Nata Bhayankara: ನಟ ಭಯಂಕರ ಪೋಸ್ಟರ್ ಬಿಡುಗಡೆ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ!

Published : Mar 06, 2022, 09:11 PM ISTUpdated : Mar 06, 2022, 09:14 PM IST
Nata Bhayankara: ನಟ ಭಯಂಕರ ಪೋಸ್ಟರ್ ಬಿಡುಗಡೆ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ!

ಸಾರಾಂಶ

* ನಟ ಭಯಂಕರ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ * ದೆವ್ವ ಕಂಡು ಬೆಚ್ಚಿದ ಸಿದ್ದರಾಮಯ್ಯ * ಏಪ್ರಿಲ್‌ ಗೆ ನಟ ಭಯಂಕರನ ದರ್ಶನ *  ಸಿನಿಮಾ ವೀಕ್ಷಣೆ ಮಾಡುತ್ತೇನೆ ಎಂದ ಸಿದ್ದರಾಮಯ್ಯ

ಬೆಂಗಳೂರು(ಮೇ 06)  ಬಿಗ್ ಬಾಸ್ ಪ್ರಥಮ್ (Bigg Boss Pratham)  ಅವರ ನಟ ಭಯಂಕರ (Nata Bhayankara) ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡುವಾಗ  ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬೆಚ್ಚಿ ಬಿದ್ದಿದ್ದಾರೆ. ಈ ವಿಚಾರವನ್ನು ಏಷ್ಯಾನೆಟ್ ಸುವರ್ಣ. ಕಾಂ ಜತೆ ಪ್ರಥಮ್ ಹಂಚಿಕೊಂಡಿದ್ದಾರೆ. 

ಒಳ್ಳೆ ಹುಡುಗ ಎಂದು ಕರೆಸಿಕೊಂಡಿರುವ ಪ್ರಥಮ್ ನಟ, ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.  ಹಾಗಾದರೆ ನಟ ಭಯಂಕರ ಪೋಸ್ಟರ್ ಬಿಡುಗಡೆ ಮಾಡುವಾಗ ಸಿದ್ದರಾಮಯ್ಯ ಬೆಚ್ಚಿ ಬಿದ್ದಿದ್ದು ಯಾಕೆ?

ಸಿದ್ದರಾಮಯ್ಯ ರಾಜಕಾರಣದಲ್ಲಿ ಸದಾ ಕ್ರಿಯಾಶೀಲರಾಗಿದ್ದರೂ ಸಿನಿಮಾ ರಂಗದ ಜತೆ ನಂಟು ಇಟ್ಟುಕೊಂಡಿದ್ದಾರೆ.  ಪ್ರಥಮ್ ಜನ್ಮದಿನ ಫೆಬ್ರವರಿ 24.  ಪ್ರಥಮ್ ಜನ್ಮದಿನದ ಸಂಭ್ರಮದಲ್ಲಿ ನಟ ಭಯಂಕರ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಸಿದ್ದರಾಮಯ್ಯ  ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳುವರಿದ್ದರು .  ಅದಕ್ಕೂ ಮೊದಲು ನಮ್ಮನ್ನು ಮನೆಗೆ ಬರಲು ಹೇಳಿದ್ದರು. ಈ ಸಂದರ್ಭ ಚಿತ್ರದಲ್ಲಿ ದೆfವದ ಪಾತ್ರ ಮಾಡಿದವರು ಇದ್ದರು. ಸರ್ ಅವರ ಪಕ್ಕ ನಿಲ್ಲಬೇಡಿ..ದೆವ್ವ ಎಂದೆ... ಆಗ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಒಂದು ಕ್ಷಣ ಬೆಚ್ಚಿದರು.. ಆಮೇಲೆ ಸಾವರಿಸಿಕೊಂಡು ಅವರು ಸಿನಿಮಾದಲ್ಲಿ ಮಾತ್ರ ದೆವ್ವ ಎಂದೆ.. ಇದಾದ  ಮೇಲೆ ಸಿದ್ದರಾಮಯ್ಯ ರಿಲೀಫ್ ಆದರು ಎಂದು ಪ್ರಥಮ್ ಅಂದು ನಡೆದ ಘಟನೆ ವಿವರಿಸಿದರು.

ನಟ ಭಯಂಕರನಿಗಾಗಿ ಒಂದಾದ್ ಪ್ರಥಮ್-ಸಾಯಿಕುಮಾರ್

ಈ ಪೋಸ್ಟರ್ ಬಹಳ ಆಕರ್ಷಕ ಮತ್ತು ವಿಶೇಷವಾಗಿದೆ.  ಪೋಸ್ಟರ್   ನೊಡಿ ಖುಷಿಪಟ್ಟ ಸಿದ್ದರಾಮಯ್ಯ ಸಿನಿಮಾವನ್ನು ವೀಕ್ಷಣೆ ಮಾಡುವ ಭರವಸೆ ನೀಡಿದರು.

ಮಾರ್ಚ್ 17  ರಂದು ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಬಿಡುಗಡೆಯಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ನಟ ಭಯಂಕರ ತೆರೆಗೆ ಬರುವ ಸಾಧ್ಯತೆ ಇದೆ.  ರಿಲೀಸ್ ದಿನಾಂಕವನ್ನು ಶೀಘ್ರವೇ ಚಿತ್ರತಂಡ ಖಾತರಿ ಪಡಿಸಲಿದೆ. ಪ್ರಥಮ್, ಸುಷ್ಮಿತಾ ಜೋಚಿ, ನಿಹಾರಿಕಾ ಶೆಣೋಯ್, ಸಾಯಿಕುಮಾರ್, ಲೀಲಾವತಿ, ಶೋಭರಾಜ್, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್, ಬೀರಾದಾರ್ ಚಿತ್ರದ ಭೂಮಿಕೆಯಲ್ಲಿದ್ದಾರೆ.
 
ಸಿಎಂ ಬೊಮ್ಮಾಯಿ ಸಾಥ್:  ನಟ ಭಯಂಕರಿನಿಗೆ ಸಾಥ್ ನೀಡಿದ್ದ  ಸಿಎಂ ಬಸವರಾಜ   ಬೊಮ್ಮಾಯಿ   ಪೋಸ್ಟರ್ ಬಿಡುಗಡೆ ಮಾಡಿದ್ದರು. 'ಧನ್ಯವಾದಗಳು ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಸರ್ ನಮ್ಮ ಹೈ ವೋಲ್ಟೇಜ್ ಪೋಸ್ಟರ್ ಬಿಡುಗಡೆ ಮಾಡಿದ್ದಕ್ಕೆ' ಎಂದು ಪ್ರಥಮ್ ತಿಳಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್