
ನಟ, ಸಿಂಗರ್ ಚಂದನ್ ಶೆಟ್ಟಿ (Chandan Shetty) ಹಾಗು ನಿವೇದಿತಾ ಗೌಡ (Niveditha Gowda) ಅವರು ಕಳೆದ ತಿಂಗಳು, ಅಂದರೆ 07 ಜೂನ್ 2024ರಂದು ತಮ್ಮ ದಾಂಪತ್ಯಕ್ಕೆ ಗುಡ್ ಬೈ ಹೇಳಿದ್ದಾರೆ. ಇದು ಇಂದು ಬಹುತೇಕ ಎಲ್ಲರಿಗೂ ಗೊತ್ತಿದೆ, ಈಗ ಇದು ಹಳೆಯ ಸಂಗತಿ. ಆದರೆ, ಹೊಸ ಸಂಗತಿ ಇನ್ನೀ ಇದೆ. ಅದು ತೀವ್ರ ಕುತೂಹಲ ಕೆರಳಿಸುತ್ತಿದೆ. ಕಾರಣ, ಸಂದರ್ಶನವೊಂದರಲ್ಲಿ ಚಂದನ್ ಶೆಟ್ಟಿ ಅವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. 'ಮುಂದೆ ಒಮ್ಮೆ ನಿವೇದಿತಾ ಗೌಡ ಮದುವೆಯಾದರೆ,ಅಗ ನಿಮ್ಮ ಅನಿಸಿಕೆ ಏನಾಗಬಹುದು' ಎಂಬ ಊಹಾಪೋಹದ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಚಂದನ್ ಕೂಲಾಗಿ ಉತ್ತರಿಸಿದ್ದಾರೆ.
ಈ ಬಗ್ಗೆ ಚಂದನ್ 'ಇನ್ಮುಂದೆ ನನಗೂ ಅದಕ್ಕೂ ಸಂಬಂಧವೇ ಇಲ್ಲ. ಅದು ಅವರ ವೈಯಕ್ತಿಕ ಜೀವನ, ವೈಯಕ್ತಿಕ ಸಂಗತಿ' ಎಂದಿದ್ದಾರೆ. ಜೊತೆಗೆ, 'ನಾನು ಇನ್ಮಂದೆ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಮಾತ್ರ ನಾನೀಗ ಯೋಚಿಸುತ್ತೇನೆ. ಹಳೆಯ ಸಂಗತಿಗಳನ್ನು ಘಟನೆಗಳನ್ನು ನಾನು ಮರೆಯಲು ಯತ್ನಿಸುತ್ತೇನೆ. ಅದನ್ನು ಅಷ್ಟು ಸುಳಭವಾಗಿ ಮರೆಯಲಾಗದು, ಮರೆಯಲು ಬಿಡದಿರುವ ಹಲವು ಸಂಗತಿಗಳು ನಮ್ಮ ಸುತ್ತಲೂ ಕೆಲಸ ಮಾಡುತ್ತಲೇ ಇರುತ್ತವೆ ಎನ್ನುವುದು ನನಗೂ ಗೊತ್ತು.
ಕೇಳಿದ್ರೇ ದಂಗಾಗ್ತೀರ..! ದರ್ಶನ್ ಅಪ್ಪ ತೀರಿಕೊಂಡಾಗ ಟೈಗರ್ ಪ್ರಭಾಕರ್ ಬಂದು ಏನೋ ಅಂದಿದ್ರಂತೆ!
ಆದರೂ, ನಾನು ನನ್ನ ವೃತ್ತಿಜೀವನದ ಬಗ್ಗೆ, ಮಾಡಬೇಕಾದ ಕೆಲಸಗಳ ಬಗ್ಗೆ ಮನಸ್ಸನ್ನು ಹೆಚ್ಚುಹೆಚ್ಚು ಕೇಂದ್ರೀಕರಿಸಿದರೆ, ಆಗ ಹಳೆಯ ನೆನಪುಗಳು ತನ್ನಿಂದತಾನೇ ಹೆಚ್ಚು ಹೆಚ್ಚು ದೂರವಾಗಲು ಪ್ರಾರಂಭಿಸುತ್ತವೆ. ನಾನು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತ ಇದ್ದೇನೆ. ನನಗೆ ಸಿನಿಮಾ ನಟನೆ, ಸಾಂಗ್ಸ್ ಹೀಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಭವಿಷ್ಯದ ಬಗ್ಗೆ ಯೋಚಿಸುತ್ತ, ಆ ಬಗ್ಗೆ ಹೆಚ್ಚು ಕೆಲಸಕ್ಕೆ ಶುರುವಿಟ್ಟುಕೊಂಡಿದ್ದೇನೆ.
ಜೊತೆಗೆ, ಚಂದನ್ ಶೆಟ್ಟಿ ಪ್ರೇಮಿಗಳಿಗೆ ತಮ್ಮದೇ ಅನುಭವದ ಮೂಲಕ ಪಾಠ ಮಾಡಿದ್ದಾರೆ. 'ಲವ್ ಮಾಡುವಾಗ ಎಲ್ಲವೂ ಸರಳವಾಗಿಯೇ ಕಾಣಿಸುತ್ತವೆ. ಆದರೆ, ಮದುವೆ ಅಂತ ಮಾಡಿಕೊಂಡು ನಮ್ಮದೇ ರೂಮಿಗೆ ಬಂದಮೇಲೆಯೇ ನಿಜವಾದ ಸಮಸ್ಯೆ ಶುರುವಾಗುತ್ತದೆ. ಆಕಸ್ಮಿಕವಾಗಿ ಪ್ರೀತಿ ಹುಟ್ಟಬಹುದು. ಆದ್ರೆ ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಹುಡುಗಿ ಚೆನ್ನಾಗಿದ್ದಾಳೆ, ಹುಡುಗಿ ಕುಟುಂಬ ಸಹ ಒಳ್ಳೇಯದು, ಹುಡುಗಿ ಅರ್ಥಿಕವಾಗಿ ಕೂಡ ಸ್ವಾವಲಂಬಿ ಆಗಿದ್ದಾಳೆ ಎಂದು ನೋಡುವ ಮೊದಲು ಆ ಹುಡುಗಿಯ ಮನಸ್ಸುನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಭಾರತಿ ಬಿಟ್ಟು ಬೇರೆ ಸಹನಟಿ ಒಬ್ರನ್ನು ಮದ್ವೆ ಆಗಿದ್ರಾ ವಿಷ್ಣುವರ್ಧನ್?
ಲವ್ ಮಾಡುವಾಗ ಇನ್ನೊಬ್ಬರ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಯಾರೇ ಆದರೂ ಪ್ರಯತ್ನಿಸಬೇಕು. ಇಲ್ಲವಾದರೆ, ಮದುವೆ ಬಳಿಕ ನಮ್ಮಿಬ್ಬರಂತೆ ಹೊಸ ಸಮಸ್ಯೆಗಳು ಶುರುವಾಗುತ್ತವೆ. ನಾನು ನನ್ನ ಮದುವೆಗೆ ಸರಿಸುಮಾರು 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ. ಆ ಹಣವನ್ನು ಇಟ್ಟುಕೊಂಡಿದ್ದರೆ ಈಗ ಅದು ಜೀವನಕ್ಕೆ ಸಹಾಯಕ್ಕೆ ಬರುತ್ತಿತ್ತು' ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಜೊತೆಗೆ, ಯಾರೇ ಆಗಲಿ, ಪ್ರೀತಿ ಹಾಗು ಮದುವೆ ವಿಷಯದಲ್ಲಿ ಸಡನ್ನಾಗಿ ದುಡುಕಿ ನಿರ್ಧಾರ ತೆಗೆದುಕೊಳ್ಳೋದು ಒಳ್ಳೆಯದಲ್ಲ' ಎಂದಿದ್ದಾರೆ ಚಂದನ್ ಶೆಟ್ಟಿ.
ಸದ್ಯ, ನಟ ಚಂದನ್ ಶೆಟ್ಟಿ ಹಾಗು ನಟಿ ನಿವೇದಿತಾ ಗೌಡ ಅವರು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಚಂದನ್ ತಮ್ಮ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಮೋಶನ್ ಡ್ಯೂಟಿಗೆ ದುಬೈಗೆ ಹೋಗಿ ಬಂದಿದ್ದಾರೆ. ದುಬೈನಲ್ಲಿ ಆ ಚಿತ್ರದ ಪ್ರಮೋಶನ್ ಪ್ರಯುಕ್ತ ಪ್ರೀಮಿಯರ್ ಶೋ ಆಯೋಜಿಸಿ, ಉತ್ತಮ ರೆಸ್ಪಾನ್ಸ್ ಪಡೆಯಲಾಗಿದೆಯಂತೆ. ಈಗ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಚಿತ್ರವು 19 ಜುಲೈ 2024ರಂತೆ ಎಲ್ಲಾ ಕಡೆ ಬಿಡುಗಡೆ ಆಗಲಿದೆ. ಜೊತೆಗೆ, ತಮ್ಮದೇ ಕಾಂಪೋಸ್ ನಲ್ಲಿ ಸಾಂಗ್ ಕೆಲಸ, ಸ್ಟೇಜ್ ಶೋ ಮೂಂತಾದವುಗಳಲ್ಲಿ ಚಂದನ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಇನ್ನು, ನಿವೇದಿತಾ ಗೌದ ಸಹ ಸಿನಿಮಾ ಶೂಟ್‌ನಲ್ಲಿ ಬ್ಯುಸಿ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.