ಸದಾಶಿವನಗರ ಮನೆ ಒಡೆಸಿದ ಪುನೀತ್: ಜನರ ಆರೋಪಕ್ಕೆ ಕೊಟ್ಟ ಉತ್ತರಕ್ಕೆ ಜೈ ಎಂದ ಫ್ಯಾನ್ಸ್!

By Shriram Bhat  |  First Published Nov 22, 2024, 5:48 PM IST

ಡಾ ರಾಜ್‌ಕುಮಾರ್ ಅವರಿಗೆ ಹೇಳಲು ಅವರು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ಆದರೆ ಅದೇ ವೇಳೆಗೆ ಅನಾರೋಗ್ಯಗೊಂಡಿದ್ದ ಡಾ ರಾಜ್‌ಕುಮಾರ್ ಅವರು 2006ರಲ್ಲಿ ವಿಧಿವಶರಾದರು. ಆ ಬಳಿಕ 2007ರಲ್ಲಿ ಡಾ ರಾಜ್‌ ಅವರ ಹಿರಿಯ ಮಗ ಶಿವರಾಜ್‌ಕುಮಾರ್ ಅವರು ಮಾನ್ಯತಾ ಟೆಕ್ ಪಾರ್ಕ್‌..


ಚೆನ್ನೈನಲ್ಲಿ ವಾಸವಿದ್ದ ಡಾ ರಾಜ್‌ಕುಮಾರ್ ( Dr Rajkumar) ಕುಟಂಬ 1978ರಲ್ಲಿ ಸದಾಶಿವನಗರದ (Sadashiva Nagar) ಭವ್ಯ ಬಂಗಲೆಗೆ ಶಿಫ್ಟ್ ಆಗಿತ್ತು. 11 ಲಕ್ಷಕ್ಕೆ ಕೊಂಡುಕೊಂಡಿದ್ದ ಆ ಮನೆಯಲ್ಲಿ ಡಾ ರಾಜ್‌ಕುಮಾರ್ ಅವರ ಇಡೀ ಕುಟುಂಬ ವಾಸವಾಗಿತ್ತು. ಆದರೆ, ಮೂರೂ ಜನ ಗಂಡುಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ (Puneeth Rajkumar) ಮದುವೆಯಾಗಿ ಅವರೆಲ್ಲರ ಫ್ಯಾಮಿಲಿ ಬೆಳೆದ ಮೇಲೆ ಮನೆ ಚಿಕ್ಕದು ಎನ್ನಿಸತೊಡಗಿತ್ತು. ಮನೆಗೆ ಬಂದುಹೋಗುವವರ ಸಂಖ್ಯೆಯೂ ಬಹಳ ಹೆಚ್ಚಿತ್ತು. ಈ ಕಾರಣಕ್ಕೆ ಎಲ್ಲರೂ ಬೇರೆಬೇರೆ ಮನೆಯಲ್ಲಿ ವಾಸವಾಗಲು ನಿರ್ಧರಿಸಿದರು.  

ಈ ವಿಷಯವನ್ನು ಡಾ ರಾಜ್‌ಕುಮಾರ್ ಅವರಿಗೆ ಹೇಳಲು ಅವರು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ಆದರೆ ಅದೇ ವೇಳೆಗೆ ಅನಾರೋಗ್ಯಗೊಂಡಿದ್ದ ಡಾ ರಾಜ್‌ಕುಮಾರ್ ಅವರು 2006ರಲ್ಲಿ ವಿಧಿವಶರಾದರು. ಆ ಬಳಿಕ 2007ರಲ್ಲಿ ಡಾ ರಾಜ್‌ ಅವರ ಹಿರಿಯ ಮಗ ಶಿವರಾಜ್‌ಕುಮಾರ್ ಅವರು ಮಾನ್ಯತಾ ಟೆಕ್ ಪಾರ್ಕ್‌ ಬಳಿ ಮನೆ ಕಟ್ಟಿಸಿಕೊಂಡು ಬೇರೆ ಹೋದರು. ಬಳಿಕ 2009ರಲ್ಲಿ ಇಂದು ದಿವಂಗತ ಎನಿಸಿರುವ ನಟ ಪುನೀತ್ ರಾಜ್‌ಕುಮಾರ್ ಅವರು ಮನೆ ಒಡೆಯಲು ನಿರ್ಧಾರ ಮಾಡಿದ್ದರು.

Latest Videos

undefined

'ಊಟ ಇಲ್ಲ ಹೋಗು' ಅಂತ ತಳ್ಳಿದಾಗ ಉಪೇಂದ್ರ ಏನ್ ಮಾಡಿದ್ರು, ಬಳಿಕ ಏನಾಯ್ತು? 
 
'ಮುಂದೊಂದು ದಿನ ನಮ್ಮೊಳಗೆ ಮನಸ್ತಾಪ ಬಂದು ಬೇರೆಬೇರೆ ಆಗೋದಕ್ಕಿಂತ ಈಗ ಎಲ್ಲರೂ ಚೆನ್ನಾಗಿರುವಾಗಲೇ ಮನೆಯನ್ನು ಬೇರೆಬೇರೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಪುನೀತ್ ಅವರೇ ಪಾರ್ವತಮ್ಮನವರಿಗೆ ಹೇಳಿದರಂತೆ. ಅದಕ್ಕೊಪ್ಪಿದ ಪಾರ್ವತಮ್ಮನವರ ಆಶಯದಂತೆ ಡಾ ರಾಜ್‌ಕುಮಾರ್ ವಾಸವಿದ್ದ ಮನೆಯನ್ನು ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ ಒಡೆದು ಹಾಕಲಾಯಿತು. ಆಗ ನಟ ಪುನೀತ್ ರಾಜ್‌ಕುಮಾರ್ ಅವರು 'ಮನೆ ಮುರುಕ' ಎಂಬ ಟೀಕೆಯನ್ನ ಎದುರಿಸಿದ್ದು ಎಲ್ಲರಿಗೂ ಗೊತ್ತು. 

2012ರಲ್ಲಿ ಡಾ ರಾಜ್‌ಕುಮಾರ್ ವಾಸವಿದ್ದ ಮನೆಯನ್ನು ಕೆಡವಿ ಕಟ್ಟಲಾದ ಹೊಸ ಎರಡು ಮನೆಗಳಲ್ಲಿ ಗೃಹಪ್ರವೇಶ ಸಮಾರಂಭ ನಡೆಯಿತು. ಒಂದೇ ತರಹವಿದ್ದ ಎರಡು ಮನೆಗಳಲ್ಲಿ, ಒಂದರಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಉಳಿದುಕೊಂಡರೆ ಇನ್ನೊಂದರಲ್ಲಿ ನಟ ಪುನೀತ್ ರಾಜ್‌ಕುಮಾರ್ ಫ್ಯಾಮಿಲಿ ವಾಸ ಶುರುಮಾಡಿತು. ಆದರೆ, ಆ ಬಗ್ಗೆ ಹಲವರಿಂದ ನಟ ಪುನೀತ್ ರಾಜ್‌ಕುಮಾರ್ ಅವರು ಟೀಕೆ ಎದುರಿಸಬೇಕಾಯ್ತು. 

ಸಮಂತಾಗೆ ಕಾಳು ಹಾಕ್ತಿದಾರಾ ಅರ್ಜುನ್ ಕಪೂರ್; ಸಿಂಗಲ್ಲಾಗಿರೋ ಇಬ್ರೂ ಮಿಂಗಲ್ ಆಗ್ತಾರಾ?

'ಅಣ್ಣಾವ್ರ ಮನೆ ಒಡೆಇದ್ದು ತಪ್ಪು, ಅದನ್ನು ಮ್ಯೂಸಿಯಂ ಮಾಡಬಹುದಿತ್ತು. ಬೇಕಾದಷ್ಟು ಹಣ ಇದ್ದ ಕುಟುಂಬವಾದ್ದರಿಂದ ಬೇರೆ ಸೈಟ್‌ ಖರೀದಿಸಿ ಮನೆ ಕಟ್ಟಬಹುದಿತ್ತು. ಡಾ ರಾಜ್ ಓಡಾಡಿದ್ದ ಹೆಜ್ಜೆ ಗುರುತು ಇರುವ ಮನೆಯನ್ನು ನೆಲಸಮ ಮಾಡಿದ್ದು ಸರಿಯಲ್ಲ. ಅಣ್ಣಾವ್ರು ಕೇವಲ ಆ ಫ್ಯಾಮಿಲಿ ಸೊತ್ತಲ್ಲ, ಇಡೀ ಕರ್ನಾಟಕದ ಆಸ್ತಿ' ಎಂದು ಹಲವರು ಪುನೀತ್ ರಾಜ್‌ಕುಮಾರ್ ವಿರುದ್ಧ ಅಂದು ಟೀಕಾ ಪ್ರಹಾರ ಮಾಡಿದ್ದರು. 

ಅದಕ್ಕೆ ನಟ ಪುನೀತ್ ರಾಜ್‌ಕುಮಾರ್ ಅವರು ಅಂದು ಮಾರ್ಮಿಕವಾದ ಉತ್ತರ ಕೊಟ್ಟಿದ್ದರು. ಆ ಬಳಿಕ ಟೀಕೆ ಹೆಚ್ಚೂಕಡಿಮೆ ನಿಂತುಹೋಗಿದೆ. ಹಾಗಿದ್ದರೆ ಪುನೀತ್ ರಾಜ್‌ಕುಮಾರ್ ಕೊಟ್ಟ ಉತ್ತರ ಏನಿತ್ತು ನೋಡಿ.. 'ಅಣ್ಣಾವ್ರನ್ನ ಕೇವಲ ಒಂದು ಮನೆಗೆ ಸೀಮಿತ ಮಾಡ್ಬೇಡಿ.. ಅಣ್ಣಾವ್ರು ಆ ಮನೆಯಲ್ಲಿ ವಾಸ ಇದ್ದಿದ್ದು ನಿಜ, ನಮಗೂ ಕೂಡ ಆ ಮನೆಯ ಬಗ್ಗೆ ಸೆಂಟಿಮೆಂಟ್ ಇರೋದೂ ನಿಜ. ಇವತ್ತು ನಮ್ಮ ಅನುಕೂಲಕ್ಕಾಗಿ ಬದಲಾಯಿಸಿಕೊಳ್ತಾ ಇದೀವಿ. 

ಅತಿಲೋಕ ಸುಂದರಿ ಜೊತೆ ಚಿರಂಜೀವಿ ಡಾನ್ಸ್ ಮಾಡುವಾಗ ಡಾಕ್ಟರ್‌-ನರ್ಸ್ ಅಲ್ಲಿದ್ರು ಯಾಕೆ?

ಹಾಗೆಂದ ಮಾತ್ರಕ್ಕೆ ಅಣ್ಣಾವ್ರ ನೆನಪು ದೂರ ಆಗೋದಿಲ್ಲ. ಯಾಕಂದ್ರೆ, ಅಣ್ಣಾವ್ರು ಕೇವಲ ಸದಾಶಿವನಗರದ '60X40' ಸೈಟಿನಲ್ಲಿ ಮನೆ ಕಟ್ಟಿದವ್ರಲ್ಲ. ಕನ್ನಡನಾಡಿನ ಪ್ರತಿಯಬ್ಬರ ಮನೆಮನದಲ್ಲಿ ವಾಸ ಮಾಡಿದಂಥವ್ರು. ಹೀಗಾಗಿ ಅವ್ರಿಗೆ ಮನೆ ಅಂದ್ರೆ ಕೇವಲ ಸದಾಶಿವನಗರದ ಮನೆ ಅಲ್ಲ, ಕನ್ನಡಿಗರೆಲ್ಲರ ಹೃದಯದಲ್ಲೂ ಅಣ್ಣಾವ್ರು ವಾಸವಿದ್ದಾರೆ. ಹೀಗಾಗಿ ನೀವು ಅಣ್ಣಾವ್ರ ಮನೆ ಎಂದರೆ ಸದಾಶಿವನಗರದ ಮನೆ ಎಂದುಕೊಂಡರೆ ತಪ್ಪು, ಇದ್ರಲ್ಲಿ ವಿವಾದ ಮಾಡುವಂಥದ್ದು ಏನೂ ಇಲ್ಲ' ಎಂದಿದ್ದರು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

click me!