ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ನಟ ಕಾರ್ತಿಕ್ ಮಹೇಶ್ ಲೈಟ್ ಕ್ರೀಮ್ ಕಲರ್ ಕುರ್ತಾ-ಪೈಜಾಮದಲ್ಲಿ ಮಿಂಚುತ್ತಿದ್ದರೆ ನಮ್ರತಾ ಹಳದಿ ಮಿಕ್ಸ್ಡ್ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ನಮ್ರತಾ ಬಹಳಷ್ಟು ಜ್ಯುವೆಲ್ಲರಿ ಧರಿಸಿದ್ದಾರೆ, ಕಾರ್ತಿಕ್ ಸಹ ಹಲವು ಆಭರಣಗಳನ್ನು ಹಾಕಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ 10 ವಿನ್ನರ್, ಹಾಗೂ 'ಡೊಳ್ಳು' ಸಿನಿಮಾ ಖ್ಯಾತಿಯ ನಟ ಕಾರ್ತಿಕ್ ಮಹೇಶ್ (Karthik Mahesh) ಅವರು ಮದುವೆ (Marriage) ಆಗುತ್ತಿದ್ದಾರೆ ಎಂಬ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ (Bigg Boss Kannada 10) ವಿನ್ನರ್ ಆಗಿರುವ ಕಾರ್ತಿಕ್, ಅದೇ ರಿಯಾಲಿಟಿ ಶೋನಲ್ಲಿ ಸಹಸ್ಪರ್ಧಿಯಾಗಿದ್ದ ನಮ್ರತಾ ಗೌಡ (Namratha Gowda) ಅವರನ್ನು ಸದ್ಯವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ನಿನ್ನೆಯಿಂದ ಬಿರುಗಾಳಿಯಂತೆ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಕಾರ್ತಿಕ್-ನಮ್ರತಾ ಟ್ರೆಡಿಷನಲ್ ಡ್ರೆಸ್‌ನಲ್ಲಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿನ ಸಂಚಾರ ಮಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ನಟ ಕಾರ್ತಿಕ್ ಮಹೇಶ್ ಲೈಟ್ ಕ್ರೀಮ್ ಕಲರ್ ಕುರ್ತಾ-ಪೈಜಾಮದಲ್ಲಿ ಮಿಂಚುತ್ತಿದ್ದರೆ ನಮ್ರತಾ ಹಳದಿ ಮಿಕ್ಸ್ಡ್ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ನಮ್ರತಾ ಬಹಳಷ್ಟು ಜ್ಯುವೆಲ್ಲರಿ ಧರಿಸಿದ್ದಾರೆ, ಕಾರ್ತಿಕ್ ಸಹ ಹಲವು ಆಭರಣಗಳನ್ನು ಹಾಕಿಕೊಂಡಿದ್ದಾರೆ. ಅವರಿಬ್ಬರೂ ಜತೆಯಲ್ಲಿರುವ ಫೋಟೋ ಈಗ ಸಿಕ್ಕಾಪಟ್ಟೆ ಶೇರ್ ಆಗುತ್ತಿದ್ದು ಹಬ್ಬಿರುವ ಸುದ್ದಿಗೆ ಸಾಕ್ಷಿ ಎಂಬಂತೆ ಬಿಂಬಿತವಾಗುತ್ತಿದೆ. ಅವರಿಬ್ಬರ ಎಂಗೇಜ್‌ಮೆಂಟ್ ಆಗೇಹೋಯ್ತು, ಇನ್ನೇನು ಮದುವೆಯಷ್ಟೇ ಬಾಕಿ ಎಂಬಲ್ಲಿಗೆ ವೈರಲ್ ನ್ಯೂಸ್ ಬಂದು ನಿಂತಿದೆ.
ಬಿಗ್ ಬಾಸ್ ವಿಜೇತ ನಟ ಕಾರ್ತಿಕ್ ಮಹೇಶ್‌ಗೆ ಮತ್ತೊಂದು ಕಿರೀಟ; ಮೆಕ್ಸಿಕೋಕ್ಕೂ ಕಾಲಿಟ್ಟ ಡೊಳ್ಳು!
ಹಾಗಿದ್ದರೆ, ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಮದುವೆ ಆಗುತ್ತಿದ್ದಾರೆಯೇ? ಯಾವಾಗ ಮದುವೆ? ಎಲ್ಲ ಸಂಗತಿಗಳಿಗೆ ಸ್ಪಷ್ಟ ಉತ್ತರ ಸಿಕ್ಕಿದೆ. 'ನಮ್ರತಾ ಜತೆ ನೀವು ಹಸೆಮಣೆ ಏರಲಿದ್ದೀರಾ' ಎಂಬ ಪ್ರಶ್ನೆಗೆ ಸ್ವತಃ ಕಾರ್ತಿಕ್ ಮಹೇಶ್ ಅವರು 'ಏಷ್ಯಾನೆಟ್ ಸುವರ್ಣ ವೆಬ್'ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇಲ್ಲ, ಈ ಸುದ್ದಿ ಹಬ್ಬಲು ಕಾರಣ ಆ ಫೋಟೋಗಳು. ನಾವಿಬ್ಬರು ಜತೆಯಾಗಿ ಒಂದು 'ಜಾಹೀರಾತು' ಮಾಡಿದ್ದೇವೆ. ಜ್ಯುವೆಲ್ಲರಿಗೆ ಸಂಬಂಧಿಸಿದ ಆ ಜಾಹೀರಾತಿನಲ್ಲಿ (Advertisement) ನಾವಿಬ್ಬರೂ ಅಗತ್ಯಕ್ಕೆ ತಕ್ಕಂತೆ ಕಾಣಿಸಿಕೊಂಡಿದ್ದೇವೆ.
ನಟಿ-ನಿರ್ಮಾಪಕಿ ಆಗುವ ಮೊದಲು 'ಸ್ಯಾಂಡಲ್‌ವುಡ್ ಸ್ವೀಟಿ' ರಾಧಿಕಾ ಲೈಫ್‌ನಲ್ಲಿ ಏನೇನೆಲ್ಲಾ ಆಗಿತ್ತು?
ಆಡ್ (Ad) ಶೂಟ್‌ನ ಆ ಫೋಟೊ ಸಾಕಷ್ಟು ಶೇರ್ ಆಗುವ ಮೂಲಕ ನಾವಿಬ್ಬರು ಮದುವೆ ಆಗುತ್ತಿದ್ದೇವೆ ಎಂಬ ಸುದ್ದಿ ಗಾಸಿಪ್ ರೂಪ ಪಡೆದು ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ನಮ್ಮಿಬ್ಬರ ಮಧ್ಯೆ ಸಹಜವಾದ ಸ್ನೇಹ (Friendship) ಬಿಟ್ಟರೆ ಬೇರೇನೂ ಇಲ್ಲ. ನಾವಿಬ್ಬರೂ ಮದುವೆಯಾಗುವ ಸುದ್ದಿ ಸತ್ಯಕ್ಕೆ ದೂರ. ನಟನಟಿಯರಾಗಿ ನಾವು ಶೂಟಿಂಗ್‌ನಲ್ಲಿ ಜೊತೆಯಲ್ಲಿ ಭಾಗವಹಿಸುತ್ತೇವೆ, ಪರಿಚಯದವರಾಗಿ, ಸ್ನೇಹಿತರಾಗಿ ಹಲವು ಕಡೆ ಅಗತ್ಯವಿದ್ದಾಗ ಭೇಟಿಯಾಗುತ್ತೇವೆ, ಓಡಾಡುತ್ತೇವೆ ಅಷ್ಟೇ' ಎಂದು ಸ್ಪಷ್ಟ ಉತ್ತರ ಕೊಟ್ಟಿದ್ದಾರೆ ಕಾರ್ತಿಕ್ ಮಹೇಶ್.
ನಟ ವಿನೋದ್ ರಾಜ್ ಮದುವೆ ಗುಟ್ಟಾಗಿ ಇಟ್ಟಿದ್ದು ಯಾಕೆ; ಸ್ಪಷ್ಟ ಉತ್ತರ ಇಲ್ಲಿದೆ ನೋಡಿ!