ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ By Two Love ನಟಿ ಶ್ರೀಲೀಲಾ!

Suvarna News   | Asianet News
Published : Feb 12, 2022, 11:32 PM IST
ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ By Two Love ನಟಿ ಶ್ರೀಲೀಲಾ!

ಸಾರಾಂಶ

ಸ್ಯಾಂಡಲ್‌ವುಡ್‌ ಹಾಗೂ ಟಾಲಿವುಡ್‌ನಲ್ಲಿ ಸಖತ್​ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಇಬ್ಬರು ಮುದ್ದಾದ ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. 

ಸ್ಯಾಂಡಲ್‌ವುಡ್‌ (Sandalwood) ಹಾಗೂ ಟಾಲಿವುಡ್‌ನಲ್ಲಿ (Tollywood) ಸಖತ್​ ಬ್ಯುಸಿಯಾಗಿರುವ ನಟಿ ಶ್ರೀಲೀಲಾ (Sreeleela) ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಅಭಿನಯದ 'ಬೈಟು ಲವ್' (By Two Love) ಸಿನಿಮಾ ಫೆಬ್ರವರಿ 18ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ. ಈ ಮಧ್ಯೆ ಶ್ರೀಲೀಲಾ ಅವರು ರೀಲ್​ ಲೈಫ್​ನಲ್ಲಿ ಮಾತ್ರವಲ್ಲದೆ ರಿಯಲ್​ ಲೈಫ್​ನಲ್ಲೂ ಹೀರೋಯಿನ್​ ಆಗಿದ್ದಾರೆ. ಹೌದು! ಶ್ರೀಲೀಲಾ ಅವರು ಇಬ್ಬರು ಮುದ್ದಾದ ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. ಮಾತೃಶ್ರೀ‌ ಮನೋವಿಕಾಸ ಕೇಂದ್ರದ ಇಬ್ಬರು ದಿವ್ಯಾಂಗ ಮಕ್ಕಳಾದ 'ಗುರು' 8 ತಿಂಗಳ ಗಂಡು ಮಗು ಹಾಗೂ 'ಶೋಭಿತ' ಅನ್ನೋ ಹೆಣ್ಣು ಮಗುವನ್ನು ಶ್ರೀಲೀಲಾ ದತ್ತು ಪಡೆದಿದ್ದಾರೆ.

'ಬೈಟು ಲವ್' ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರುವ ಶ್ರೀಲೀಲಾ, ಆ ಮಗುವಿನೊಂದಿಗೆ ಬೆಸೆದಿದ್ದ ಬಂಧ ಮತ್ತು ಮಾತೃಶ್ರೀ‌ ಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ನು ನೋಡಿದೊಡನೆ ಶ್ರೀಲೀಲಾ ಅಕ್ಷರಶಃ ಭಾವುಕರಾದರು. ಮಾತ್ರವಲ್ಲದೇ ಇಬ್ಬರು ಮಕ್ಕಳನ್ನು ದತ್ತು ಪಡೆದು ಇತರರಿಗೆ ಸ್ಫೂರ್ತಿ ತುಂಬಿದ್ದಾರೆ. ಇಷ್ಟು ಕಿರಿಯ ವಯಸ್ಸಿನಲ್ಲಿ ಮಕ್ಕಳನ್ನು ದತ್ತು ಪಡೆದು ಶ್ರೀಲೀಲಾ ಹಲವಾರು ಮಂದಿಗೆ ಮಾದರಿಯಾಗಿದ್ದಾರೆ. ಈ ವೇಳೆ 'ಬೈಟು ಲವ್' ಚಿತ್ರದ ನಿರ್ದೇಶಕ ಹರಿ ಸಂತೋಷ್‌ (Hari Santhosh), ಶ್ರೀಲೀಲಾ ಅವರಿಗೆ ಸಾಥ್​ ನೀಡಿದ್ದು, ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ತಾವು ದತ್ತು ಪಡೆದ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಲೀಲಾ ವಹಿಸಿಕೊಂಡಿದ್ದಾರಂತೆ.

'By Two ಲವ್': ಫೆ.25ಕ್ಕೆ ಧನ್ವೀರ್-ಶ್ರೀಲೀಲಾ ಸಿನಿಮಾ ರಿಲೀಸ್

ಶ್ರೀಲೀಲಾ ಅಭಿನಯದ 'ಬೈಟು ಲವ್' ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದ್ದು, ಈ‌ ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದ್ದು, ಅಂತಹ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಎಂದು ಶ್ರೀಲೀಲಾ ಹೇಳಿದ್ದಾರೆ. ಸಿಂಪಲ್ ಸುನಿ (Simple Suni) ನಿರ್ದೇಶನದ 'ಬಜಾರ್' (Bazar) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಧನ್ವೀರ್ ಗೌಡ (Dhanveer Gowda) 'ಬೈಟು ಲವ್' ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೆವಿಎನ್‌ ಬ್ಯಾನರ್‌ನಲ್ಲಿ (KVN Banner) ನಿಶಾ ವೆಂಕಟ್ ಹಾಗೂ ಸುಪ್ರೀತ್ ನಿರ್ಮಿಸುತ್ತಿದ್ದು, ಹರಿ ಸಂತೋಷ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 



'ಬೈಟು ಲವ್'ಚಿತ್ರ ಈ ಕಾಲದ ಯುವಕ ಯುವತಿಯರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಒಂದು ವಯಸ್ಸು ಆದಮೇಲೆ ಯುವಕ, ಯುವತಿಯರು ಎಲ್ಲವನ್ನೂ ಶೇರ್‌ ಮಾಡ್ತಾರೆ. ಅದಕ್ಕೆ ಬೈಟು ಅಂತ ಹೆಸರಿಟ್ಟೆವು ಎಂದು ನಿರ್ದೇಶಕ ಹರಿ ಸಂತೋಷ್‌ ಹೇಳಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಕ್ಯಾಮೆರ ಕೈಚಳಕ, ಅಜನೀಶ್‌ ಲೋಕನಾಥ್‌ (Ajaneesh Loknath) ಸಂಗೀತ ಸಂಯೋಜನೆ ಹಾಗೂ ಯೋಗಾನಂದ್‌ ಸಂಭಾಷಣೆ ಚಿತ್ರಕ್ಕಿದೆ. ಮೊದಲ ಚಿತ್ರ 'ಬಜಾರ್'ನಲ್ಲಿ ಮಾಸ್‌ ಲುಕ್‌ನಲ್ಲಿ ನಟಿಸಿದ್ದ ಧನ್ವೀರ್‌ ಈ ಚಿತ್ರದಲ್ಲಿ ಲವರ್‌ ಬಾಯ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ಅಚ್ಯುತ್​ ಕುಮಾರ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ.

'By Two ಲವ್'ನಲ್ಲಿ ಐ ಹೇಟ್ ಲವ್ ಎಂದ ಶೋಕ್ದಾರ್

ಧನ್ವೀರ್ ಹಾಗೂ ಶ್ರೀಲೀಲಾ ಮದುವೆ ಆಗುತ್ತಿರುವ ಈ ಚಿತ್ರದ ಲುಕ್ ಪೋಸ್ಟರ್‌ ಕೆಲ ತಿಂಗಳ ಹಿಂದಷ್ಟೇ ರಿವೀಲ್ ಆಗಿತ್ತು. ವಿಶೇಷವಾಗಿ ಶ್ರೀಲೀಲಾ ಮಡಿಲಿನಲ್ಲಿ ಒಂದು ವರ್ಷದ ಕೂಸು ಕುಳಿತುಕೊಂಡು, ಇಬ್ಬರು ಮದುವೆ ಆಗುವುದನ್ನು ನೋಡುತ್ತಿತ್ತು. ಸುಮಾರು 70 ದಿನಗಳಿಗೂ ಹೆಚ್ಚು ಕಾಲ 'ಬೈಟು ಲವ್' ಸಿನಿಮಾದ ಚಿತ್ರೀಕರಣ ನಡೆದಿದೆ. ಇನ್ನು ಧನ್ವೀರ್ 'ಬಂಪರ್‌' (Bumper) ಚಿತ್ರದಲ್ಲೂ ನಟಿಸುತ್ತಿದ್ದು, 'ಕೆಜಿಎಫ್' (KGF) ಮೊದಲನೇ ಭಾಗದಲ್ಲಿ ನಟಿಸಿದ್ದ ಗರುಡ ಖ್ಯಾತಿಯ ರಾಮಚಂದ್ರ ರಾಜು (Ramachandra Raju) ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ