ಹಸಿಬಿಸಿ ದೃಶ್ಯದ ಬಳಿಕ 'ಪೆನ್​ಡ್ರೈವ್'​ನಲ್ಲಿ ಬಿಗ್​ಬಾಸ್​ ತನಿಷಾ! ಥೋ ಥೋ... ವಿಡಿಯೋ ವೈರಲ್​

By Suchethana D  |  First Published Sep 10, 2024, 4:53 PM IST

ಪೆಂಟಗನ್​ ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ ಈಗ ಪೆನ್​ಡ್ರೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹೇಳಿದ್ದೇನು? 
 


'ಬಿಗ್ ಬಾಸ್' ಮನೆಯಲ್ಲಿ ಬೆಂಕಿ ಎಂದು ಕರೆಸಿಕೊಳ್ಳುತ್ತಿದ್ದ ನಟಿ ತನಿಷಾ ಕುಪ್ಪಂಡ ಈಗ ಪೆನ್​ಡ್ರೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್​ಬಾಸ್​ ಬಳಿಕ ಸಕತ್​ ಫೇಮಸ್​ ಆಗಿರೋ ತನಿಷಾ ಅವರಿಗೆ ಸಿನಿಮಾದಿಂದಲೂ ಆಫರ್​ ಬರುತ್ತಿದ್ದು, ಅವರ ಪೆನ್​ಡ್ರೈವ್​ ಸಿನಿಮಾ ಶೀಘ್ರದಲ್ಲಿಯೇ ತೆರೆಯ ಮೇಲೆ ಬರಲಿದೆ.  ಈ ಚಿತ್ರದಲ್ಲಿ ತನಿಷಾ  ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಕೆಲ ದಿನಗಳ ಹಿಂದೆ ನಟಿ ಬಹಿರಂಗಪಡಿಸಿದ್ದರು. ಪೆನ್‌ ಡ್ರೈವ್ ಚಿತ್ರದ ಕಥೆ ತುಂಬ ಚೆನ್ನಾಗಿದ್ದು ನಾನು  ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ ಎಂದಿದ್ದರು. ಜೊತೆಗೆ ನೀವು ಅಂದುಕೊಂಡಂತೆ ಅದು ಬಹಳ ಸದ್ದು ಮಾಡಿರೋ ಪೆನ್​ಡ್ರೈವ್​ ಕಥೆಯಲ್ಲ, ಅಂದ್ರೆ  ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ಅಲ್ಲ ಮತ್ತೆ. ಇದರಲ್ಲಿ ಇರೋದೇ ಬೇರೆ ಎಂದು ಹೇಳುವುದನ್ನೂ ಮರೆಯಲಿಲ್ಲ ನಟಿ.
 
ಅಂದಹಾಗೆ ಪೆನ್​ಡ್ರೈವ್​ನಲ್ಲಿ ತನಿಷಾ ಅವರು  ಓರ್ವ ಮಹಿಳಾ ಪೊಲೀಸ್ ಹೇಗೆಲ್ಲಾ ಕರ್ತವ್ಯ ನಿರ್ವಹಿಸಬೇಕಾಗುತ್ತದೆ, ಯಾವ್ಯಾರ ರೀತಿಗಳ  ಕೇಸ್‌ ಹ್ಯಾಂಡಲ್ ಮಾಡಬೇಕಾಗುತ್ತದೆ ಎಂಬುದನ್ನು ತಿಳಿಸಿದ್ದಾರಂತೆ. ಅಂದಹಾಗೆ ಈ ಚಿತ್ರವನ್ನು ಸೆಬಾಸ್ಟಿನ್ ಡೇವಿಡ್ ಮಾಡುತ್ತಿದ್ದಾರೆ.  ಲಯನ್ ಆರ್. ವೆಂಕಟೇಶ್ ಮತ್ತು ಲಯನ್ ಎಸ್. ವೆಂಕಟೇಶ್ ಚಿತ್ರದ ನಿರ್ಮಾಪಕರು.  ಈ ಚಿತ್ರದ ಶೀರ್ಷಿಕೆ ಕುರಿತು ವಿವರಿಸಿದ್ದ ಅವರು, ಇಂಥದ್ದೊಂದು  ಶೀರ್ಷಿಕೆ ನೀಡಿದ ವಾಣಿಜ್ಯ ಮಂಡಳಿಗೆ ಧನ್ಯವಾದ. ಪ್ರಸ್ತುತ ಚಾಲ್ತಿಯಲ್ಲಿರುವ ಪೆನ್ ಡ್ರೈವ್​ಗೂ ನಮ್ಮ ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರೂ ಸ್ಪಷ್ಟಪಡಿಸಿದ್ದರು. ಮಾಲಾಶ್ರೀ ಅವರನ್ನು ನೋಡಿದಾಗ ಅವರು ಮಾಡಿದ ಪೊಲೀಸ್​ ಪಾತ್ರ ಮಾಡಬೇಕು ಎಂದು ಆಸೆ ಇತ್ತು. ಇದೀಗ  ನೆರವೇರಿದೆ ಎಂದು ತನಿಷಾ ಸಂದರ್ಶನದಲ್ಲಿ ಹೇಳಿದ್ದರು. 

ಪೂರ್ಣ ಬೆತ್ತಲಾಗೋಕೆ ರೆಡಿನಾ ಕೇಳಿದ... ಶಾಕಿಂಗ್​ ವಿಷ್ಯ ತಿಳಿಸಿದ ಬಿಗ್​ಬಾಸ್​ ತನಿಷಾ ಕುಪ್ಪಂಡ
 
ಈ ಚಿತ್ರದ ಡೈಲಾಗ್​ ಹೇಳುವಾಗ ತನಿಷಾ ಎಡವಟ್ಟು ಮಾಡಿದ್ದು, ಅದರ ತುಣುಕು ರೀಲ್ಸ್​ ರೂಪದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರಲ್ಲಿ ಮೊದಲಿಗೆ ನಟಿ, ನಮ್ಮ ಪೆನ್​ಡ್ರೈವ್​ ಸೆಟ್​ಗೆ ಬಂದಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದ ಎಂದಿದ್ದಾರೆ. ನಂತರ ಚಿತ್ರದ ಡೈಲಾಗ್​ ಹೇಳಲು ಮುಂದಾದರು. ನಿಮಗೆಲ್ಲಾ ಧನ್ಯವಾದ ಹೇಳ್ತಾ ಎಸಿಪಿ... ಮುಂದೆ ಚಿತ್ರದಲ್ಲಿ ತಮ್ಮ ಹೆಸರು ನೆನಪಾಗದೇ ಥೋ ಥೋ ಥೋ ಹೋಯ್ತದು ಎಂದಿದ್ದಾರೆ. ಇದಷ್ಟೇ ವಿಡಿಯೋ ಈಗ ಸಕತ್​ ಸೌಂಡ್​ ಮಾಡುತ್ತಿದೆ. ಎಸ್​ವಿಎನ್​ ಈ ವಿಡಿಯೋ ಹಂಚಿಕೊಂಡಿದೆ. ಅಂದಹಾಗೆ, ಚಿತ್ರದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಮತ್ತು ಗೀತಾ ಪ್ರಿಯಾ ಸೇರಿದಂತೆ ಹಲವರು ನಟಿಸಿದ್ದಾರೆ.  ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಬರೆದಿದ್ದಾರೆ. 

Tap to resize

Latest Videos

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ ಇದಾಗಲೇ ಹಲವಾರು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿರುವ ತನಿಷಾ ಕುಪ್ಪಂಡ ಬಿಗ್​ಬಾಸ್​ನಿಂದ ಸಕತ್​  ಫೇಮಸ್​ ಆದವರು. ಆದರೆ ಇವರು ಬಹಳ ಸದ್ದು ಮಾಡಿದ್ದು  ‘ಪೆಂಟಗನ್’ ಚಿತ್ರದ ಮೂಲಕ. ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರದಲ್ಲಿ ತನಿಷಾ ಬಹಳ ಸದ್ದು ಮಾಡಲು ಕಾರಣ, ಅವರು ಇದರಲ್ಲಿ  ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಕಾರಣ. ಚಿತ್ರ ಬಿಡುಗಡೆಗೂ ಮುನ್ನ, ಬ್ಯಾಕ್‌ಲೆಸ್ ಆಗಿರುವ ತನಿಷಾ ಕುಪ್ಪಂಡ ಲಿಪ್ ಲಾಕ್ ಕೂಡ ಮಾಡಿರುವ ಹಾಡು ರಿಲೀಸ್​ ಆಗುತ್ತಿದ್ದಂತೆಯೇ ಹಲ್​ಚಲ್​ ಸೃಷ್ಟಿಸಿತ್ತು. ಪೆಂಟಗನ್​ ಚಿತ್ರದಲ್ಲಿ ಇಂಟಿಮೇಟ್​ ಸೀನ್​ ಮಾಡುವಾಗ ತುಂಬಾ ಕನ್​ಫರ್ಟ್​ ಇತ್ತು. ಎಲ್ಲರನ್ನೂ ನಿರ್ದೇಶಕರು ಹೊರಕ್ಕೆ ಕಳಿಸಿದ್ದರು. ನನಗೆ ಈಜಿ ಫೀಲ್​ ಮಾಡಿದರು. ಕ್ಯಾಮೆರಾಮೆನ್​, ನಿರ್ದೇಶಕರು ಮತ್ತು ನಾವು ನಟರು ಅಷ್ಟೇ ಇದ್ವಿ. ಆದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ಚಿತ್ರದ ಮೊದಲ ಹಾಡು ಬಿಡುಗಡೆಯಾದಾಗ ತುಂಬಾ ಮಂದಿ ನೆಗೆಟಿವ್​ ಆಗಿಯೂ ಕಮೆಂಟ್​ ಮಾಡಿದ್ರು. ದುಡ್ಡಿಗಾಗಿ ಏನು ಬೇಕಾದ್ರೂ ಮಾಡ್ತಾರೆ ಎಂದ್ರು. ಇದು ನನಗೆ ನೋವಾಯಿತು. ಅಸಲಿಗೆ ಆ ಹಾಡಿನಲ್ಲಿ ಸಕತ್​ ಬೋಲ್ಡ್​ ಸೀನ್​ ಇತ್ತು ಬಿಟ್ಟರೆ, ಚಿತ್ರ ನೋಡಿದಾಗ ಇಷ್ಟೇನಾ ಎನ್ನುವ ಹಾಗಿದೆ ಎಂದಿದ್ದರು. ಈಗ ಪೆನ್​ಡ್ರೈವ್​ ಹೇಗೆ ವರ್ಕ್​ಔಟ್​ ಆಗಲಿದೆ ನೋಡಬೇಕಿದೆ. 

ನನ್ನ ಸೈಜ್​ 41, ಇಲ್ಲೇ ಕೊಡ್ಲಾ ಅಥವಾ ಅಲ್ಲಿಗೆ ಬರ್ತಿಯಾ? ನಿರ್ಮಾಪಕನಿಗೆ ಹೀಗೆ ಹೇಳಿದ್ರಂತೆ ಖುಷ್ಬೂ!

click me!