ಸಾಮಾಜಿಕ ಜಾಕತಾಣದಲ್ಲಿ ಯಾಕೆ ಟ್ರೋಲ್‌ಗಳು ಹೆಚ್ಚಾಗುತ್ತಿದೆ? ತಮ್ಮ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹಂಚಿಕೊಂಡಿದ್ದಾರೆ.
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಟಿಸಿರುವ ಮುದ್ದು ರಾಕ್ಷಸಿ ಸಿನಿಮಾ ಚಿತ್ರೀಕರಣ ಮುಗಿಸಿದ್ದು ರಿಲೀಸ್‌ಗೆ ಸಜ್ಜಾಗುತ್ತಿದೆ. ಜೊತೆಗಿದ್ದಾಗ ಸಿನಿಮಾ ಶೂಟಿಂಗ್ ಮುಗಿಸಿ ಡಿವೋರ್ಸ್ ನಂತರ ಸಿನಿಮಾ ರಿಲೀಸ್ ಆಗುತ್ತಿದೆ. ಡಿವೋರ್ಸ್ ಪಡೆದು ಚಂದನ್ ಶೆಟ್ಟಿ ನಿಜಕ್ಕೂ ಖುಷಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳನ್ನು ಮಾಡುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ ಆರೋಗ್ಯದ ಮೇಲೆ ಹೆಚ್ಚಿನ ಗಮನ ಕೊಟ್ಟು ಫಿಟ್ನೆಸ್ ಫ್ರೀಕ್ ಆಗಿದ್ದಾರೆ. ಚಂದನ್ 2.o ಎಲ್ಲರಿಗೂ ಸಖತ್ ಇಷ್ಟವಾಗುತ್ತಿದೆ. ಆದರೆ ಮತ್ತೊಬ್ಬರ ಟ್ರೋಲ್ ಚಂದನ್ ಮೇಲೆ ಪರಿಣಾಮ ಬೀರುತ್ತಿದ್ಯಾ? ಇಲ್ಲಿದೆ ಉತ್ತರ.....
'ಕೆಲವೊಂದು ಟ್ರೋಲ್‌ಗಳಲ್ಲಿ ಸತ್ಯ ಇರುತ್ತದೆ ಕೆಲವೊಂದು ಏನೂ ಇರುವುದಿಲ್ಲ. ನೋವು ಕೊಡಲೇ ಬೇಕು ಅನ್ನೋ ಉದ್ದೇಶದಲ್ಲಿ ಕೆಲವರು ಮಾಡಿರುತ್ತಾರೆ. ಟ್ರೋಲ್ ಯಾವ ರೀತಿಯಲ್ಲಿ ವರ್ಕ್ ಆಗುತ್ತದೆ ಅಂದ್ರೆ ಒಬ್ಬ ವ್ಯಕ್ತಿ ಮೇಲೆ ಸಾಕಷ್ಟು ಜನರಿಗೆ ಇಷ್ಟ ಇಲ್ಲ ಅಂದ್ರೆ ಅವರ ವಿರುದ್ಧವಾಗಿ ಟ್ರೋಲ್ ಮಾಡಲು ಶುರು ಮಾಡುತ್ತಾರೆ. ಟ್ರೋಲ್ ನೋಡುವವರು ಎಂಜಾಯ್ ಮಾಡ್ತಾರೆ ಏಕೆಂದರೆ ಅವರಿಗೂ ಆ ವ್ಯಕ್ತ ಕಂಡ್ರೆ ಆಗಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಜೀವನವನ್ನು ಹೇಗೆ ತೋರಿಸಿಕೊಳ್ಳುತ್ತಿದ್ದೀವಿ ಅನ್ನೋದು ಮುಖ್ಯವಾಗುತ್ತದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಟ್ರೋಲ್‌ಗಳ ಬಗ್ಗೆ ಚಂದನ್ ಮಾತನಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟ ಖ್ಯಾತ ರಿಯಾಲಿಟಿ ಶೋ ಸ್ಪರ್ಧಿ; ನಿಜಕ್ಕೂ ಎಲ್ಲರೂ ಶಾಕ್
'ಒಳೆತನದಲ್ಲೂ ನೀವು ಹೆಸರು ಮಾಡಬಹುದು ಇಲ್ಲ ನಾನು ಬೇರೆ ರೀತಿಯಲ್ಲಿ ಹೆಸರು ಮಾಡುತ್ತೀನಿ ಅಂದ್ರೆ ಅದಕ್ಕೂ ಅವಕಾಶ ಇದೆ. ಇಲ್ಲಿ ನಮಗೆ ಸ್ವಾತಂತ್ರ ಇದೆ ಏನ್ ಬೇಕಿದ್ದರೂ ಮಾತನಾಡಬಹುದು, ಅಪ್ಲೋಡ್ ಮಾಡಬಹುದು..ಕ್ರೈಮ್ ಬಿಟ್ಟು ಏನ್ ಬೇಕಿದ್ರೂ ಮಾಡ್ಬೋದು. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ ಇದೆ. ನಾನು ಎಲ್ಲಿದ್ದೀವಿ ಅನ್ನೋದು ಮುಖ್ಯವಾಗುತ್ತದೆ ನಮ್ಮ ಸಂಸ್ಕೃತಿ ಸಂಪ್ರದಾಯ ಮುಖ್ಯವಾಗುತ್ತದೆ ನಾವು ಯಾವ ಜಾಗದಲ್ಲಿ ಇದ್ದೀವಿ ನಮ್ಮ ಪದತಿ ಏನು? ಇದನ್ನು ಕಾಪಾಡಿಕೊಳ್ಳುವುದಕ್ಕೆ ನಾವು ಇತ್ತಿನವರೆಗೂ ಪ್ರಯತ್ನ ಮಾಡುತ್ತಿದ್ದೀವಿ. ಎಲ್ಲಾ ಫಾರಿನ್ ಕಲ್ಚರ್ ನಮ್ಮ ಮೇಲೆ ಪ್ರಭಾವ ಬೀರುತ್ತಿದೆ. ಕೆಲವರು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಏನ್ ಮಾಡಿದ್ರೂ ರಾತ್ರಿ 9 ನಂತರ ಕಣ್ಣು ಬಿಡೋಕೆ ಆಗಲ್ಲ, ಸೆಟ್‌ನಲ್ಲಿ ಮಗು ಇದ್ದಂತೆ: ಸಾಯಿ ಪಲ್ಲವಿ