ಆಟೋ ಮೇಲೆ ಪರಮಾತ್ಮನ ಫೋಟೋ; ಅರ್ಥವಾಗದ ಪ್ರೀತಿ ಎಂದ ನಟಿ ಚೈತ್ರಾ ಆಚಾರ್

Published : Aug 01, 2023, 04:26 PM IST
ಆಟೋ ಮೇಲೆ ಪರಮಾತ್ಮನ ಫೋಟೋ; ಅರ್ಥವಾಗದ ಪ್ರೀತಿ ಎಂದ ನಟಿ ಚೈತ್ರಾ ಆಚಾರ್

ಸಾರಾಂಶ

ಎಲ್ಲೆಡೆ ಪವರ್ ಸ್ಟಾರ್ ಫೋಟೋ ಮತ್ತು ಪೇಂಟಿಂಗ್. ವೈರಲ್ ಆಯ್ತು ನಟಿ ಚೈತ್ರಾ ಜೆ ಆಚಾರ್‌ ಸ್ಟೋರಿ... 

ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಹಾಗೂ ರಿಷಬ್ ಶೆಟ್ಟಿ ಜೊತೆ ಟೋಬಿ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಹೀಗೆ ಪ್ರಯಾಣ ಮಾಡುವಾಗ ಆಟೋ ಮೇಲೆ ಕಂಡು ಬ್ಯೂಟಿಫುಲ್ ಚಿತ್ರವನ್ನು ಶೇರ್ ಮಾಡಿಕೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಹೌದು! ಚೈತ್ರಾ ಜೆ ಆಚಾರ್ ಪ್ರಯಾಣ ಮಾಡುವಾಗ ಆಟೋ ಮೇಲೆ ಅಪ್ಪು ಭಾವಚಿತ್ರ ನೋಡಿದ್ದಾರೆ. ಆ ಆಟೋ ಚಾಲಕ ಅಪ್ಪು ಬ್ಲ್ಯಾಕ್ ಆಂಡ್ ವೈಟ್ ಫೋಟೋ ಮತ್ತು ಪರಮಾತ್ಮ ಎಂದು ಬರೆಸಿಕೊಂಡಿದ್ದಾರೆ. ಇದನ್ನು ಶೇರ್ ಮಾಡಿಕೊಂಡ ಚೈತ್ರಾ 'ತಾವು ದುಡ್ಡು ಕೊಟ್ಟು ತಗೊಂಡಿರೋ ಅವರ ಗಾಡಿಗೆ ತೆರೆಯ ಮೇಲೆ ನೋಡಿ ಅಭಿಮಾನ ಬೆಳೆಸಿಕೊಂಡಿರೋ ವ್ಯಕ್ತಿ ಭಾವ ಚಿತ್ರ ಅಥವಾ ಹೆಸರು ಹಾಕ್ಕೋಳೋ ಪ್ರೀತಿ ಯಾವತ್ತಿಗೂ ಅರ್ಥ ಆಗದೆ ಇರುವಂಥದ್ದು. ಅದು ಕಲೆಯನ್ನು ಆರಾಧಿಸುವವರಿಂದ ಮಾತ್ರ ಸಾಧ್ಯವೇನೋ?' ಎಂದು ಬರೆದುಕೊಂಡಿದ್ದಾರೆ. ಚೈತ್ರಾ ಈ ವಿಚಾರವನ್ನು analysis  ಮಾಡಿರುವ ರೀತಿ ಅದ್ಭುತವಾಗಿದೆ ಎಂದು ಅನೇಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. 

ಅತ್ತೆ ಸ್ಟ್ರಿಕ್ಟ್‌ ಆಗಿದ್ದರು ಬಜೆಟ್‌ ಹಿಡಿತದಲ್ಲಿರುತ್ತಿತ್ತು, ನಾನು ಅಪ್ಪು ತರ ಫುಲ್ ಫ್ರೀ: ಅಶ್ವಿನಿ ಪುನೀತ್ ರಾಜ್‌ಕುಮಾರ್

2019ರಲ್ಲಿ  ಮಹಿರ ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಚೈತ್ರಾ ಆ ದೃಶ್ಯ, ತಲೆದಂಡ ಹಾಗೂ ಸ್ಟ್ರಾಬೆರಿ ಸಿನಿಮಾದಲ್ಲಿ ನಟಿಸಿ ಅದ್ಭುತ ಕಲಾವಿದೆ ಎಂದು ಸಾಭೀತು ಮಾಡಿದ್ದಾರೆ. ಜೊತೆಗೆ ಚೈತ್ರಾ ಅದ್ಭುತ ಗಾಯಕಿ, ಕೆಲವು ದಿನಗಳ ಹಿಂದೆ ಸಂಯುಕ್ತಾ ಹೊರನಾಡು ಜೊತೆ ಹಾಡಿರುವ ಹಾಡುಗಳು ಕೂಡ ವೈರಲ್ ಆಗಿತ್ತು. 

ಅಭಿಮಾನಿಯಿಂದ Silicon statue:

 ಪುನೀತ್ ರಾಜ್ ಕುಮಾರ್ ಅವ್ರ 2022 ಜನ್ಮದಿನದ ಅಂಗವಾಗಿ ಬೆಂಗಳೂರಿನ ಅಭಿಮಾನಿಯೊಬ್ಬರು ಅಪ್ಪು ಅವರ ತದ್ರೂಪಿ ಸಿಲಿಕಾನ್ ಸ್ಟ್ಯಾಚು(Silicone Statue) ಮಾಡಿಸಿದ್ದಾರೆ. ಬೆಂಗಳೂರಿನ ಪೀಣ್ಯ ಇಂಡಸ್ಟ್ರಿ(Peenya industry)ಯ ಉದ್ಯಮಿ ಅದ್ವಿಕ್ ಈ ಪ್ರತಿಮೆ ಮಾಡಿಸಿದ್ದು, ಖ್ಯಾತ ಶಿಲ್ಪ ಕಲಾವಿದರಾದ ಶ್ರೀಧರ್ ಮೂರ್ತಿ ಈ ಮೇಣದ ಪ್ರತಿಮೆಗೆ ಅಪ್ಪುವಿನ ಭಾವ ತುಂಬಿದ್ದಾರೆ ಸುಮಾರು ಎಂಟು ತಿಂಗಳ ಪರಿಶ್ರಮದ ಫಲವಾಗಿ ಈ ಪ್ರತಿಮೆ ಮೂಡಿ ಬಂದಿದ್ದು ಅಭಿಮಾನಿಗಳನ್ನು ಬಹುವಾಗಿ ಸೆಳೆಯುತ್ತಿದೆ.

ಚೂರು ರೆಡಿಯಾಗಲು ಇಷ್ಟವಿಲ್ಲ, ನಾನು ಫುಲ್ ಟಾಮ್‌ಬಾಯ್‌ ರೀತಿ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಬೆಂಗಳೂರು ರಸ್ತೆಗೆ ಅಪ್ಪು ಹೆಸರು:

ಬೆಂಗಳೂರಿನ ಮೈಸೂರು ರಸ್ತೆಯಿಂದ ವೆಗಾಸಿಟಿ ಮಾಲ್ ಜಂಕ್ಷನ್​ವರೆಗಿನ 12 ಕಿ.ಮೀ ರಸ್ತೆಗೆ ಪುನೀತ್ ರಾಜ್​ಕುಮಾರ್ ಅವರ ಹೆಸರು ಇಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಫೆಬ್ರವರಿ 7ರಂದು ಅದ್ದೂರಿಯಾಗಿ ಉದ್ಘಾಟನೆ ಮಾಡಿದರು. ಪವರ್ ಸ್ಟಾರ್ ಹೆಸರು 12 ಕಿ.ಮೀ ಉದ್ದದ ರಸ್ತೆಗೆ ಇಟ್ಟಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಪುನೀತ್ ರಾಜ್ ಕುಮಾರ್ ಕುಟುಂಬ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಚಿತ್ರರಂಗದ ಅನೇಕರು ಸರ್ಕಾರಕ್ಕೆ ಧನ್ಯವಾದ ಹೇಳುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!