ಬಿದ್ದರೆ ಅವಳೇ ಎದ್ದೇಳಬೇಕು, ಏನ್ ಅಗ್ಬೇಕು ಅಂತಿದ್ದಾಳೆ ಕರೆಕ್ಟ್‌ ಆಗಿ ಆಗಬೇಕು: ಮಗಳ ಬಗ್ಗೆ ಕಿಚ್ಚ ಸುದೀಪ್

By Vaishnavi Chandrashekar  |  First Published Dec 18, 2024, 5:05 PM IST

ಮಗಳು ಆಯ್ಕೆ ಮಾಡಿಕೊಂಡಿರುವ ಹಾದಿ ಬಗ್ಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್. ಬಿದ್ದು ಎದ್ದರೆನೇ ಜೀವನದ ಪಾಠ ಕಲಿಯುವುದು ಎಂದ ನಟ..... 


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್‌ ಸಿನಿಮಾ ಇದೇ ಡಿಸೆಂಬರ್ 25ರಂದು ತೆರೆ ಕಾಣುತ್ತಿದೆ. ಸಿನಿಮಾ ರಿಲೀಸ್‌ಗೆ ತಡವಾದರೂ ಅದ್ಭುತವಾಗಿ ಜನರ ಮುಂದೆ ಬಂದು ಮ್ಯಾಕ್ಸಿಮಮ್ ಮನೋರಂಜನೆ ಕೊಡಲು ಚಿತ್ರತಂಡ ಸಜ್ಜಾಗಿದೆ. ಹೀಗಾಗಿ ಸಿನಿಮಾ ಪ್ರಮೋಷನ್‌ನಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಹಲವರು ಸುದೀಪ್ ಮಗಳಾದ ಸಾನ್ವಿ ಬಗ್ಗೆ ಪ್ರಶ್ನಿಸಿದ್ದಾರೆ, ಏಕೆಂದರೆ ಸಾನ್ವಿ ಆಯ್ಕೆ ಮಾಡಿಕೊಂಡಿರುವುದು ಗಾಯಕನ. ಸಿಕ್ಕಾಪಟ್ಟೆ ಸೂಪರ್ ಆಗಿ ಹಾಡು ಹೇಳುತ್ತಾರೆ ಬೇರೆ ಬೇರೆ ರಾಜ್ಯಗಳಲ್ಲಿ ಹಾಡು ಹೇಳಿದ್ದಾರೆ ಅಲ್ಲದೆ ಕನ್ನಡದಲ್ಲೂ ಒಂದು ಚಿತ್ರಕ್ಕೆ ಹಾಡು ಹಾಡುತ್ತಿದ್ದಾರೆ. ಮಗಳ ಬಗ್ಗೆ ಸುದೀಪ್ ಹೆಮ್ಮೆ ವ್ಯಕ್ತ ಪಡಿಸಿದ್ದಾರೆ.

'ನನ್ನ ಮಗಳದ್ದು ಬ್ಯೂಟಿಫುಲ್ ಟ್ಯಾಲೆಂಟ್ ಅವರಿಗೆ ಅವರೇ ಕೆತ್ತಿಕೊಂಡು ಬಂದಿದ್ದಾರೆ. ಚೆನ್ನಾಗಿ ಹಾಡುತ್ತಾರೆ ಒಳ್ಳೆ ಕಲೆ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ನಾನು ಮಗಳಿಗೆ ಯಾವತ್ತೂ ಹೇಳಿಲ್ಲ ಆದರೆ ನಾವು ಆಕೆ ಪರ ಸದಾ ಇರುತ್ತೀವಿ. ಫ್ಯಾಮಿಲಿ ಸಪೋರ್ಟ್‌ ಇಲ್ಲದೆ ಏನೂ ಮಾಡಲು ಆಗಲ್ಲ ಕೆಲಸದಲ್ಲಿ ಖುಷಿಯಾಗಿ ಇರುತ್ತೀವಿ ಆದರೆ ನಮ್ಮ ಪಾಡಿಗೆ ನಾವು ಅಂತ ಸ್ವಲ್ಪ ಸಮಯ ಸಿಗುವುದೇ ಮನೆಯಲ್ಲಿ ಅದನ್ನು ಅರ್ಥ ಮಾಡಿಕೊಂಡು ಸಮಯ ಕೊಡುವುದು ಫ್ಯಾಮಿಲಿ ಮಾತ್ರ. ಮನೆಯಲ್ಲಿ ಮಗಳು ಇರುತ್ತಾಳೆ ಅಲ್ಲಿ ಹೆಂಡತಿ ಇರುತ್ತಾಳ ಎಂತ ಗೊತ್ತಿರುತ್ತದೆ ಆದರೂ ನಾವು ಏನೂ ಮಾತನಾಡದೆ ಸುಮ್ಮೆ ಇರುತ್ತೀವಿ ಆ ಫ್ರೀಡಂ ಅರ್ಥ ಮಾಡಿಕೊಳ್ಳುವವರು ಬೇಕು. ನನ್ನ ನಾನ್‌ ಸೆನ್ಸ್‌ ತೆಗೆದುಕೊಳ್ಳುವುದು ಬೇಡ ಅವರು ನಮ್ಮ ಸೈಲೆನ್ಸ್‌ ಅರ್ಥ ಮಾಡಿಕೊಳ್ಳಬೇಕು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. 

Tap to resize

Latest Videos

undefined

ಸೀರೆನೇ ಬೇಕು ಅನ್ನೋದು ಈ ಕಾರಣ; ರಚಿತಾ ರಾಮ್ ಸೀಕ್ರೆಟ್ ಲೀಕ್ ಮಾಡಿದ ಡಿಸೈನರ್

'ನನ್ನ ಮಗಳು ಜೀವನದಲ್ಲಿ ಏನು ಆಗಬೇಕು ಅಂತ ಇದ್ದಾಳೆ ಅದು ಕರೆಕ್ಟ್‌ ಆಗಿ ಆಗಬೇಕು. ಅವರ ಲೈಫ್‌ನಲ್ಲಿ ಏನಾಗಬೇಕು ಅನ್ನೋದು ಅವರಿಗೆ ಬಿಟ್ಟಿದ್ದು. ನನ್ನ ಜೀವನ ನಾನು ಕೆತ್ತುಕೊಂಡು ಬಂದೆ ಅದಕ್ಕೆ ನನಗೆ ಸ್ವಾಭಿಮಾನ ಇದೆ. ಹೀಗಾಗಿ ಅವರ ಲೈಫ್ ಅವರು ಕೆತ್ತಿಕೊಳ್ಳಬೇಕು ಅದಕ್ಕೆ ಜೊತೆಯಾಗಿ ನಾವು ಇದ್ದೀವಿ ಹಾಗಂತ ನಾವು ಹೇಳಿದ್ದ ರೂಟಿನಲ್ಲಿ ಹೋಗಬೇಕು ಅಂದ್ರೆ ಅವಳ ಲೈಫಿಗೆ ನಾನು ಓನರ್ ಆಗೋದೆ, ನಾನು ಆಕೆಯ ಓನರ್ ಅಲ್ಲ ಅವಳ ಫಾದರ್. ಆಕೆಯ ಜೀವನವನ್ನು ಆಕೆನೇ ಕಟ್ಟಿಕೊಳ್ಳಬೇಕು. ತಪ್ಪುಗಳನ್ನು ಮಾಡಬೇಕು ಅವಳು ಬಿದ್ದು ಅವಳು ಎದ್ದೇಳಬೇಕು. ನಾನು ಬಿದ್ದಿದ್ದಕ್ಕೆ ಹಲವು ಪಾಠಗಳನ್ನು ಕಲಿತಿರುವೆ' ಎಂದು ಸುದೀಪ್ ಹೇಳಿದ್ದಾರೆ.

click me!