
ಫೆಬ್ರವರಿ 28ರ ಸಂಜೆ 6 ಗಂಟೆಗೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಬರ್ಟ್ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ರಾಬರ್ಟ್ ತಂಡ ನಿನ್ನೆ ಮಧ್ಯರಾತ್ರಿ 1 ಗಂಟೆಗೆ ತೆರಳಿದೆ. ಡಿ-ಬಾಸ್ ಆಗಮನಕ್ಕೆ ರಾತ್ರಿ ಇಡೀ ಕಾದಿರುವ ಅಭಿಮಾನಿಗಳು ಹೂ ಮಳೆ ಮೂಲಕ ಸ್ವಾಗತಿಸಿದ್ದಾರೆ.
ಹುಬ್ಬಳ್ಳಿ ನಗರದ ಖಾಸಗಿ ಹೊಟೇಲ್‌ನಲ್ಲಿ ಉಳಿದುಕೊಂಡಿರುವ ದರ್ಶನ್‌ನನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ರಾಬರ್ಟ್ ಕಾರು ಬರುತ್ತಿದ್ದಂತೆ ಅಭಿಮಾನಿಗಳ ಕಾರಿನ ಮೆಲೆ ಹೂವು ಎಸೆದು, ಡಿ ಬಾಸ್‌ಗೆ ಜೈಕಾರ ಕೂಗಿದರು. ಹೊಟೇಲ್ ಗೇಟ್‌ನಿಂದ ಕಾರಿನವರಿಗೂ ದರ್ಶನ್ ಅವರನ್ನು ಅಭಿಮಾನಿಗಳು ಹಿಂಬಾಲಿಸಿದ್ದರು. ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಬೇಕಾಯಿತು. ತಕ್ಷಣವೇ ಕಾರಿನಿಂದ ಹೊರ ಬಂದ ದರ್ಶನ್ ಯಾರಿಗೂ ಹೊಡೆಯದಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು.
ರಾತ್ರಿ ದರ್ಶನ್ ಕಾರು ಫಾಲೋ ಮಾಡುತ್ತಿದ್ದ ಸ್ಪೆಷಲ್ ಅಭಿಮಾನಿಯನ್ನು ಭೇಟಿ ಮಾಡಿದ ದರ್ಶನ್!
"
ರಾಜವೀರ ಮದಕರಿನಾಯಕ ಸಿನಿಮಾ ಸದ್ಯಕ್ಕಿಲ್ಲ: ದರ್ಶನ್
ದೇಸಾಯಿ ಸರ್ಕಲ್ ಕೇಶ್ವಾಪುರ ರೋಡ್‌ನಲ್ಲಿರುವ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ನಟ ದೇವರಾಜ್, ಜಗಪತಿ ಬಾಬು, ಚಿಕ್ಕಣ್ಣ, ಅಶಾ ಭಟ್ ಸೇರಿದಂತೆ ಚಿತ್ರದ ನಟರು, ತಂತ್ರಜ್ಞರು ಅನೇಕರು ಭಾಗಿಯಾಗುತ್ತಿದ್ದಾರೆ. ಯುಟ್ಯೂಬ್ ಚಾನಲ್ ಮೂಲಕ ಕಾರ್ಯಕ್ರಮವನ್ನು ಲೈವ್ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.