ಬಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರ ಕನ್ನಡಕ್ಕೆ | ಕನ್ನಡಕ್ಕೆ ಬರಲಿದೆ ’ಬದಾಯಿ ಹೋ’ ಸಿನಿಮಾ | ರಿಮೇಕ್ ಹಕ್ಕನ್ನು ಖರೀದಿಸಿದ್ದಾರೆ ಬೋನಿ ಕಪೂರ್
ಬೆಂಗಳೂರು (ಮಾ. 20): ಬಾಲಿವುಡ್ ಸೂಪರ್ ಹಿಟ್ ಸಿನಿಮಾ ’ಬದಾಯಿ ಹೋ’ ಕನ್ನಡಕ್ಕೆ ರಿಮೇಕಾಗುತ್ತಿದೆ. ಖ್ಯಾತ ನಿರ್ಮಾಪಕ ಬೋನಿ ಕಪೂರ್ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ರಿಮೇಕ್ ಹಕ್ಕನ್ನು ಖರೀದಿಸಿದ್ದಾರೆ.
ಏಕ್ತಾ ಕಪೂರ್‌ನನ್ನು ಹಿಂಬಾಲಿಸುತ್ತಿದ್ದ ಕ್ಯಾಬ್ ಡ್ರೈವರ್; ಕಾರಣ ಇಂಟರೆಸ್ಟಿಂಗ್!
’ಬದಾಯಿ ಹೋ’ ಸಿನಿಮಾ 2018 ರಲ್ಲಿ ತೆರೆ ಕಂಡಿದ್ದು ಬಾಕ್ಸಾಫೀಸ್ ನಲ್ಲಿ 200 ಕೋಟಿ ಗಳಿಸಿ ಭರ್ಜರಿ ಯಶಸ್ಸು ಕಂಡಿತ್ತು. ಆಯುಷ್ಮಾನ್ ಖುರಾನಾ, ಸನ್ಯಾ ಮಲೋತ್ರಾ, ಗಜರಾಜ್ ರಾವ್ ಆಗೂ ನೀನಾ ಗುಪ್ತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಡವಾಗಿ ಗರ್ಭಿಣಿಯಾಗುವ ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳ ಕಥೆಯನ್ನು ಇಟ್ಟುಕೊಂಡ ಚಿತ್ರ ಇದಾಗಿದೆ.
ಆಪ್ತ ಸಿಬ್ಬಂದಿಗೆ ಮನೆ ಖರೀದಿಸಲು 50 ಲಕ್ಷ ಕೊಟ್ಟ ಅಲಿಯಾ!
ಬಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರವೊಂದು ಕನ್ನಡಕ್ಕೆ ಬರುತ್ತಿರುವುದು ಖುಷಿಯ ವಿಚಾರ.