ಸಿನಿಮಾರಂಗದಲ್ಲೂ ನಿವೃತ್ತಿ ಇರುತ್ತಾ? ನಟ ಸುದೀಪ್ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ? ಮುಂದೆ ಏನು ಮಾಡುತ್ತಾರೆ?
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ಮ್ಯಾಕ್ಸ್ ಸಿನಿಮಾ ಸೂಪರ್ ಹಿಟ್ ಪ್ರದರ್ಶನ ಪಡೆದಿದೆ. ಇದರ ಜೊತೆಯಲ್ಲಿ ಬಿಗ್ ಬಾಸ್ ಸೀಸನ್ 11 ರಿಯಾಲಿಟಿ ಶೋ ಮುಕ್ತಾಯ ಆಗಲಿದೆ. ಸುಮಾರು 11 ವರ್ಷಗಳಿಂದ ನಡೆಸಿಕೊಂಡು ಬಂದ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳು ಸಮಯ ಬಂದಿದೆ. ಹೀಗಾಗಿ ಸುದೀಪ್ ಮುಂದಿನ ಪ್ಲ್ಯಾನ್ ಏನು? ಅಲ್ಲದೆ ಸುದೀಪ್ ನಿವೃತ್ತಿ ಪಡೆಯುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಬಗ್ಗೆ ಸ್ವತಃ ನಟ ಹೇಳುವುದು ಏನು?
ರಾಘವೇಂದ್ರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸುದೀಪ್‌ರನ್ನು ನಿವೃತ್ತಿ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಒಂದು ವೇಳೆ ನಿವೃತ್ತಿ ಪಡೆದರೂ ಕೂಡ ಅದು ಪ್ಯಾಷನ್‌ನಿಂದ ಹಿಂದೆ ಸೆರೆಯುವುದು ಅಲ್ಲ ಎಂದಿದ್ದಾರೆ. 'ಕೊನೆಯಲ್ಲಿ ಪ್ರತಿಯೊಬ್ಬ ಹೀರೋ ಬೋರ್ ಆಗ್ತಾನೆ. ಲೀಡಿಂಗ್ ಮ್ಯಾನ್ ಆಗಿ ಪ್ರತಿಯೊಬ್ಬರಿಗೂ ಶೆಲ್ಫ್ ಲೈಫ್ ಇರುತ್ತದೆ. ಹೀರೋ ಆಗಿ ನಾನು ಯಾವತ್ತೂ ಯಾರಿಗೂ ಸೆಟ್‌ನಲ್ಲಿ ಕಾಯಿಸಿಲ್ಲ. ಮುಂದಿನ ದಿನಗಳಲ್ಲಿ ನಾನು ಸಪೋರ್ಟಿಂಗ್ ಪಾತ್ರ ಮಾಡಿದ್ದರೂ ಕೂಡ ಅಲ್ಲಿ ನಾನು ಮತ್ತೊಬ್ಬರಿಗೆ ಕಾಯಲು ಇಷ್ಟ ಪಡುವುದಿಲ್ಲ' ಎಂದು ಮಾತನಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ 14 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ಕನ್ನಡದ ನಟ ಯಶ್; ಫಸ್ಟ್ ಪೋಸ್ಟ್ ಯಾವ್ದು ನೋಡಿ
ಆದರೆ ಇತ್ತೀಚಿಗೆ ಸುದೀಪ್ ಕಡಿಮೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಪ್ರಾಜೆಕ್ಟ್‌ನಲ್ಲಿ ಇರುವ ಕ್ವಾಲಿಟಿ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ ಅದು ಏನೇ ಇದ್ದರೂ instincts ಮತ್ತು ಡಿಸೈಯರ್ ಎಂದಿದ್ದಾರೆ. ಒಂದು ವೇಳೆ ನಿವೃತ್ತಿ ಪಡೆದರೂ ಕೂಡ ಸಿನಿಮಾ ಇಂಡಸ್ಟ್ರಿಯನ್ನು ಎಂದೂ ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡುವುದು ಅಥವಾ ನಿರ್ಮಾಣ ಮಾಡುವ ಕಡೆ ಸುದೀಪ್ ಮುಂದುವರೆಯಬಹುದು. ಎಲ್ಲಿಂದ ಸುದೀಪ್ ನಿವೃತ್ತಿ ಪಡೆಯುತ್ತಾರೆ ಎಂದು ಗಾಸಿಪ್ ಹಬ್ಬಿದೆ ಗೊತ್ತಿಲ್ಲ ಆದರೆ ಯಾವುದೇ ಕಾರಣ ಕನ್ನಡ ಚಿತ್ರರಂಗವನ್ನು ಸುದೀಪ್ ಬಿಡುವುದಿಲ್ಲ ಹಾಗೂ ಬಿಟ್ಟು ಕೊಡುವುದಿಲ್ಲ. ಇಂಡಸ್ಟ್ರಿಯಲ್ಲಿ ಏನೇ ಸಮಸ್ಯೆ ಆದರೂ ಸರಿಯಾದ ಸಮಯಕ್ಕೆ ಸುದೀಪ್ ಧ್ವನಿ ಎತ್ತಿದ್ದಾರೆ ಅಲ್ಲದೆ ಇತರ ಕಲಾವಿದರಿಗೆ ಸಹಾಯ ಕೂಡ ಮಾಡಿದ್ದಾರೆ. ಸುದೀಪ್ ರವರಿಗೆ ದೊಡ್ಡ ಸ್ಥಾನ ನೀಡಿದ್ದಾರೆ ಅಭಿಮಾನಿಗಳು ಹೀಗಾಗಿ ನಿವೃತ್ತಿ ಪಡೆದರೂ ಪರ್ವಾಗಿಲ್ಲ ಆಗಾಗ ಸಿನಿಮಾ ಮಾಡಿ ಅಂತಿದ್ದಾರೆ.
ನನ್ನ ಲೈಫ್ ಕಂಟ್ರೋಲ್ ಮಾಡುವ ಹಕ್ಕು ಆ ವ್ಯಕ್ತಿಗೆ ಕೊಟ್ಟಿದ್ದೆ; ಡಿಪ್ರೆಶನ್‌ಗೆ ಜಾರಿದ ನಟಿ ಅಮೃತಾ ಅಯ್ಯಂಗಾರ್