ಎದೆಯಾಳದಲ್ಲಿ ಬಚ್ಚಿಕೊಂಡ ಸವಿ ನೆನಪು ಹಂಚಿಕೊಂಡ ಸುಧಾರಾಣಿ, ಮೊದಲ ಕ್ರಶ್ ಮಾಜಿ ಪಿಎಂ ಅಂತೆ!

By Suvarna News  |  First Published Aug 1, 2023, 2:15 PM IST

 ಜೀವನದ ಮೊದಲ ಕ್ರಷ್​ ಯಾರು ಎಂದು ಕೇಳಿದ ಪ್ರಶ್ನೆಗೆ ನಟಿ ಸುಧಾರಣಾ ಮಾಜಿ ಪ್ರಧಾನಿಯೊಬ್ಬರು ಹೆಸರು ಹೇಳಿದ್ದಾರೆ. ಯಾರವರು?
 


ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋಯಿನ್ ಎಂದೇ ಖ್ಯಾತಿ ಪಡೆದಿರುವ ನಟಿ ಸುಧಾರಾಣಿ (Sudharani).  ಬಾಲ ಕಲಾವಿದೆಯಾಗಿ ಕನ್ನಡದ ಮೇರು ನಟ ಡಾ.ರಾಜ್​ಕುಮಾರ್ ಅವರೊಂದಿಗೆ ಕೆಲವು ಚಿತ್ರಗಳಲ್ಲಿ ನಟಿಸಿ ನಂತರ ನಾಯಕಿಯಾಗಿ ಹಲವಾರು ಹಿಟ್​ ಚಿತ್ರಗಳನ್ನು ನೀಡಿದ ನಟಿಯೀಕೆ. ದೇವತಾ ಮನುಷ್ಯ ಚಿತ್ರದಲ್ಲಿ ಸುಧಾರಾಣಿ ರಾಜ್​ಕುಮಾರ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಜ್ ಅಭಿನಯದ ‘ಭಾಗ್ಯವಂತ’ ಹಾಗೂ ‘ಜೀವನ ಚೈತ್ರ’ ಚಿತ್ರದಲ್ಲೂ ಸುಧಾರಾಣಿ ಅಭಿನಯಕ್ಕೆ ಮನಸೋಲದವರೇ ಇಲ್ಲ. ಈಗ ನಟಿಗೆ 50 ವರ್ಷ. ಆದರೂ ಫಿಟ್​ ಆ್ಯಂಡ್​ ಫೈನ್​ ಆಗಿರುವ ಸುಧಾರಾಣಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಶ್ರೀರಸ್ತು, ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮೂರು ವರ್ಷವಿದ್ದಾಗಲೇ ಬಾಲನಟಿಯಾಗಿ ನಟನೆ ಆರಂಭಿಸಿರುವ ಸುಧಾರಾಣಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಮೇರು ಕಲಾವಿದರ ಜೊತೆ ನಟಿಸಿದ್ದಾರೆ ಈಕೆ.  ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದಾರೆ.   

ಇಂತಿಪ್ಪ ನಟಿ ಈಗ ತಮ್ಮ ಜೀವದನ ಮೊದಲ ಹಲವು ಘಟನೆಗಳ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಳೆಯ ವಿಡಿಯೋ ಒಂದು ಇದೀಗ ಮತ್ತೆ ವೈರಲ್​ ಆಗುತ್ತಿದೆ. ಈ ಸಂದರ್ಶನಲ್ಲಿ  ಜೀವನದ ಮೊದಲ ಹೊಗಳಿಕೆ, ಮೊದಲು ಕ್ಲಾಸ್​ ಬಂಕ್​ (Class bunk) ಮಾಡಿದ್ದು, ಮೊದಲು ಬೈಸಿಕೊಂಡಿದ್ದು... ಹೀಗೆ ಜೀವನದ ಮೊದಲ ಕುರಿತು ಕೇಳಿದ ಪ್ರಶ್ನೆಗಳಿಗೆ ನಟಿ ಪಟಪಟ ಅಂತ ಉತ್ತರಿಸಿದ್ದಾರೆ. ಅದರಲ್ಲಿ ತುಂಬಾ ಗಮನ ಸೆಳೆದದ್ದು ಅವರ ಮೊದಲ ಕ್ರಷ್​ ಯಾರು ಎಂದು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ! ಹೌದು. ಯೂಟ್ಯೂಬ್​ ಚಾನೆಲ್​ ಒಂದಕ್ಕೆ ಅವರು ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದರಲ್ಲಿ ಅವರಿಗೆ  ಮೊದಲು ಹೇಳಿದ ಸುಳ್ಳು ಯಾವುದು ಎಂದು ಕೇಳಲಾಯಿತು. ಅದಕ್ಕೆ ಸುಧಾರಾಣಿ, ಒಹ್​ ಎಂದು ಜೋರಾಗಿ ನಕ್ಕು, ಅದು ನೆನಪಿಲ್ಲ. ಆವಾಗ ನನ್ನ ಸಂಪೂರ್ಣ ಕಾರ್ಯವೆಲ್ಲಾ ಅಮ್ಮನೇ ನೋಡ್ಕೋತಾ ಇದ್ರು. ಸೋ, ನನ್ನ ಪರವಾಗಿ ಅವ್ರು  ಸಾಕಷ್ಟು ಸುಳ್ಳು ಹೇಳಿರ್ತಾರೆ. ನನ್ನದು ನೆನಪಿಲ್ಲ ಎಂದರು. 

Latest Videos

undefined

ರಶ್ಮಿಕಾಗೆ ಮಾತ್ರವಲ್ಲ, ಸುಧಾರಾಣಿಗೂ ಇನ್ಸ್ಟಾದಲ್ಲಿ ಮಿಲಿಯನ್‌ಗಟ್ಟಲೆ ಫಾಲೋಯರ್ಸ್!

ನಂತರ ಮೊದಲ ಕ್ರಷ್​ ಯಾರು ಎಂದು ಕೇಳಿದಾಗ, ಸುಧಾರಾಣಿ ಇದನ್ನು ಹೇಳಿದರೆ ನಿಮಗೆ ತುಂಬಾ ವಿಚಿತ್ರ ಎನಿಸಬಹುದು ಎನ್ನುತ್ತಲೇ ನನ್ನ ಮೊದಲ ಕ್ರಷ್​ ಮಾಜಿ ಪ್ರಧಾನಿ ರಾಜೀವ್​ ಗಾಂಧಿ (Rajeev Gandhi) ಎಂದರು! ಇದಕ್ಕೆ  ಕಾರಣವನ್ನೂ ಕೊಟ್ಟ ಅವರು. ನಾನು ತುಂಬಾ ಚಿಕ್ಕವಳಿದ್ದಾಗ ನನ್ನಪ್ಪ ಇಂಗ್ಲಿಷ್​ ಮ್ಯಾಗಜೀನ್​ ತರ್ತಾ  ಇದ್ರು. ಆಗ ಮ್ಯಾಗಜೀನ್​ ಎಲ್ಲಾ ಓದೋವಷ್ಟು ದೊಡ್ಡವಳು ನಾನಾಗಿರಲಿಲ್ಲ.  ಆದರೆ ಒಮ್ಮೆ ಕವರ್​ ಪೇಜ್​ನಲ್ಲಿ ರಾಜೀವ್​ ಗಾಂಧಿಯವರ ಫೋಟೋ ಇತ್ತು. ಅವರು ಆಗಲೇ ತುಂಬಾ ಇಷ್ಟವಾಗಿಬಿಟ್ಟಿತು. ಕ್ರಷ್​ ಆಯಿತು ಎಂದಿದ್ದಾರೆ.  ನಂತರ ಅವರಿಗೆ ಮೊದಲು ಶ್ಲಾಘನೆ ವ್ಯಕ್ತವಾಗಿದ್ದು ಯಾವಾಗ ಎಂದು ಕೇಳಲಾಯಿತು. ಅದಕ್ಕೆ  ನಟಿ, ಭರತನಾಟ್ಯದ ರಂಗಪ್ರವೇಶ (ಆರಂಗೆಟ್ರಂ) ಮಾಡಿದಾಗ ಅಲ್ಲಿ ಸೇರಿದ್ದ ಬಹುಖ್ಯಾತನಾಮ ಹಿರಿಯ ಪತ್ರಕರ್ತರು ಬಂದು ಹೊಗಳಿದ ಘಟನೆಯನ್ನು ವಿವರಿಸಿದರು. ನಂತರ ಮೊದಲ ಕ್ಲಾಸ್​ ಬಂಕ್​ ವಿಷಯ ಕೇಳಿದಾಗ ನಟಿ, ಆ ಸೀನೇ ಇಲ್ಲ. ನನಗೆ ನನ್ನ ಅಪ್ಪ ಇಲ್ಲಾ ಅಣ್ಣನೇ ಪಿಕಪ್​, ಡ್ರಾಪ್​  ಮಾಡ್ತಿದ್ರು. ಸೋ ಬಂಕ್​ ಮಾಡಲು ಸಾಧ್ಯವೇ  ಇರಲಿಲ್ಲ ಎಂದರು.
  
ನಟನೆಗಾಗಿ ಮೊದಲ ಸಲ ಬೈಸಿಕೊಂಡದ್ದು ಯಾವ ನಿರ್ದೇಶಕರಿಂದಲೂ ಅಲ್ಲ, ಬದಲಿಗೆ ಅಮ್ಮನಿಂದ ಎಂದರು. ನಾನು ನಟನೆಗೆ ಬಂದಾಗ ತುಂಬಾ ಚಿಕ್ಕವಳಿದ್ದರಿಂದ ಯಾವ ನಿರ್ದೇಶಕರೂ ಬೈತಾ ಇರಲಿಲ್ಲ. ಆದ್ರೆ ಅಮ್ಮ ತುಂಬಾ ಸಲ ಬೈದಿದ್ದಾರೆ ಎಂದು ನೆನಪಿಸಿಕೊಂಡರು. ಮೊದಲ ಚಿತ್ರ 100 ದಿನ ಓಡಿದ್ದರ ಕುರಿತು ಹೇಳಿದ ನಟಿ, ಅದು ಡಾ.ರಾಜ್​ಕುಮಾರ್​ (Dr.Rajkumar) ಜೊತೆ ಮಗಳಾಗಿ ನಟಿಸಿದ ಭಾಗ್ಯವಂತ ಚಿತ್ರ ಎಂದರು. 100 ದಿನ ಓಡಿದಾಗ ತಮಗೆ ಬೆಳ್ಳಿಲೋಟ ಕೊಟ್ಟಿದ್ದನ್ನು ನೆನಪಿಸಿಕೊಂಡರು. ಅದೇ ರೀತಿ ಮೊದಲ ವಿದೇಶ ಪ್ರಯಾಣ, ಸಿಂಗಪುರ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಮ್ಮ ಮುಂದಿನ ಪ್ರಾಜೆಕ್ಟ್​ ವಾಸಂತಿನಾಗ ಹಾಗೂ  ಅವತಾರಪುರ ಎಂದು ನಟಿ ವಿವರಣೆ ನೀಡಿದರು.

Shrirasthu Shubhamasthu: ಮಾಧವನ ಪ್ರೇಮ ನಿವೇದನೆಗೆ ತುಳಸಿ ಗ್ರೀನ್‌ ಸಿಗ್ನಲ್ ಕೊಟ್ಟಾಯ್ತು!

click me!