ಕ್ಯಾಮೆರಾ ಎದುರೇ ಕಿತ್ತಾಡ್ಕೊಂಡ ಗಾಯತ್ರಿ-ಅನಂತ್‌ ನಾಗ್, ಬೆಂಕಿಗೆ ತುಪ್ಪ ಸುರಿದಿದ್ಯಾಕೆ ರಮೇಶ್ ಅರವಿಂದ್..?!

By Shriram Bhat  |  First Published Jul 14, 2024, 12:13 PM IST

ತಕ್ಷಣವೇ ಕೆರಳಿದ ಗಾಯತ್ರಿ ಅವರು 'ಅವ್ರು ನೋಡೋಕೆ ತುಂಬಾ ಸಾಫ್ಟ್ ಆಗಿದಾರೆ, ಕೆಂಪಗೆ ಇದಾರೆ, ತುಂಬಾ ಬೆಳ್ಳಗೆ ಇದಾರೆ, ಹಾಗಾಗಿ ಅದು ಗೊತ್ತಾಗಲ್ಲ.. ಅದು ಲೈವ್ ವಾಲ್ಕ್ಯಾನೋ ಅದು.. ಈಗ್ಲೂ ಕೂಡ..' ಎಂದಿದ್ದಾರೆ. ಬಳಿಕ ರಮೇಶ್ ಅರವಿಂದ್ ..


ಇದೊಂದು ರೋಚಕವಾದ ಮೈನವಿರೇಳಿಸುವ ಸ್ಟೋರಿ. ನಟ ಅನಂತ್‌ ನಾಗ್ (Anant Nag) ಹಾಗು ನಟಿ-ಅನಂತ್‌ ನಾಗ್ ಪತ್ನಿ ಗಾಯತ್ರಿ ಅನಂತ್‌ ನಾಗ್ (Gayathri Anant Nag) ಅವರಿಬ್ಬರೂ ಜಗಳ ಆಡಿರುವುದು. ಅದೂ ಕೂಡ ನಾಲ್ಕು ಗೋಡೆಯ ಮಧ್ಯೆ ಅವರದೇ ಮನೆಯಲ್ಲಿ ಆಗಿದ್ದರೆ ಪರವಾಗಿರಲಿಲ್ಲ. ನಟ, ನಿರೂಪಕ ರಮೇಶ್ ಅರವಿಂದ್ (Ramesh Aravind) ಎದುರಿನಲ್ಲೇ ಒಮದು ಕಾಲದ ಕನ್ನಡದ ಸೂಪರ್ ಸ್ಟಾರ್ ಜೋಡಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಹೊರಿಸುತ್ತ ಸಖತ್ ಜಗಳವಾಡಿದ್ದಾರೆ.

ಅಷ್ಟೇ ಅಲ್ಲ, ಅವರಿಬ್ಬರ ಜಗಳಕ್ಕೆ, ರಮೇಶ್ ಅರವಿಂದ್ ಅವರು ಗಾಯತ್ರಿ ಮೇಡಂ ಕೈಗೆ ತುಪ್ಪ ಸುರಿದು, ಹಾಕಿಸುತ್ತ ಹೊತ್ತಿದ್ದ ಕಿಡಿಯನ್ನು ದೊಡ್ಡ ಬೆಂಕಿಯ ಜ್ವಾಲೆಯನ್ನಾಗಿ ಮಾಡಿದ್ದಾರೆ. ನಟ, ನಿರೂಪಕ ರಮೇಶ್ ಅರವಿಂದ್ ಅವರು 'ಅಮ್ಮಾ, ನಾನು ನಿಮ್ಮನೆಗೆ ಬಂದಾಗ ಹೇಳ್ತಾ ಇದ್ರಿ, ಶಂಕರ್‌ ನಾಗ್ ಅವರನ್ನು ಹ್ಯಾಂಡಲ್‌ ಮಾಡೋದು ತುಂಬಾ ಸುಲಭ. ಆದ್ರೆ ಇವ್ರನ್ನ (ಅನಂತ್‌ ನಾಗ್) ಹ್ಯಾಂಡಲ್‌ ಮಾಡೋದು ತುಂಬಾ ಕಷ್ಟ ಅಂತ..' ಸ್ವಲ್ಪ ವಿವರವಾಗಿ ಹೇಳಿ.. ' ಎಂದಿದ್ದಾರೆ ಪಕ್ಕದಲ್ಲೇ ಕುಳಿತಿದ್ದ ನಟ ಅನಂತ್‌ ನಾಗ್ ಅವರನ್ನು ಕುರಿತು, ಅಲ್ಲೇ ಇದ್ದ ಗಾಯತ್ರಿ ಅನಂತ್‌ ನಾಗ್ ಅವರಿಗೆ.

Tap to resize

Latest Videos

ಸುಮಲತಾ ಪೋಸ್ಟ್ ಅರ್ಥವೇನು? ದರ್ಶನ್ ಕೇಸ್ ಬಗ್ಗೆ ಹೇಳಬೇಕಾಗಿದ್ದು ಎಲ್ಲವೂ ಅಲ್ಲಿದ್ಯಂತೆ ನೋಡಿ..!?

ಅದಕ್ಕೇ ಕಾದಿದ್ದವರಂತೆ ಗಾಯತ್ರಿ ಅವರು ತಮ್ಮ ಪತಿ ಅನಂತ್‌ ನಾಗ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಹಾಗಿದ್ದರೆ ಗಾಯತ್ರಿ ಅವರು ಪತಿ ಅನಂತ್ ನಾಗ್ ಬಗ್ಗೆ ಹೇಳಿದ್ದೇನು ನೋಡಿ.. 'ಈಗ ಹೇಳ್ತಾ ಇದ್ರು ನಂಗೆ ಕೋಪ ಜಾಸ್ತಿ ಇಲ್ಲ ಅಂತ.. ಅದನ್ನೇ ನೋಡ್ತಾ ಇದ್ದೆ ನಾನು ಹೆಂಗೆ ಹೇಳ್ತಾ ಇದಾರೆ ಅದನ್ನ ಅಂತ.. ನೀವು ಹೇಳಿದ್ರಿ, ಅದು ಬರೀ ಕೋಪ ಅಲ್ಲ, ಜ್ವಾಲಾಮುಖಿ ಅಂತ.. ಅದು ಈಗ್ಲೂ ಹಾಗೇ ಇದೆ ಅಂತ...' ಎಂದಿದ್ದಾರೆ. ಅಷ್ಟರಲ್ಲಿ ನಟ ಅನಂತ್ ನಾಗ ಅವರು 'ಅದು ನಟನೆ ಅಷ್ಟೇ' ಎಂದು ಮೆಲ್ಲಗೆ ಹೇಳಿದ್ದಾರೆ.

ವಿಷ್ಣುವರ್ಧನ್‌ಗೆ ಗಿಫ್ಟ್ ಕೊಟ್ಟಿದ್ರು ಎಂಜಿಆರ್‌, ಅದ್ನ ಶಿವರಾಜ್‌ಕುಮಾರ್‌ಗೆ ಕೊಟ್ಟಿದ್ದೇಕೆ ವಿಷ್ಣು ದಾದಾ? 

ತಕ್ಷಣವೇ ರಮೇಶ್ ಅವರು, 'ಅಲ್ನೋಡಿ, ಅದು ನಟನೆ ಅಂತೆ..' ಎಂದಿದ್ದಾರೆ. ತಕ್ಷಣವೇ ಕೆರಳಿದ ಗಾಯತ್ರಿ ಅವರು 'ಅವ್ರು ನೋಡೋಕೆ ತುಂಬಾ ಸಾಫ್ಟ್ ಆಗಿದಾರೆ, ಕೆಂಪಗೆ ಇದಾರೆ, ತುಂಬಾ ಬೆಳ್ಳಗೆ ಇದಾರೆ, ಹಾಗಾಗಿ ಅದು ಗೊತ್ತಾಗಲ್ಲ.. ಅದು ಲೈವ್ ವಾಲ್ಕ್ಯಾನೋ ಅದು.. ಈಗ್ಲೂ ಕೂಡ..' ಎಂದಿದ್ದಾರೆ. ಬಳಿಕ ರಮೇಶ್ ಅರವಿಂದ್ ಅವರು ಅನಂತ್‌ ನಾಗ್ ಅವರಿಗೆ, 'ಸರ್ ಆ ಥರ ಕೋಪ ಯಾವಾಗ ಬರುತ್ತೆ, ಯಾರನ್ನ ನೋಡಿದ್ರೆ ಬರುತ್ತೆ, ಯಾಕೆ ಬರುತ್ತೆ..? ಯಾವುದಕ್ಕೆ ಬರುತ್ತೆ ಕೋಪ?' ಎಂದು ಕೇಳುತ್ತಾರೆ. ಅದಕ್ಕೆ ಗಾಯತ್ರಿ ಅವರು 'ಎಲ್ಲದಕ್ಕೂ..' ಎಂದು ಹೇಳಿ ತಮ್ಮ ಮಾತನ್ನು ಮುಂದುವರೆಸುತ್ತಾರೆ. 

ಏನೇ ಪ್ರಾಬ್ಲಂ ಬಂದ್ರೂ ಒಂದ್ ವಾರ ಸುಮ್ನೆ ಇದ್ಬಿಡಿ, ಆಮೇಲ್ ಕರೆಕ್ಟಾಗಿ ಟಾರ್ಗೆಟ್‌ಗೇ ಹೊಡಿತೀರಾ...!

'ಅಡುಗೆ ಸರಿಯಾಗಿಲ್ಲ, ಏನೂ ರುಚಿಯಿಲ್ಲ, ಹೇಳ್ದಾಗೆ ಮಾಡಿಲ್ಲ.. ತುಂಬಾ ಕೋಪ ಬರುತ್ತೆ ಅವ್ರಿಗೆ, ತುಂಬಾನೇ ಬರುತ್ತೆ.. ಲೈವ್ ಜ್ವಾಲಾಮುಖಿ ಅದು.. ಯಾವುದನ್ನೋ ಸರಿಯಾಗಿ ಇಟ್ಟಿಲ್ಲ ನೀವು, ಬುಕ್ ತೆಗೆದುಬಿಟ್ರೀ.. ನೀವೇನಾದ್ರೂ ಕ್ಲೀನ್ ಮಾಡ್ವಾಗ ಅವ್ರ ಪುಸ್ತಕ ಏನಾದ್ರೂ ಸ್ವಲ್ಪ ಅಲ್ಲಾಡಿಬಿಟ್ರೂ ತುಂಬಾನೇ  ಕೋಪ ಬರುತ್ತೆ ಅವ್ರಿಗೆ.. ' ಎಂದು ತಮ್ಮ ಗಂಡ ಅನಂತ್‌ ನಾಗ್‌ ಬಗ್ಗೆ ಗಾಯತ್ರಿ ಅವರು ಸಾಲುಸಾಲು ಆರೋಪಗಳನ್ನು ಮಾಡಿದ್ದಾರೆ. ಆದರೆ, ಅಚ್ಚರಿ ಎಂಬಂತೆ ನಟ ಅನಂತ್‌ ನಾಗ್ ಅವರು ಗಾಯತ್ರಿ ಆರೋಪಗಳಿಗೆ ಕೂಲ್‌ ಅಗಿ ಬಹಳ ಶಾಂತಚಿತ್ತದಿಂದ ಉತ್ತರ ಕೊಟ್ಟಿದ್ದಾರೆ.

ಚಂದನ್ ಶೆಟ್ಟಿಗೆ ಚಿರಂಜೀವಿ ಸರ್ಜಾ ಏನ್ ಮಾಡಿದ್ರು? ಗುಟ್ಟು ರಟ್ಟು ಮಾಡಿದಾರೆ ರ್‍ಯಾಪಿಡ್ ರಶ್ಮಿ!

ಅನಂತ್‌ ನಾಗ ಅವರು ' ಇರ್ಲಿ, ಎಲ್ಲಿ ಎಲ್ಲಾನೂ ಸರಿಯಾಗಿ ಇರುತ್ತೆ ನೋಡಿ, ಅಲ್ಲಿ ನಂಗೇನೂ ಕೋಪ ಬರಲ್ಲ.. ಈಗ ನೋಡಿ, ನಾನೇನಾದ್ರೂ ಹೊಟೆಲ್‌ಗೆ ಹೋದ್ರೆ, ಅಥವಾ ಇವತ್ತು ಇಲ್ಲಿ ಬಂದ್ವಿ. ಎಲ್ಲಾನೂ ಆಲ್‌ಮೋಸ್ಟ್ ಸರಿಯಾಗೇ ಇರುತ್ತೆ.. ಒಂದ್ವೇಳೆ ಸರಿಯಾಗಿಲ್ಲ ಅಂದ್ರೂ ಕೋಪ ಮಾಡ್ಕೊಳ್ಳೋಕೆ ಆಗುತ್ತಾ? ' ಎನ್ನುತ್ತಾರೆ. ಅದಕ್ಕೆ ಗಾಯತ್ರಿ ಅವರು 'ಹೂಂ, ಮಾಡ್ಕೊಳ್ಳೋಕೆ ಆಗುತ್ತೆ, ಮಾಡಿದೀರಿ.. ' ಅದಕ್ಕೆ ಅನಂತ್‌ ನಾಗ್ ಅವರು ಸಮಜಾಯಿಸಿ ಕೊಡಲು ಟ್ರೈ ಮಾಡುತ್ತಾರೆ. 'ನೋಡಿ, ನಾನು ಇಲ್ಲಿ ಎಷ್ಟು ಕೂಲಾಗಿದೀನಿ' ಎನ್ನುತ್ತಾರೆ. 

ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!

ಗಾಯತ್ರಿ ಅವರು 'ಇಲ್ಲ ಇಲ್ಲ ಮಾಡ್ತಾರೆ ಕೋಪ ಇದಕ್ಕೂ, ನಾವು ಒಮ್ಮೆ ಹೊಟೆಲ್ ಒಂದಕ್ಕೆ ಹೋಗಿದ್ವಿ.. ನಾನು ಹೆಸ್ರು ಹೇಳಲ್ಲ.. ಅಲ್ಲಿ..' ಎನ್ನುತ್ತಿದ್ದಂತೆ ಅನಂತ್‌ ನಾಗ್ ಅವರು 'ಹೊಟೆಲ್‌ ವಿಷ್ಯ ಬೇರೆ, ಅಲ್ಲಿ ನಾವು ದುಡ್ಡು ಕೊಟ್ಟಿರ್ತೀವಿ ಅಲ್ವ..?' ಎನ್ನಲು, ಗಾಯತ್ರಿ ಅವರು 'ಇಲ್ಲ ಇಲ್ಲ ಹೇಳ್ತೀನಿ ಕೇಳಿ, ಅಲ್ಲಿ ನಾವು ಸೌತ್ ಇಂಡಿಯನ್ ತಾಲಿ ಕೇಳಿದ್ವಿ. ಅವ್ರು ಹೊಟೆಲ್‌ನವ್ರು ಸೌತ್ ಇಂಡಿಯನ್ ತಾಲಿ ಇಲ್ಲ, ನಾರ್ತ್ ಇಂಡಿಯನ್‌ ದು ಇದೆ ಅಂದ್ರು.. ಅಷ್ಟಕ್ಕೇ ಇವ್ರಿಗೆ ಬಂದೇ ಬಿಡ್ತು ಕೋಪ ನೋಡಿ.. ತಕ್ಷಣವೇ 'ಸಾಕು, ಸಾಕು ಏಳು ಏಳು.. ಎನ್ನುತ್ತಾ ಇವ್ರು ಎದ್ದೇ ಬಿಟ್ರು.. ಇವ್ರಿಗೆ ಕೋಪ ಅಲ್ಲಿ ಇಲ್ಲಿ ಅಂತೇನೂ ಇಲ್ಲ, ಎಲ್ಲಾ ಕಡೆ ಬರುತ್ತೆ.. ' ಎಂದಿದ್ದಾರೆ ಗಾಯತ್ರಿ ಅನಂತ್‌ ನಾಗ್. 

ಡಾ ರಾಜ್‌ಗೆ ಯಾರೋ ಮಾಡಿದ್ದ ಕಥೆಯನ್ನು ವಿಷ್ಣುವರ್ಧನ್‌ಗೆ ಮಾಡಿ ಸಿನಿಮಾ ಗೆಲ್ಲಿಸಿದ್ದು ಯಾರು..?

ಹೀಗೆ ರಮೇಶ್ ಅರವಿಂದ್ ಎದುರು ಹಿರಿಯ ನಟ ಅನಂತ್‌ ನಾಗ್ ಹಾಗು ನಟಿ & ಅನಂತ್‌ ನಾಗ್ ಪತ್ನಿ ಗಾಯತ್ರಿ ಅವರು ಚಿಕ್ಕಮಕ್ಕಳಂತೆ ಜಗಳ ಆಡಿದ್ದಾರೆ. ಅವರಿಬ್ಬರ ಸುಳ್ಳು ಜಗಳಕ್ಕೆ ಬೇಕಂತಲೇ ತುಪ್ಪ ಸುರಿಯುತ್ತ ರಮೇಶ್ ಅರವಿಂದ್ ಅವರು ಅದನ್ನು ಎಂಜಾಯ್ ಮಾಡಿದ್ದಾರೆ. ಬೇಕೆಂತಲೆ ರಮೇಶ್ ಅವರು ಗಾಯತ್ರಿ ಅವರ ಪರ ವಹಿಸಿ, ಅವರಿಂದ ಅನಂತ್‌ ನಾಗ್ ಅವರ ಕೋಪದ ಕಥೆಯನ್ನು ಜಗತ್ತಿಗೇ ತಿಳಿಯುವಂತೆ ಹೇಳಿಸಿದ್ದಾರೆ. 

ನಟ ಯಶ್ ರಾಮಾಯಣಕ್ಕೇ ಮೊದಲು ನಿರ್ಮಾಪಕರು ಅನ್ನೋದು ಶುದ್ಧ ಸುಳ್ಳು, ನೋಡಿ ಹೊಸ ನ್ಯೂಸ್!

ಆದರೆ, ಅನಂತ್‌ ನಾಗ್ ಅವರು ತಮ್ಮ ಹೆಂಡತಿ ಗಾಯತ್ರಿ ಹೇಳಿದ್ದು ಎಲ್ಲವೂ ಸೆಳ್ಳೇ ಸುಳ್ಳು ಎನ್ನುವಂತೆ, ನಗುತ್ತಲೇ ಇದ್ದರು, ನಗಿಸುತ್ತಲೇ, ಹಸನ್ಮುಖಿಯಾಗಿ ಮಾತನಾಡಿದ್ದಾರೆ. ಒಟ್ಟಿನಲ್ಲಿ,  ಅನಂತ್‌ ನಾಗ್ ಹಾಗು ಗಾಯತ್ರಿ ಅವರಿಬ್ಬರ ತಮಾ‍ಷೆ ಜಗಳದ ಸಂದರ್ಶನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತ ಸಖತ್ ಕಚಗುಳಿ ಇಡುತ್ತಿದೆ. ನೋಡಿ, ಎಂಜಾಯ್ ಮಾಡಿ.. !

ಅಪರ್ಣಾ ಸಾವಿಗೆ ಯಾಕಿಷ್ಟು ಕಂಬನಿ, ಸಾವಿನ ಬಳಿಕವೂ ಜೀವಿಸೋದು ಅಂದ್ರೇನು ಅಂತ ಹೇಳಿಕೊಟ್ರಾ..?

click me!