ನನ್ನ ಮಗಳಿಗೆ ನೇಚರ್ ಪ್ಲಾನ್ ಮಾಡಿರುತ್ತೆ, ನಾನು ಜಸ್ಟ್ ಸಪೋರ್ಟ್ ಮಾಡ್ತೀನಿ: ಕಿಚ್ಚ ಸುದೀಪ್

Published : Dec 18, 2024, 04:39 PM ISTUpdated : Dec 18, 2024, 05:34 PM IST
ನನ್ನ ಮಗಳಿಗೆ ನೇಚರ್ ಪ್ಲಾನ್ ಮಾಡಿರುತ್ತೆ, ನಾನು ಜಸ್ಟ್ ಸಪೋರ್ಟ್ ಮಾಡ್ತೀನಿ: ಕಿಚ್ಚ ಸುದೀಪ್

ಸಾರಾಂಶ

ಕಿಚ್ಚ ಸುದೀಪ್ ತಮ್ಮ ಮಗಳು ಸಾನ್ವಿ ಸಹಜ ಗಾಯಕಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸಾನ್ವಿಗೆ ಸಂಗೀತದಲ್ಲಿ ತೀವ್ರ ಆಸಕ್ತಿ ಮತ್ತು ಶ್ರದ್ಧೆ ಇದೆ ಎಂದೂ, ಜೀವನ ಮೌಲ್ಯಗಳನ್ನು ಕಲಿಸಿ, ಆಯ್ಕೆಯ ಸ್ವಾತಂತ್ರ್ಯ ನೀಡಿದ್ದಾಗಿ ತಿಳಿಸಿದ್ದಾರೆ. ಮಗಳಿಗೆ ತಂದೆಯಾಗಿ ಬೆಂಬಲ ನೀಡುವುದಾಗಿ, ಅವಳ ಭವಿಷ್ಯ ನಿಸರ್ಗ ನಿರ್ಧರಿಸಲಿ ಎಂದಿದ್ದಾರೆ.

ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿದ್ದು ಗೊತ್ತೇ ಇದೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತ ಕಿಚ್ಚ ಸುದೀಪ್ ಅವರು ಕೇಳಲಾದ ಪ್ರಶ್ನೆಗೆ ಉತ್ತರಿಸಿ ತಮ್ಮ ಮಗಳ ಬಗ್ಗೆ ಮಾತನ್ನಾಡಿದ್ದಾರೆ. ಸುದೀಪ್-ಪ್ರಿಯಾ ದಂಪತಿಗೆ ಸಾನ್ವಿ (Sanvi Sudeep) ಹೆಸರಿನ ಮಗಳಿದ್ದಾಳೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ. ತಮ್ಮ ಮಗಳು ಸಾನ್ವಿ ಬಗ್ಗೆ ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಉತ್ತರ.. 

ಹೌದು, ಕಿಚ್ಚ ಸುದೀಪ್ ಅವರು ತಮ್ಮ ಒಬ್ಬಳೇ ಮಗಳು ಸಾನ್ವಿ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 'ಹೌದು, ನೀವು ಹೇಳಿದಂತೆ ನನ್ನ ಮಗಳು ಸಾನ್ವಿ ಒಳ್ಳೆಯ ಸಿಂಗರ್. ಅವಳಿಗೆ ಗಾಡ್‌ ಗಿಫ್ಟ್‌ ವೈಸ್ ಇದೆ, ತುಂಬಾ ಡೆಡಿಕೇಶನ್ ಕೂಡ ಇದೆ. ಅವಳು ಮನೆಯಲ್ಲಿ ಹಾಡುತ್ತ ಪ್ರಾಕ್ಟಿಸ್ ಮಾಡುತ್ತ ಇರುತ್ತಾಳೆ. ಜೊತೆಗೆ, ಸಿಕ್ಕಾಪಟ್ಟೆ ಡೆಡಿಕೇಟೆಡ್ ಆಗಿದ್ದಾಳೆ. ಇತ್ತೀಚೆಗೆ ಸಾಕಷ್ಟು ವೇದಿಕೆಗಳಲ್ಲಿ ಕೂಡ ಹಾಡುತ್ತ ಅಪಾರ ಮೆಚ್ಚುಗೆ ಪಡೆಯುತ್ತಿದ್ದಾಳೆ. 

ಉಪೇಂದ್ರ ಸಿನಿಮಾಗೆ ಕೌಂಟ್‌ಡೌನ್, ಸರ್ಜರಿ ಮರುದಿನವೇ UI ನೋಡಲಿರೋ ಶಿವಣ್ಣ!

ನಾನು ನನ್ನ ಮಗಳಿಗೆ ಅದನ್ನೇ ಮಾಡು, ಇದನ್ನೇ ಮಾಡು ಎಂದು ಒತ್ತಾಯ ಮಾಡೋದಿಲ್ಲ. ಅವಳಿಗೆ ಜೀವನದ ಕೆಲವು ಮೌಲ್ಯಗಳನ್ನು ಮನೆಯಲ್ಲಿ ಹೇಳಿಕೊಟ್ಟಿದ್ದೇವೆ. ಮನೆಯಲ್ಲಿ ಹೇಗಿರಬೇಕು, ಹೊರಗಡೆ ಹೋದಾಗ ಹೇಗಿರಬೇಕು, ಸಂಬಂಧಗಳು, ಅವುಗಳನ್ನು ನಿಭಾಯಿಸುವ ಬಗ್ಗೆ ಹೇಳಿಕೊಟ್ಟಿದ್ದೇವೆ. ಅವಳು ಏನೇ ಮಾಡಿದರೂ ಪೋಷಕರಾಗಿ ನಮ್ಮ ಸಪೋರ್ಟ್ ಇದ್ದೇ ಇದೆ ಎಂಬುದನ್ನು ಅವಳಿಗೆ ಮನದಟ್ಟು ಮಾಡಿದ್ದೇವೆ. 

ಅವಳು ನಮ್ಮಿಷ್ಟದ ಪ್ರಕಾರ ಏನೋ ಮಾಡಬೇಕಿಲ್ಲ. ಅವಳು ಅವಳಿಷ್ಟದ ಪ್ರಕಾರವೇ ಓದಲಿ, ಬೇಕಾಗಿದ್ದು ಮಾಡಲಿ. ಅದಕ್ಕೆ ಬೇಕಾದ ಸಪೋರ್ಟ್ ನಮ್ಮಿಂದ ಪಡೆದುಕೊಳ್ಳಲಿ. ನಮ್ಮ ಮಗಳು ಸಾನ್ವಿಗೆ ನಾನು ಓನರ್ ಅಲ್ಲ, ಫಾದರ್. ಅವಳನ್ನು ಕಂಟ್ರೋಲ್ ಮಾಡುವುದು ನ್ನನ ಕೆಲಸವಲ್ಲ, ಆ ಉದ್ಧೇಶ ಕೂಡ ನನಗಿಲ್ಲ. ಅವಳು ಏನಾಗಬೇಕೆಂದು ನೇಚರ್ ನಿರ್ಧರಿಸುತ್ತದೆ. ನೇಚರ್ ಅವಳಿಗಾಗಿ ಅದೇನೇ ಪ್ಲಾನ್ ಮಾಡಿರುತ್ತದೆ. ಅದರಂತೆ ಅವಳ ಜೀವನ ಸಾಗಲಿ' ಎಂದಿದ್ದಾರೆ ಕಿಚ್ಚ ಸುದೀಪ್. 

ದರ್ಶನ್‌ಗೆ ಅಪ್ಪ ಅನ್ನಲ್ಲ ನನ್ಮಗಳು ಖುಷಿ; ಸಂಜಯ್ ಸಿಂಗ್ ಹೇಳಿಕೆ ವೈರಲ್!

ಅಂದಹಾಗೆ, ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಇದೇ ತಿಂಗಳು 26ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿನ ಕಥೆಗೆ ನಾಯಕಿಯ ಅಗತ್ಯ ಇಲ್ಲವಾದ್ದರಿಂದ ಅದರಲ್ಲಿ ನಾಯಕಿ ಇಲ್ಲ ಎಂದಿದ್ದಾರೆ ಕಿಚ್ಚ ಸುದೀಪ್. ಬಿಗ್ ಬಜೆಟ್ ಹಾಗೂ ಉತ್ತಮ ಮೇಕಿಂಗ್ ಹೊಂದಿರುವ ಮ್ಯಾಕ್ಸ್ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ. ಬಿಡುಗಡೆ ಬಳಿಕ ಸಿನಿಮಾ ಗಳಿಕೆ ಹಾಗೂ ಜನಮೆಚ್ಚುಗೆ ಬಗ್ಗೆ ತಿಳಿದುಬರಲಿದೆ. 'ನಮ್ಮ ಸಿನಿಮಾ ಸಿಂಪಲ್, ಎಕ್ಸ್‌ಟ್ರಾರ್ಡಿನರಿ ಆಗಿಲ್ಲ, ಕಾಲೆಳಯಬೇಡಿ, ಪ್ರೋತ್ಸಾಹಿಸಿ ಎಂದಿದ್ದಾರೆ ಸುದೀಪ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ