4 ಭಾಷೆಗಳಲ್ಲಿ 1 ಸಾವಿರ ಸ್ಕ್ರೀನ್‌ನಲ್ಲಿ ಬರಲಿದೆ ಉದ್ಘರ್ಷ

Published : Mar 20, 2019, 09:47 AM IST
4 ಭಾಷೆಗಳಲ್ಲಿ 1 ಸಾವಿರ ಸ್ಕ್ರೀನ್‌ನಲ್ಲಿ ಬರಲಿದೆ ಉದ್ಘರ್ಷ

ಸಾರಾಂಶ

ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಉದ್ಘರ್ಷ ಮಾ. 22 ಕ್ಕೆ ತೆರೆ ಮೇಲೆ |  ನಾಲ್ಕು ಭಾಷೆಗಳಲ್ಲಿ 1000 ಸ್ಕ್ರೀನ್‌ನಲ್ಲಿ ಬಿಡುಗಡೆ | ಸುನೀಲ್ ಕುಮಾರ್ ದೇಸಾಯಿಯವರ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ 

ಬೆಂಗಳೂರು (ಮಾ. 20): ಸುನೀಲ್‌ಕುಮಾರ್ ದೇಸಾಯಿ ಅವರ ‘ಉದ್ಘರ್ಷ’ ಸಿನಿಮಾ ಇದೇ ಮಾ.22 ರಂದು ತೆರೆಗೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲೂ ಒಂದು ಸಾವಿರಕ್ಕೂ
ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ.

ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಇಬ್ಬರು ಬೇಬಿ ಡಾಲ್ಸ್

ಈ ಸಂತಸವನ್ನು ಹೇಳಿಕೊಂಡಿದ್ದು ಸ್ವತಃ ದೇಸಾಯಿ ಅವರೇ. ಕನ್ನಡದಲ್ಲೇ 500 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ವಿತರಕ ಜಾಕ್ ಮಂಜು ಅವರು ಈ ಚಿತ್ರವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಅನೂಪ್‌ಸಿಂಗ್ ಠಾಕೂರ್, ಕಬೀರ್‌ಸಿಂಗ್ ದುಹಾನ್, ಕಬಾಲಿಯ ಸಾಯಿ ಧನ್ಸಿಕಾ, ಶ್ರದ್ಧಾ ದಾಸ್, ಕನ್ನಡದ ಕಿಶೋರ್, ತಾನ್ಯಾ ಹೋಪ್ ಹೀಗೆ ಕಲಾವಿದರ ದೊಡ್ಡ ದಂಡೇ ಇದೆ.

ಸುಮಲತಾ ಬೆಂಬಲಿಸಿದ ನಟ ಯಶ್, ದರ್ಶನ್ ಗೆ ಹೊಸ ಟೆನ್ಶನ್!

ಕಲಾವಿದರಾಗಿ ಇವರೆಲ್ಲ ಎಲ್ಲ ಭಾಷೆಗಳಿಗೂ ಗೊತ್ತಿದ್ದಾರೆ. ಈ ಕಾರಣಕ್ಕೆ ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೇರೆ ಭಾಷೆಯ ಪ್ರೇಕ್ಷಕರ ಮುಂದೆಯೂ ದರ್ಶನ ಕೊಡುತ್ತಿದೆ. ‘ಉದ್ಘರ್ಷ ಸಿನಿಮಾ ನಾಲ್ಕು ಭಾಷೆಯಲ್ಲೂ ಏಕ ಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಬೇರೆ ಬೇರೆ ಸ್ಕ್ರೀನ್‌ಗಳಲ್ಲಿ ನಾಲ್ಕು ಭಾಷೆಯಲ್ಲೂ ಸಿನಿಮಾ ನೋಡಬಹುದು.

ಬೆಂಗಳೂರಿನಲ್ಲೂ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್ ಕೂಡ ತೆರೆಗೆ ಬರಲಿದೆ. ಯಾಕೆಂದರೆ ಬೆಂಗಳೂರಿನಲ್ಲೂ ಬೇರೆ ಭಾಷಿಕರು ಇದ್ದಾರೆ. ಅವರನ್ನು ತಲುಪುವುದಕ್ಕಾಗಿಯೇ ಈ ಪ್ಲಾನ್ ಮಾಡಿಕೊಂಡಿದ್ದೇವೆ. ಆದರೆ, ಕನ್ನಡ ಸಿನಿಮಾವೊಂದು ಒಂದು ಸಾವಿರ ಸ್ಕ್ರೀನ್ ಗಳಲ್ಲಿ ತೆರೆಗೆ ಬರುತ್ತಿರುವುದು ಹೆಮ್ಮೆಯ ವಿಚಾರ. ಈ ಜನರೇಷನ್‌ಗೂ ಅಪ್‌ಡೇಟ್ ಆಗುವಂತೆ ಈ ಸಿನಿಮಾ ಮಾಡಲಾಗಿದೆ’ ಎಂಬುದು ಸುನೀಲ್ ಕುಮಾರ್ ದೇಸಾಯಿ ಅವರ ಮಾತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್