
ಬೆಂಗಳೂರು(ಫೆ. 28) ಬೇಬಿ ಡ್ಯಾನ್ಸ್ ಪ್ಲೋರ್ ರೆಡಿ... ಬಹು ನಿರೀಕ್ಷಿತ ರಾಬರ್ಟ್ ಸಿನಿಮಾದ ಹಾಡು ರಿಲೀಸ್ ಆಗಿದ್ದು ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸುತ್ತಿದೆ. ಒಂದು ಬ್ರೇಕು ಡ್ಯಾನ್ಸ್ ಬಿಡಿ ಎಂದು ದರ್ಶನ್ ಮತ್ತು ಆಶಾ ಭಟ್ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.
ಕನ್ನಡ ಮತ್ತು ತೆಲುಗು ವರ್ಷನ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ರಾಬರ್ಟ್ ಸಿನಿಮಾ ಈ ವರ್ಷದ ಅತಿ ಹೆಚ್ಚು ನಿರೀಕ್ಷೆಗಳನ್ನು ಹೊತ್ತುಕೊಂಡಿರುವ ಸಿನಿಮಾ. ದಾಸನ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದಾರೆ.
ತೆಲುಗು ನಾಡಲ್ಲಿ ರಾಬರ್ಟ್ ಹವಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಮಾರ್ಚ್ 11, 2021ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಹೈದರಾಬಾದ್‌ನಲ್ಲಿ ನಡೆದ 'ರಾಬರ್ಟ್' ಸಿನಿಮಾದ ಕಾರ್ಯಕ್ರಮದಲ್ಲಿ ನಟ ದರ್ಶನ್‌ಗೆ ದೊಡ್ಡ ಮಟ್ಟದ ಗೌರವ, ಅಭಿಮಾನ ಸಿಕ್ಕಿದ್ದನ್ನು ಮರೆಯುವ ಹಾಗಿಲ್ಲ. ವಿನೋದ್ ಪ್ರಭಾಕರ್ ಕೂಡ 'ರಾಬರ್ಟ್' ಸಿನಿಮಾದ ಮತ್ತೊಂದು ಆಕರ್ಷಣೆ.
ಪೊಗರು ಸಿನಿಮಾಕ್ಕೂ ಲಾಕ್ ಡೌನ್ ನಂತರ ಅದ್ಭುತ ಮೆಚ್ಚುಗೆ ಸಿಕ್ಕಿದೆ. ಕೊರೋನಾ ಕಾರಣಕ್ಕೆ ಸಿನಿಮಾ ಜಗತ್ತು ಸಹ ಸಂಕಷ್ಟಕ್ಕೆ ಗುರಿಯಾಗಿದ್ದು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.