ಡ್ರಗ್ಸ್‌ ತೆಗೆದುಕೊಂಡಿಲ್ಲ, ಕರುಳು ತೆಗೆದು ಪಾತ್ರೆ ತರ ತೊಳೆಯುತ್ತಿದ್ದೆ: ಮಗ ರಾಕೇಶ್ ಸಾವಿನ ಬಗ್ಗೆ ಆಶಾ ಕಣ್ಣೀರು

By Vaishnavi Chandrashekar  |  First Published Dec 11, 2023, 5:15 PM IST

ಚೆಲುವಿನ ಚಿತ್ತಾರ ಪೆಪ್ಸಿ ಬುಲ್ಲಿ ಇದ್ದಕ್ಕಿದ್ದಂತೆ ಅಗಲಿದರ ಹಿಂದಿನ ಕಾರಣ ಹಂಚಿಕೊಂಡ ತಾಯಿ ಆಶಾ ರಾಣಿ. 


ಕನ್ನಡ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ರಾಕೇಶ್ ಅವರನ್ನು ಚೆಲುವಿನ ಚಿತ್ತಾರ ಪೆಪ್ಸಿ ಎಂದೇ ಕರೆಯುತ್ತಿದ್ದರು. ಅಲ್ಲಿಂದ ಯಾರೂ ನೋಡಿದರೂ ಬುಲ್ಲಿ ಪೆಪ್ಸಿ ರಾಕೇಶ್ ಎಂದು ಕರೆಯುತ್ತಿದ್ದರು. ರಾಕೇಶ್ ತಾಯಿ ಆಶಾ ರಾಣಿ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ರಾಕೇಶ್ ಸಾವಿಗೆ ಡ್ರಗ್ಸ್‌ ಕಾರಣ, ಗ್ಯಾಂಗ್ರಿನ್ ಕಾರಣ ಎಂದು ಅನೇಕರು ಸುದ್ದಿ ಮಾಡಿದರು. ಹೀಗಾಗಿ ಸ್ವತಃ ಆಶಾ ರಾಣಿ ಸ್ಪಷ್ಟನೆ ಕೊಟ್ಟಿದ್ದಾರೆ. 

'ರಾಕೇಶ್‌ ದೇಹದಲ್ಲಿ ಪ್ಲೇಟ್‌ಲೆಟ್‌ ತುಂಬಾ ಕಡಿಮೆ ಇತ್ತು. ಆಸ್ಪತ್ರೆ ಸೇರಿ 45 ದಿನಗಳ ಕಾಲ ಕಷ್ಟ ಪಟ್ಟಿದ್ದಾನೆ. ರಾಕೇಶ್ ಮಲಗಿದೆ ಹಿಂದೆ ಏನ್ ಏನೋ ಕಥೆ ಕಟ್ಟಿಬಿಟ್ಟರು. ಆತ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದ, ಗ್ಯಾಂಗ್ರಿನ್ ಆಗಿಬಿಟ್ಟಿತ್ತು ಅದಾಗಿತ್ತು ಇದಾಗಿತ್ತು ಸುದ್ದಿ ಮಾಡಿದರು. ನನ್ನ ಮಗ ಅಂತ ಹೇಳುತ್ತಿಲ್ಲ ಆ ರೀತಿ ವ್ಯಕ್ತಿ ಮಗನಾಗಿ ಸಿಗುವುದಕ್ಕೆ ಪುಣ್ಯ ಮಾಡಿರಬೇಕು. ಯಾವ ಕೆಟ್ಟ ಅಭ್ಯಾಸನೂ ಇರಲಿಲ್ಲ. ಡ್ಯಾನ್ಸ್‌ ಅನ್ನೋ ಚಟ ಬಿಟ್ಟರೆ ಬೇರೆ ಏನೂ ಇರಲಿಲ್ಲ. 4 ರಿಂದ 5 ಲಕ್ಷ ಜನರಲ್ಲಿ ಒಬ್ಬರಿಗೆ ಬರುವ ಸಿಂಡ್ರೋಮ್ ಅತನಿಗೆ ಬಂದಿತ್ತು. ಶೇಷಾದ್ರಿ ಪುರಂನಲ್ಲಿರುವ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದರು..ಇದ್ದಕ್ಕಿದ್ದಂತೆ ಫಾರಿನ್‌ಗೆ ಹೋಗಿ ಬಿಟ್ಟರು. ಅವರನ್ನು ಸಂಪರ್ಕ ಮಾಡಲು ತುಂಬಾ ಪ್ರಯತ್ನ ಮಾಡಿದ್ವಿ.' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಆಶಾ ರಾಣಿ ಮಾತನಾಡಿದ್ದಾರೆ.

Latest Videos

undefined

ಮದ್ವೆಯಾಗಿ ಎರಡು ವರ್ಷ ತುಂಬಾ ಕಷ್ಟ ಆಯ್ತು, ಮನೆಯಲ್ಲಿ ಎರಡು ಕತ್ತಿಗಳಿತ್ತು: ನಟಿ ಸಂಗೀತಾ

'ಒಬ್ಬರ ಸಲಹೆ ಮೇಲೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋದ್ವಿ ಅಲ್ಲಿ ಚಿಕಿತ್ಸೆ  ಕೊಡಿಸಲು ಆರಂಭಿಸಿದೆವು. ಮನುಷ್ಯನಿಗೆ ವೈಟ್ ಪ್ಲೇಟ್‌ಲೆಟ್‌ ಹುಟ್ಟಿ 3ರಿಂದ 4 ದಿನ ಇರುತ್ತಿತ್ತು ಆದರೆ ರಾಕೇಶ್‌ಗೆ ಆಗ ಹುಟ್ಟಿ ಆಗ ಸಾಯುತ್ತಿತ್ತು. ಇದರಿಂದ ಸುಸ್ತಾಗುತ್ತಿತ್ತು...ಔಷದಿ ತೆಗೆದುಕೊಳ್ಳು ಆರಂಭಿಸಿದಾಗ ದಪ್ಪ ಆಗಿಬಿಟ್ಟ. ನಾನು ನಟ ಆಗಬೇಕು ಅಂತ ಇರುವ ವ್ಯಕ್ತಿ ದಪ್ಪ ಆಗಿದ್ದೀನಿ ಎಂದು ಕನ್ನಡಿ ನೋಡಿ ಕಣ್ಣೀರಿಡುತ್ತಿದ್ದ. ತುಂಬಾ ದೈರ್ಯ ಇದ್ದ ಹುಡುಗ. ದೇಹದಲ್ಲಿ ಒಂದು ಆಪರೇಷನ್ ಮಾಡಿಸಿದರೆ ಕಡಿಮೆ ಆಗುತ್ತೆ ಅಂದ್ರು 35 ಸಾವಿರ ಕೈಯಲ್ಲಿ ಇಟ್ಟುಕೊಂಡು ಹೋಗಿದ್ದು' ಎಂದು ಆಶಾ ರಾಣಿ ಮಗ ಕೊನೆ ದಿನಗಳನ್ನು ನೆನಪಿಸಿಕೊಂಡಿದ್ದರು. 

ಡಿ-ಬಾಸ್‌ ಫೋಟೋ ಬಳಸಿ ನೆಗೆಟಿವ್ ಕಾಮೆಂಟ್; ಕರ್ಮದ ಏಟು ತಪ್ಪಿಲ್ಲ ಎಂದು ಟಾಂಗ್ ಕೊಟ್ಟ ಧನ್ವೀರ್!

'ಲ್ಯಾಪರೋಸ್ಕೂಪಿ ಮಾಡಿಸಿದರೆ ನೋವು ಕಡಿಮೆ ಅಂದ್ರು ಅದಿಕ್ಕೆ ಒಪ್ಪಿಕೊಂಡು ಮಾಡಿಸಿದೆವು. ವೈದ್ಯರು ಮಾಡದೆ ಸ್ಟುಡೆಂಟ್‌ ಅವರಿಂದ ಮಾಡಿಸಿದ ಕಾರಣ ಮಾಡುವಾಗಲೇ ಕರಳು ಕಟ್ ಮಾಡಿಕೊಂಡು ಹೋಗಿತ್ತು. ಕರಳ ಮೊದಲೇ ಕೊಳೆತಿತ್ತು ಎಂದು ವೈದ್ಯರು ಹೇಳಿದ್ದರು. 75 ದಿನ ಆಸ್ಪತ್ರೆಯಲ್ಲಿ ಇದ್ದೆಊಟನೇ ಮಾಡುತ್ತಿರಲಿಲ್ಲ. ದಿನ ಕರುಳು ಹೊರ ತೆಗೆಯುವುದು ಪಾತ್ರೆ ತೊಳೆಯುವ ರೀತಿ ತೊಳೆಯುವುದು ಮತ್ತೆ ಒಳೆಗೆ ಹಾಕುವುದು. ಒಂದು ದಿನವೂ ನೋವು ಅಂತ ಹೇಳಿಲ್ಲ ಅಷ್ಟು ಸಹಿಸಿಕೊಂಡಿದ್ದೆ. ಕಡೆ ದಿನವೂ ಪಲ್ಸ್‌ ರೇಟ್ ಕಡಿಮೆ ಆಗುತ್ತಿತ್ತು ಆಗ ಕೂಡ ಅಳಬೇಡ ಎನ್ನುತ್ತಿದ್ದ' ಎಂದಿದ್ದಾರೆ ಆಶಾ ರಾಣಿ. 

click me!