10 ಜನ ಫ್ರೆಂಡ್ಸ್‌ ಜೊತೆ ಬೈಕ್‌ ಹತ್ತಿ ಮಡಿಕೇರಿಗೆ ಹೊರಟ ಚಾಲೆಂಜಿಂಗ್‌ ಸ್ಟಾರ್

By Suvarna News  |  First Published Nov 18, 2020, 9:53 AM IST

ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಿಂದ ಸುಮಾರು 10 ಮಂದಿ ಜತೆಗೆ ದರ್ಶನ್‌ ಮೈಸೂರು ಮಾರ್ಗವಾಗಿ ಮಡಿಕೇರಿಗೆ ಬೈಕ್‌ ಸವಾರಿ ಹೊರಟಿದ್ದಾರೆ.


ದರ್ಶನ್‌ ಗೆಳೆಯರ ಬಳಗ ಕಟ್ಟಿಕೊಂಡು ಕಾಡಿಗೋ ಫಾರ್ಮಿಗೋ ಹೋಗುವುದನ್ನು ರೂಢಿ ಮಾಡಿಕೊಂಡು ಬಹಳ ಕಾಲವಾಗಿದೆ. ಅವರು ಕೃಷಿ ಪ್ರೇಮಿ, ಪ್ರಾಣಿ ಪ್ರೇಮಿ, ಛಾಯಾಗ್ರಾಹಕರಷ್ಟೇ ಅಲ್ಲ, ಬೈಕರ್‌ ಕೂಡ ಅನ್ನುವುದನ್ನು ಈಗ ಸಾಬೀತು ಪಡಿಸಿದ್ದಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೌಡ, ಪ್ರಜ್ವಲ್‌ ದೇವರಾಜ್‌, ನಿರಂಜನ್‌, ಪ್ರಣಾಮ್‌ ದೇವರಾಜ್‌, ಯಶಸ್‌ ಸೂರ್ಯ, ಪನ್ನಗಭರಣ ಮುಂತಾದ ಗೆಳೆಯರ ಜತೆ ಅದ್ದೂರಿ ಬೈಕ್‌ನಲ್ಲಿ ನ.17ರಂದು ರೈಡಿಂಗ್‌ ಹೋಗಿದ್ದಾರೆ.

Tap to resize

Latest Videos

ಕ್ಲಿಕ್ ಆಯ್ತು ಸುದೀಪ್‌- ಆಶಿಕಾ‌ ಜೋಡಿ: ಕೋಟಿಗೊಬ್ಬ 3 ಪಟ್ಟಾಕಿ ಪೋರಿಯೋ ಹಾಡಿಗೆ ಭಾರಿ ಮೆಚ್ಚುಗೆ

ದರ್ಶನ್‌ ಹೀಗೆ ಬೈಕ್‌ ಸವಾರಿ ಹೊರಡುವುದು ಹೊಸದೇನು ಅಲ್ಲ. ಟೀ ಕುಡಿಯೋ ನೆಪ ಮಾಡಿಕೊಂಡು ಮೈಸೂರಿನಿಂದ ಊಟಿಗೆ ಬೆಳಂಬೆಳಗ್ಗೆ ಬೈಕ್‌ ಹತ್ತಿ ಹೋಗಿದ್ದನ್ನು ಅವರೇ ಹೇಳಿಕೊಳ್ಳುತ್ತಾರೆ. ಹೊರ ರಾಜ್ಯಗಳಿಗೆ ಶೂಟಿಂಗ್‌ ಹೋದಾಗ, ಅಲ್ಲಿ ಬಿಡುವು ಸಿಕ್ಕರೆ ಬೈಕ್‌ ಹತ್ತಿ ಸಿನಿಮಾ ತಂಡದ ಜತೆ ರೈಡಿಂಗ್‌ ಹೊರಡುತ್ತಾರೆ.

ಈಗ ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಿಂದ ಸುಮಾರು 10 ಮಂದಿ ಜತೆಗೆ ದರ್ಶನ್‌ ಮೈಸೂರು ಮಾರ್ಗವಾಗಿ ಮಡಿಕೇರಿಗೆ ಬೈಕ್‌ ಸವಾರಿ ಹೊರಟಿದ್ದಾರೆ. ತಮ್ಮ ನೆಚ್ಚಿನ ನಟರು ಬೈಕ್‌ ರೈಡಿಂಗ್‌ ಹೊರಟಿದ್ದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಲ್ಲದೇ ದಾರಿಯಲ್ಲೆಲ್ಲಾ ಫೋಟೋ ತೆಗೆಯುವ ಮೂಲಕ ಸಂಭ್ರಮಿಸಿದ್ದಾರೆ.

click me!