ಬಿಗ್ ಬಾಸ್ ವಿಜೇತ ನಟ ಕಾರ್ತಿಕ್ ಮಹೇಶ್‌ಗೆ ಮತ್ತೊಂದು ಕಿರೀಟ; ಮೆಕ್ಸಿಕೋಕ್ಕೂ ಕಾಲಿಟ್ಟ ಡೊಳ್ಳು!

Published : Feb 28, 2024, 04:12 PM ISTUpdated : Feb 28, 2024, 04:16 PM IST
 ಬಿಗ್ ಬಾಸ್ ವಿಜೇತ ನಟ ಕಾರ್ತಿಕ್ ಮಹೇಶ್‌ಗೆ ಮತ್ತೊಂದು ಕಿರೀಟ; ಮೆಕ್ಸಿಕೋಕ್ಕೂ ಕಾಲಿಟ್ಟ ಡೊಳ್ಳು!

ಸಾರಾಂಶ

ಪವನ್ ಒಡೆಯರ್ ತಮ್ಮ ಹೋಂ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಮೊದಲ ಸಿನಿಮಾ 'ಡೊಳ್ಳು'. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಡೊಳ್ಳು, ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದೆ. 

ಬಿಗ್‌ ಬಾಸ್‌ ಕನ್ನಡ ಕಳೆದ ಸೀಸನ್‌ನಲ್ಲಿ ವಿಜೇತರಾಗಿರುವ ಕಾರ್ತಿಕ್‌ ಮಹೇಶ್‌ ನಟನೆಯ ಡೊಳ್ಳು ಸಿನಿಮಾ ಮೆಕ್ಸಿಕೋ ಸಿನಿಮೋತ್ಸವಕ್ಕೆ ಹೊರಟಿದೆ. ಈಗಾಗಲೇ ರಾಷ್ಟ್ರ ಪ್ರಶಸ್ತಿ ಪಡೆದಿದೆ ಈ ಸನಿಮಾ, ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ, ಒಟಿಟಿಯಲ್ಲೂ ಪ್ರಸಾರ ಕಂಡಿದೆ. ಪವನ್‌ ಒಡೆಯರ್‌ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸಾಗರ್‌ ಪುರಾಣಿಕ್‌ ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ಹಲವರು ಮೆಚ್ಚಿ ತಲೆದೂಗಿದ್ದು ಗಮನಿಸಬೇಕಾದ ಅಂಶ.

ರಾಷ್ಟ್ರಪ್ರಶಸ್ತಿಯೂ ಸೇರಿದಂತೆ ಬಹಳಷ್ಟು ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಡೊಳ್ಳು ಸಿನಿಮಾ, ಈಗ ಮತ್ತೊಂದು ಸಿನಿಮೋತ್ಸವದತ್ತ ಮುಖ ಮಾಡಿದೆ. ಪವನ್‌ ಒಡೆಯರ್‌ ನಿರ್ಮಾಣ ಮಾಡಿರುವ 'ಡೊಳ್ಳು' ಸಿನಿಮಾದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರ ಚಿತ್ರಮಂದಿರದಲ್ಲಿ ತೆರೆಕಂಡು, ಒಟಿಟಿಯಲ್ಲೂ ಮೆಚ್ಚುಗೆ ಪಡೆದುಕೊಂಡಿದ್ದ ಇದು ಮೆಕ್ಸಿಕೋ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಐಎಎಸ್ ಅಧಿಕಾರಿ, ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನಟ ಕೆ ಶಿವರಾಮ್ ಆರೋಗ್ಯ ಸ್ಥಿತಿ ತೀವ್ರ ಗಂಭೀರ

ಪವನ್ ಒಡೆಯರ್ ತಮ್ಮ ಹೋಂ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಮೊದಲ ಸಿನಿಮಾ 'ಡೊಳ್ಳು'. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಡೊಳ್ಳು, ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದೆ. ಇದೀಗ ಈ ಚಿತ್ರ ಮತ್ತೊಂದು ಅಂತಾರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ. ಅಲ್ಲೂ ಪ್ರಶಸ್ತಿ ಗೆಲ್ಲುವ ಪೇವರೆಟ್ ಎನಿಸಿದೆ ಎನ್ನಲಾಗಿದೆ.

ಟೀನಾ ಜತೆಗಿನ ಲವ್ ಅಫೇರ್ ಮುರಿದು ಬಿತ್ತು; ರಾಜೇಶ್‌ ಖನ್ನಾಗೆ ಹೊಡೆಯಲು ಹೋಗಿದ್ರು ಸಂಜಯ್ ದತ್!

ಸದ್ಯದಲ್ಲೇ ಡೊಳ್ಳು ಚಿತ್ರವು ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಭಾರತದಿಂದ ಹಲವು ಚಿತ್ರಗಳು ಅಲ್ಲಿ ಪ್ರದರ್ಶನ ಗೊಂಡಿದ್ದವು. ಆ ಲಿಸ್ಟ್‌ನಲ್ಲಿ ಸೂರ್ಯ ನಟನೆಯ ಸೂರರೈ ಪೊಟ್ರು, ಆಸ್ಕರ್ ಗೆದ್ದಿರುವ ರಾಜಮೌಳಿ ನಿರ್ದೇಶನದ RRR,ಅಜಯ್ ದೇವಗನ್ ನಟನೆಯ ತಾನಾಜಿ, ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಸಿಂಗ್ ನಟನೆಯ ಬಾಜಿರಾವ್ ಮಸ್ತಾನಿ ಸೇರಿವೆ. ಈಗ ನಮ್ಮ ಕನ್ನಡದ ಹೆಮ್ಮೆಯ ಡೊಳ್ಳು ಸಿನಿಮಾ ಪ್ರದರ್ಶನ ಕಾಣಲಿರುವುದು ಖುಷಿಯ ಸಂಗತಿಯೇ ಸರಿ. 

ನಟಿ-ನಿರ್ಮಾಪಕಿ ಆಗುವ ಮೊದಲು 'ಸ್ಯಾಂಡಲ್‌ವುಡ್ ಸ್ವೀಟಿ' ರಾಧಿಕಾ ಲೈಫ್‌ನಲ್ಲಿ ಏನೇನೆಲ್ಲಾ ಆಗಿತ್ತು?

ಸಿನಿಮಾದ ಹೆಸರೇ ಹೇಳುವಂತೆ, 'ಡೊಳ್ಳು' ಚಿತ್ರವು ನಮ್ಮ ನೆಲದ ಜಾನಪದ ಸೊಗಡನ್ನು ಸಾರುವ ಡೊಳ್ಳು ಕುಣಿತದ ಸುತ್ತಮುತ್ತ ಹೆಣೆದ ಕಥೆ. ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಜೋಡಿಯಾಗಿ ನಿಧಿ ಹೆಗ್ಡೆ ನಟಿಸಿದ್ದಾರೆ. ಚಂದ್ರ ಮಯೂರ್, ಶರಣ್ಯ ಸುರೇಶ್, ಬಾಬು ಹಿರಣ್ಣಯ್ಯ, ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು; ಜಸ್ಕರಣ್‌-ಅನುಶ್ರೀ ಫೋಟೋಗೆ ಬಂದೇಬಿಡ್ತು ಕಾಮೆಂಟ್!

ಕನ್ನಡದ ನಿದೇಶಕ ಪವನ್ ಒಡೆಯರ್, ಯಶ್ ನಾನೆಯ ಗೂಗ್ಲಿ, ಪುನೀತ್ ನಟನೆಯ ರಣವಿಕ್ರಮ ಹಾಗೂ ನಟ ಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಂಥ ನಿರ್ದೇಶಕ ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ 'ಒಡೆಯರ್ ಮೂವೀಸ್‌'ನಲ್ಲಿ ಪತ್ನಿ ಅಪೇಕ್ಷಾ ಸೇರಿಕೊಂಡು ಈ ನೆಲದ ಹಿರಿಮೆ ಕೊಂಡಾಡುವ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 

ನೋಡುಗರಿಗೆ, ಕೇಳುಗರಿಗೆ ಅಸಹ್ಯ ಅನಿಸಬಾರದು; ಹಾಗೆ ಮಾತನಾಡಬೇಕು: ನಟ ಪ್ರಕಾಶ್ ರಾಜ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!
ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?