
ಬೆಂಗಳೂರು (ಮಾ. 20): ನಿರ್ದೇಶಕ ಯೋಗರಾಜ್ ಭಟ್ ಹಾಗೂ ಯಶ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗುವ ತವಕದಲ್ಲಿದೆ. ಇಬ್ಬರು ಒಂದಾಗಿ ಸಿನಿಮಾ ಮಾಡುವ ಸಾಧ್ಯತೆಗಳನ್ನು ನಿರ್ದೇಶಕ ಯೋಗರಾಜ್ ಭಟ್ ಹೊರಗೆಡವಿದ್ದಾರೆ.
ಬಿಜೆಪಿಯ 10 ಹಾಲಿ ಸಂಸದರಿಗೆ ಟಿಕೆಟ್ ಕಟ್
ಯಾವಾಗ ಗೊತ್ತಿಲ್ಲ, ಆದರೆ ಒಟ್ಟಿಗೆ ಸೇರಿ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನುತ್ತಾರೆ ನಿರ್ದೇಶಕ ಯೋಗರಾಜ್ ಭಟ್. ಸದ್ಯ ಯಶ್ ‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣದಲ್ಲಿ ಬ್ಯುಸಿ ಆಗುತ್ತಿದ್ದಾರೆ. ಅದಾದ ನಂತರ ಜಯಣ್ಣ ನಿರ್ಮಾಣದ ‘ಮೈ ನೇಮ್ ಈಸ್ ಕಿರಾತಕ’ ಚಿತ್ರೀಕರಣ. ಏನಿದ್ದರೂ ಇದಾದ ನಂತರ ಹೊಸ ಸಿನಿಮಾ.
ಸದ್ಯಕ್ಕೆ ನಿರ್ದೇಶಕ ಯೋಗರಾಜ್ ಭಟ್ ಕೂಡ ಅವರದೇ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದಾರೆ. ಮಾರ್ಚ್ 29 ಕ್ಕೆ ಅವರ ‘ಪಂಚತಂತ್ರ’ ಚಿತ್ರ ತೆರೆಗೆ ಬರುತ್ತಿದೆ. ಹಾಗೆಯೇ ಮುಂದೆ ಶಿವರಾಜ್‌ಕುಮಾರ್ ಜತೆಗೆ ಸಿನಿಮಾ ಮಾಡುತ್ತಿದ್ದಾರೆ. ಆದಾದ
ನಂತರವೇ ಯಶ್ ಜತೆಗೆ ಸಿನಿಮಾ.
ಬೆಂಗಳೂರು ಗ್ರಾಮಾಂತರ: ಬಿಜೆಪಿ ಟಿಕೆಟ್ ಯೋಗೇಶ್ವರ್‌ಗಲ್ಲ, ಮಗಳಿಗೆ!
‘ಯಶ್ ಸಾಕಷ್ಟು ಬ್ಯುಸಿ ಇದ್ದಾರೆ. ಪ್ರತಿ ಕ್ಷಣವೂ ಸಿನಿಮಾ ಸಿನಿಮಾ ಎನ್ನುವಷ್ಟು ಒತ್ತಡದಲ್ಲಿದ್ದಾರೆ. ಆದರೂ, ಆಗಾಗ ಅವರು ನನ್ನ ಕೆಲಸಗಳ ಬಗ್ಗೆ ಕಮೆಂಟ್ ಮಾಡುತ್ತಾರೆ, ಒಳ್ಳೆಯ ಸಲಹೆ ನೀಡುತ್ತಾರೆ. ‘ಪಂಚತಂತ್ರ’ದ ಪ್ರತಿ ಹಂತದಲ್ಲೂ ಸಲಹೆ ನೀಡುತ್ತಾ ಬಂದಿದ್ದಾರೆ. ನಾವಿಬ್ಬರು ರಂಗಭೂಮಿ ದಿನಗಳಿಂದಲೂ ಗೊತ್ತಿದ್ದವರು. ಒಡನಾಟ ಚೆನ್ನಾಗಿದೆ. ಇಬ್ಬರು ಮತ್ತೊಮ್ಮೆ ಸೇರಿದರೆ ಒಳ್ಳೆಯ ಸಿನಿಮಾ ಮಾಡಬಹುದು ಎನ್ನುವ ಅಭಿಪ್ರಾಯವಿದೆ. ಮಾತುಕತೆ ನಡೆದಿದೆ. ಅವರ ಜನಪ್ರಿಯತೆ, ಮ್ಯಾನರಿಸಂಗೆ ತಕ್ಕಂತೆ ಕತೆ ಸಿದ್ಧಪಡಿಸುವುದರ ಕಡೆ ಯೋಚಿಸುತ್ತಿದ್ದೇನೆ’ ಎನ್ನುತ್ತಾರೆ ಯೋಗರಾಜ್ ಭಟ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.