶನ್ ಕೇಸ್ ಬಗ್ಗೆ ಹೇಳಬೇಕಾಗಿದ್ದು ಎಲ್ಲವೂ ಅಲ್ಲಿದ್ಯಂತೆ ನೋಡಿ..!?
ಸದ್ಯ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಚಂದನ್ ಅವರು ತನ್ನ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಮೋಶನ್ ಡ್ಯೂಟಿಗೆ ದುಬೈಗೆ ತೆರಳಿದ್ದಾರೆ. ಇಂದು ದುಬೈನಲ್ಲಿ ಆ ಚಿತ್ರದ ಪ್ರಮೋಶನ್ ಪ್ರಯುಕ್ತ ಪ್ರೀಮಿಯರ್ ಶೋ ಆಯೋಜಿಸಿಲಾಗಿದೆ, 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಚಿತ್ರವು ಇದೇ ತಿಂಗಳು 19ರಂದು, ಅಂದರೆ 19 ಜುಲೈ 2024ರಂತೆ ಎಲ್ಲಾ ಕಡೆ ರಿಲೀಸ್ ಆಗಲಿದೆ. ಜೊತೆಗೆ, ಸಾಂಗ್ ಕೆಲಸ, ಶೋ ಮೂಂತಾದವುಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು, ನಿವೇದಿತಾ ಕೂಡ ಸಿನಿಮಾ ಶೂಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.