ಐಎಎಸ್ ಅಧಿಕಾರಿ, ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನಟ ಕೆ ಶಿವರಾಮ್ ಆರೋಗ್ಯ ಸ್ಥಿತಿ ತೀವ್ರ ಗಂಭೀರ

By Shriram Bhat  |  First Published Feb 28, 2024, 3:46 PM IST

ಯಾರಿಗೆ ಬೇಡ ದುದ್ದು, ಟೈಗರ್ ಮುಂತಾದ ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಭಕ್ತೇ ಕದಮ್, ಬೋಲೆ ಬೋಲೆ ಲಡಕಿ ಮುಂತಾದ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಶಿವರಾಮು ಕೆಂಪಯ್ಯ ಎಂಬ ಮೂಲ ಹೆಸರಿನ ಕೆ ಶಿವರಾಮ್ ಅವರು ಉರುಗಹಳ್ಳಿಯಲ್ಲಿ ಜನಸಿದ್ದಾರೆ. 


ಐಎಎಸ್ ಅಧಿಕಾರಿ ಕೆ ಶಿವರಾಮ್ ಗೆ ಹೃದಯಾಘಾತವಾಗಿದೆ. ಕೆ ಶಿವರಾಮ್ (K Shivaram) ಅವರು 'ಬಾ ನಲ್ಲೆ ಮಧುಚಂದ್ರಕೆ (Baa Nalle Madhuchandrake Movie)' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಹಲವು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೆ ಒಳಗಾಗಿರುವ ನಟ, ರಾಜಕಾರಣಿ ಕೆ ಶಿವರಾಮ್ ಅವರು ಸಂಪಂಗಿರಾಮ ನಗರದ ಹೆಚ್ ಜಿ ಎಸ್  (Sampangi Ramanagara HGS) ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. 

ಯಾರಿಗೆ ಬೇಡ ದುಡ್ದ್ದುಡು, ಟೈಗರ್ ಮುಂತಾದ ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಭಕ್ತೇ ಕದಮ್, ಬೋಲೆ ಬೋಲೆ ಲಡಕಿ ಮುಂತಾದ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಶಿವರಾಮು ಕೆಂಪಯ್ಯ ಎಂಬ ಮೂಲ ಹೆಸರಿನ ಕೆ ಶಿವರಾಮು ಅವರ, 6 ಏಪ್ರಿಲ್ 1953 (6 April 1953) ರಂದು ರಾಮನಗರ ಜಿಲ್ಲೆ ಉರುಗಹಳ್ಳಿಯಲ್ಲಿ ಜನಸಿದ್ದಾರೆ. 

Tap to resize

Latest Videos

ನಟಿ-ನಿರ್ಮಾಪಕಿ ಆಗುವ ಮೊದಲು 'ಸ್ಯಾಂಡಲ್‌ವುಡ್ ಸ್ವೀಟಿ' ರಾಧಿಕಾ ಲೈಫ್‌ನಲ್ಲಿ ಏನೇನೆಲ್ಲಾ ಆಗಿತ್ತು?

ಕಳೆದ 12 ದಿನದ ಹಿಂದೆ ಕೆ ಶಿವರಾಮು ಅವರಿಗೆ ತೀವ್ರ ಹೃದಯಾಘಾತ ಅಗಿತ್ತು ಎನ್ನಲಾಗಿದೆ. ಸಂಪಂಗಿರಾಮನಗರದ HGS ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನಿಡಲಾಗುತ್ತಿದೆ. ಆದರೆ ಇಂದು ಕೆ ಶಿವರಾಂ ಸ್ಥಿತಿ ಘಂಭೀರ ಆಗಿದೆ ಎನ್ನಲಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿದೇಶನದ 'ಬಾ ನಲ್ಲೆ ಮಧು ಚಂದ್ರಕೆ' ಸಿನಿಮಾದಲ್ಲಿ ನಟಿಸಿ ಕೆ ಶಿವರಾಮು ಅವರು ಕರ್ನಾಟಕದ ಮನೆ ಮಾತಾಗಿದ್ದಾರೆ. ಈಗ ಅವರಿಗೆ 71 ವರ್ಷ ವಯಸ್ಸಾಗಿದೆ. 

ನೋಡುಗರಿಗೆ, ಕೇಳುಗರಿಗೆ ಅಸಹ್ಯ ಅನಿಸಬಾರದು; ಹಾಗೆ ಮಾತನಾಡಬೇಕು: ನಟ ಪ್ರಕಾಶ್ ರಾಜ್

ಕಳೆದ ಎರಡು ವಾರಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ನಟ, ರಾಜಕಾರಣಿ ಅವರನ್ನು ಬೆಂಗಳೂರಿನ ಸಂಪಂಗಿರಾಮನಗರದ ಎಚ್‌ಜಿಎಸ್‌ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ ಐಸಿಯುನಲ್ಲಿ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ. ಇಂದು ಅವರ ಆರೋಗ್ಯ ಸ್ಥಿತಿಯಲ್ಲಿ ತೀವ್ರ ಏರುಪೇರು ಸಂಭವಿಸಿದ್ದು, ಈಗ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಕೆ ಶಿವರಾಮದಾವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು, ಆಪ್ತರು ಹಾಗೂ ಹಿತೈಷಿಗಳು ಹಾರೈಸುತ್ತಿದ್ದಾರೆ.

ಕನ್ನಡದ 'ಕಿಸ್'​ ಚೆಲುವೆಗೆ ಕೂಡಿ ಬಂತಾ ಕಂಕಣ ಭಾಗ್ಯ; ಸ್ಟಾರ್ ಕುಟುಂಬಕ್ಕೆ ಸೊಸೆಯಾಗ್ತಾರಾ ಶ್ರೀಲೀಲಾ?

click me!