ಸೆಲೆಬ್ರೆಟಿಗಳಲ್ಲಿ ಟ್ರೆಂಡ್ ಆಗುತ್ತಿದೆ ಫ್ರೆಂಡ್ಲಿ ಡಿವೋರ್ಸ್, ಈ ಸಾಲಿಗೆ ಸೇರಿದ ಚಂದನ್ ಶೆಟ್ಟಿ-ನಿವೇದಿತಾ!

Published : Jun 07, 2024, 06:15 PM ISTUpdated : Jun 07, 2024, 06:43 PM IST
ಸೆಲೆಬ್ರೆಟಿಗಳಲ್ಲಿ ಟ್ರೆಂಡ್ ಆಗುತ್ತಿದೆ ಫ್ರೆಂಡ್ಲಿ ಡಿವೋರ್ಸ್, ಈ ಸಾಲಿಗೆ ಸೇರಿದ ಚಂದನ್ ಶೆಟ್ಟಿ-ನಿವೇದಿತಾ!

ಸಾರಾಂಶ

ಸ್ಯಾಂಡಲ್‌ವುಡ್ ಸ್ಟಾರ್ಸ್ ಚಂದನ್ ಶೆಟ್ಟಿ-ನಿವೇದಿತಾ ಗೌಡ ಕೋರ್ಟ್‌ನಲ್ಲಿ ವಿಚ್ಚೇದನ ಪಡೆದು ಕೈ ಕೈ ಹಿಡಿದು ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಫ್ರೆಂಡ್ಲಿ ಡಿವೋರ್ಸ್ ಭಾರಿ ಸುದ್ದಿಯಾಗುತ್ತಿದೆ. ಏನಿದು ಫ್ರೆಂಡ್ಲಿ ವಿಚ್ಚೇದನ?  

ಬೆಂಗಳೂರು(ಜೂ.07) ಸ್ಯಾಂಡಲ್‌ವುಡ್ ಕ್ಯೂಟ್ ಜೋಡಿ ಎಂದೇ ಗುರುತಿಸಿಕೊಂಡಿದ್ದ ರ್ಯಾಪರ್ ಚಂದನ್ ಶೆಟ್ಟಿ, ಕಿರುತೆರೆ ಸ್ಟಾರ್ ನಿವೇದಿತಾ ಗೌಡ ವಿಚ್ಛೇದನ ವಿಚ್ಚೇದನ ಇದೀಗ ಬಾರಿ ಕೋಲಾಹಲ ಸೃಷ್ಟಿಸಿದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಕ್ಕೆ ಹಾಜರಾದ ಈ ಜೋಡಿ ಅಕ್ಕ ಪಕ್ಕ ಕುಳಿತೇ ವಿಚಾರಣೆ ಎದುರಿಸಿದ್ದಾರೆ. ವಿಚ್ಚೇದನ ಮಂಜೂರಿನ ಬಳಿಕ ಕೈ ಕೈ ಹಿಡಿದುಕೊಂಡು ತೆರಳಿದ ವಿಡಿಯೋಗಳು ಭಾರಿ ವೈರಲ್ ಆಗಿದೆ. ಚಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಛೇದನ ಬೆನ್ನಲ್ಲೇ ಮತ್ತೆ ಫ್ಲೆಂಡ್ಲಿ ಡಿವೋರ್ಸ್ ಭಾರಿ ಟ್ರೆಂಡ್ ಆಗುತ್ತಿದೆ. ಸೆಲೆಬ್ರೆಟಿಗಳಲ್ಲಿ ಇದೀಗ ಫ್ರೆಂಡ್ಲಿ ಡಿವೋರ್ಸ್ ಟ್ರೆಂಡ್ ಹೆಚ್ಚಾಗುತ್ತಿದೆ.

ಬಾಲಿವುಡ್‌ನಲ್ಲಿ ಹೆಚ್ಚಾಗಿ ಟ್ರೆಂಡ್ ಇದ್ದ ಈ ಫ್ರೆಂಡ್ಲಿ ಡಿವೋರ್ಸ್ ಇದೀಗ ಸ್ಯಾಂಡಲ್‌ವುಡ್‌ನಲ್ಲೂ ಸದ್ದು ಮಾಡುತ್ತಿದೆ. ಇದರ ಮೂಲ ಮ್ಯೂಚಲ್ ಡಿವೋರ್ಸ್ ಆಗಿದ್ದರೂ ಮತ್ತೊಂದು ಹೆಜ್ಜೆ ಮುಂದೆ ಹೋಗುವ ಜೋಡಿಗಳು ಫ್ರೆಂಡ್ಲಿಯಾಗಿ, ಖುಷಿ ಖುಷಿಯಾಗಿ ದಾಂಪತ್ಯ ಜೀವನ ಅಂತ್ಯಗೊಳಿಸಿ ತಮ್ಮ ದಾರಿ ಹಿಡಿಯುತ್ತಾರೆ. ಇಷೇ ಅಲ್ಲ ಎದುರಿಗೆ ಸಿಕ್ಕಾ ಮುಖ ಸಿಂಡರಿಸುವುದು, ಹಿಂದಿನಿಂದ ಬಯ್ಯುವ ಗೋಳಾಟವಿಲ್ಲ. ಎಲ್ಲವೂ ಫ್ರೆಂಡ್ಲಿ, ಮತ್ತೆ ಎದುರಿಗೆ ಸಿಕ್ಕರೆ ನಗುವಿನೊಂದಿಗೆ ಆತ್ಮೀಯ ಆಲಿಂಗನ, ಉಭಯ ಕುಶಲೋಪರಿ ಸಹಜ. ಕ್ಯಾಮೆರಾ ಎದುರಿಗಿದ್ದರಂತೂ ಎಲ್ಲವೂ ಉತ್ತುಂಗ.

ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್‌ಗೆ ಅರ್ಜಿ ಹಾಕಿದ ಸೆಲೆಬ್ರೆಟಿ!

ವಿಚ್ಚೇಧನ ವೇಳೆಯೂ ಜಗಳವಿಲ್ಲ, ಕಿತ್ತಾಟವಿಲ್ಲ. ಕೈ ಕೈ ಹಿಡಿದುಕೊಂಡು ಕೋರ್ಟ್ ಮುಂದೆ ಹಾಜರಾಗಿ ವಿಚ್ಚೇದನ ಪಡೆದುಕೊಳ್ಳುತ್ತಾರೆ. ಬಳಿಕ ಕೈ ಕೈ ಹಿಡಿದುಕೊಂಡೇ ತೆರಳುತ್ತಾರೆ. ಮತ್ತೆ ಕುಟುಂಬದ ಕಾರ್ಯಕ್ರಮ, ಸಿನಿ ರಂಗದ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಲೈವ್ ವಿಡಿಯೋ ಮೂಲಕವೂ ಸ್ಪಷ್ಟನೆ ನೀಡಿದ ಉದಾಹರಣೆಗಳಿವೆ. 

ಬಾಲಿವುಡ್‌ನಲ್ಲಿ ಫ್ಲೆಂಡ್ಲಿ ಡಿವೋರ್ಸ್‌ಗೆ ಸಾಕಷ್ಟು ಉದಾಹರಣೆಗಳಿವೆ. ಅಮೀರ್ ಖಾನ್ ಹಾಗೂ ಕಿರಣ್ ರಾವ್ ವಿಚ್ಚೇದನ ಇದೇ ಫ್ಲೆಂಡ್ಲಿ ಡಿವೋರ್ಸ್‌ಗೆ ಉತ್ತಮ ಉದಾಹರಣೆ. ಡಿವೋರ್ಸ್ ಬಳಿಕ ಈ ಜೋಡಿ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಮೂಲಕ ಜೊತೆಯಾಗಿ ಕಾಣಿಸಿಕೊಂಡು ತಮ್ಮ ಡಿವೋರ್ಸ್, ದಾಂಪತ್ಯ ಜೀವನದ ಕುರಿತು ಮೆಲುಕು ಹಾಕಿದ್ದಾರೆ.

ಹೃತಿಕ್ ರೋಶನ್ ಹಾಗೂ ಸುಸಾನೆ ಖಾನ್ ಇದೇ ರೀತಿ ಫ್ರೆಂಡ್ಲಿಯಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ. ಇದೀಗ ಮಕ್ಕಳ ವಿಚಾರದಲ್ಲಿ ಇವರಿಬ್ಬರು ಮತ್ತೆ ಒಂದಾಗುತ್ತಾರೆ. ಮಕ್ಕಳ ಕಾರ್ಯಕ್ರಮ, ಶಾಲಾ ಕಾಲೇಜುಗಳಿಗೆ ಜೊತೆಯಾಗಿ ತೆರಳುತ್ತಾರೆ. ಮಕ್ಕಳ ಜೊತೆ ಟ್ರಿಪ್ ಮಾಡಿದ ಘಟನೆಯೂ ಇದೆ. ಆದರೆ ಜೊತೆಯಾಗಿರಲ್ಲ. ವಿಚ್ಚೇದನದ ಬಳಿ ಸ್ನೇಹಿತರಾಗಿ ಮುಂದುವರಿಯುತ್ತಾರೆ. 

ಬಾಲಿವುಡ್‌ನಲ್ಲಿ ಈ ಲಿಸ್ಟ್ ದೊಡ್ಡದಿದೆ. ಕನ್ನಡ ಸಿನಿ ತೆರೆಯಲ್ಲೂ ಈ ರೀತಿಯ ಕೆಲ ಉದಾಹರಣೆಗಳಿವೆ. ಪ್ರಕಾಶ್ ರಾಜ್ ಕೂಡ ಇದೇ ರೀತಿ ಮ್ಯೂಚ್ಯುವಲ್ ಡಿವೋರ್ಸ್ ಪಡೆದುಕೊಂಡಿದ್ದಾರೆ. ಇನ್ನು ಅನು ಪ್ರಭಾಕರ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಕೆಲ ಸೆಲೆಬ್ರೆಟಿಗಳು ಈ ರೀತಿಯ ಫ್ರೆಂಡ್ಲಿ ಡಿವೋರ್ಸ್ ಪಡೆದಿದ್ದಾರೆ.\
ಬಿಗ್‌ ಬಾಸ್‌ ಟು ಡಿವೋರ್ಸ್‌..'ಬೊಂಬೆ..' ಬಾಳಿನಲ್ಲಿ ವಿಲನ್‌ ಆಗಿದ್ಯಾರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?