ದರ್ಶನ್‌ ಜೈಲಲ್ಲಿ ಒದ್ದಾಟ, ವಿಜಯಲಕ್ಷ್ಮೀ ಕಾಸ್ಟ್‌ಲೀ ಕುರ್ತಾ ಧರಿಸಿ ಓಡಾಟ! ದರ್ಶನ್‌ ಪತ್ನಿಯ ದುಬಾರಿ ಕುರ್ತಾದ ರೇಟೆಷ್ಟು?

By Bhavani Bhat  |  First Published Sep 10, 2024, 11:21 AM IST

ದರ್ಶನ್ ಜೈಲಲ್ಲಿದ್ರೆ ಆತನ ಪತ್ನಿ ವಿಜಯಲಕ್ಷ್ಮೀ ಕಾಮಾಕ್ಯ ದೇವಿ ದರ್ಶನಕ್ಕೆ ತೆರಳಿದ್ದಾರೆ. ಅಲ್ಲಿನ ಫೋಟೋ ವೈರಲ್‌ ಆಗಿದ್ದು, ವಿಜಯಲಕ್ಷ್ಮೀ ಧರಿಸಿರೋ ಕಾಸ್ಟ್‌ಲೀ ಸಿಲ್ಕ್‌ ಕುರ್ತಾ ಬಗ್ಗೆ ನೆಟ್ಟಿಗರು ಚರ್ಚೆ ಮಾಡ್ತಿದ್ದಾರೆ. ಅಷ್ಟಕ್ಕೂ ಇದರ ಬೆಲೆ ಏನು?


ವಿಜಯಲಕ್ಷ್ಮೀ ದರ್ಶನ್. ಸಿನಿಮಾ, ಸೀರಿಯಲ್‌ಗಳಲ್ಲಿ ಬರೋ ಅತೀ ಒಳ್ಳೆತನದ ಪತ್ನಿಯ ರೋಲ್‌ ಅನ್ನು ಸದ್ಯ ಪ್ಲೇ ಮಾಡ್ತಿದ್ದಾರೆ. ಹಾಗೆ ನೋಡಿದರೆ ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವೆ ಎಲ್ಲವೂ ಸರಿ ಇರಲಿಲ್ಲ ಅನ್ನೋದು ಸಾಕಷ್ಟು ಸಲ ಸಾಬೀತಾಗಿತ್ತು. ಸದ್ಯ ದರ್ಶನ್ ತಾನು ಪವಿತ್ರಾ ಗೌಡ ಜೊತೆ 10 ವರ್ಷದಿಂದ ಲಿವ್‌ ಇನ್ ರಿಲೇಶನ್‌ಶಿಪ್‌ನಲ್ಲಿದ್ದೀನಿ ಅನ್ನೋ ಸ್ಟೇಟ್‌ಮೆಂಟ್‌ ಅನ್ನು ಪೊಲೀಸರಿಗೇ ಹೇಳಾಗಿದೆ. ಇನ್ನು ವಿಜಯಲಕ್ಷ್ಮೀ ಈ ಹಿಂದೆ ಪಬ್ಲಿಕ್ ಪೋಸ್ಟ್ ಹಾಕಿ ತಾನು ದರ್ಶನ್ ಅಧಿಕೃತ ಪತ್ನಿ. ದರ್ಶನ್ ಪತ್ನಿ ಅಂತ ಇನ್ನೊಬ್ಬರ ಹೆಸರು ಹಾಕಂಗಿಲ್ಲ ಅಂದುಬಿಟ್ರು. ಸ್ವಲ್ಪ ಸಮಯ ಗಂಡನ ಕೇಸ್‌ ಹಿಂದಿಂದೆ ಅಲೆದಾಡಿದ ವಿಜಯಲಕ್ಷ್ಮೀ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇದ್ದಾಗ ಟೈಮ್ ಸಿಕ್ಕಾಗಲೆಲ್ಲ ಹೋಗಿ ಮೀಟ್ ಆಗಬೇಕಿತ್ತು. ಈಗ ಬಳ್ಳಾರಿಗೆ ಶಿಫ್ಟ್ ಆದಮೇಲೆ ಆ ಸಮಸ್ಯೆಗೆ ಸ್ವಲ್ಪ ವಿರಾಮ ಸಿಕ್ಕಿದೆ.

ಈ ಪುಣ್ಯಾತ್ಮನ ಗೋಳು ಯಾವಾಗಲೂ ಇದ್ದಿದ್ದೇ. ಈತನಿಗಾಗಿ ತಲೆ ಕೆಡಿಸಿಕೊಂಡು ಪ್ರಯೋಜನ ಇಲ್ಲ ಅಂತ ಅನಿಸಿರಬೇಕು. ಹೀಗಾಗಿ ವಿಜಯಲಕ್ಷ್ಮೀ ಮತ್ತೆ ಸ್ಟೈಲಾಗಿ ಡ್ರೆಸ್ ಮಾಡಿಕೊಂಡು ಫ್ರೆಂಡ್ಸ್, ಪಾರ್ಟಿ ಅಂತ ಓಡಾಡೋದಕ್ಕೆ ಶುರು ಮಾಡಿದ್ದಾರೆ. ತಲೆಕೆಟ್ಟ ಕೆಲವರು ಗಂಡ ಜೈಲಲ್ಲಿದ್ದಾನೆ, ಇವ್ಳು ಹೀಗೆ ಮೆರೀತಿದ್ದಾಳ ಅಂತೆಲ್ಲ ಹೇಳ್ತಿದ್ದಾರೆ. ಆದರೆ ಇದಕ್ಕೆ ವಿಜಯಲಕ್ಷ್ಮೀ ತಲೆಕೆಡಿಸಿಕೊಂಡಿಲ್ಲ. ಸದ್ಯ ತನ್ನ ಪತಿ ಪರಮೇಶ್ವರ ಮಾಡಿರೋ ಘನಂದಾರಿ ಕೆಲಸಕ್ಕೆ ಈಕೆ ಮಾಡೋವಷ್ಟು ಸಹಾಯ ಮಾಡಿ ಮತ್ತೆ ತನ್ನ ಹಳೆ ಲೈಫಿಗೆ ಮರಳಿದಂತಿದೆ.

Tap to resize

Latest Videos

undefined

ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ, ಶಕ್ತಿಪೀಠ ಆಶೀರ್ವಾದದಿಂದ ಸಿಗುತ್ತಾ ಮುಕ್ತಿ?

ಇದರ ಜೊತೆಗೆ ದರ್ಶನ್ ರೇಣುಕಾ ಸ್ವಾಮಿ ಹತ್ಯೆಗೂ ಮೊದಲು ನಿನ್ನ ಸಂಬಳ ಎಷ್ಟು ಎಂದು ವಿಚಾರಿಸಿದ್ದು ವೈರಲ್ ಆಗಿದೆ. ನೀನು ತಿಂಗಳು ಪೂರ್ತಿ ದುಡಿಯುವ ಸಂಬಳ ಪವಿತ್ರಾಳ ಒಂದು ದಿನದ ಖರ್ಚು! ಮೇಂಟೇನ್‌ಗೆ ಸಾಕೋಗಲ್ಲ. ನಿನಗೆ ಪವಿತ್ರಾ ಬೇಕಾ

ನಿನ್ನ ತಿಂಗಳ ಸಂಬಳ ಎಷ್ಟು' ಎಂದು ಪ್ರಶ್ನಿಸಿದ್ದರು. ತಡವರಿಸುತ್ತಲೇ ರೇಣುಕಾಸ್ವಾಮಿ ಸುಮಾರು 20 ಸಾವಿರ ಬರುತ್ತೆ ಎಂದಿದ್ದರು. ಆಗ ದರ್ಶನ್‌ ನೀನು ತಿಂಗಳು ಪೂರ್ತಿ ದುಡಿಯುವ ಸಂಬಳ ಪವಿತ್ರಾಳ ಒಂದು ದಿನದ ಖರ್ಚು ಎಂದು ದಾಳಿ ಮಾಡಿದ್ದರು.

ಇದೀಗ ವಿಜಯಲಕ್ಷ್ಮೀ ಖರ್ಚು ಮಾಡೋದ್ರಲ್ಲಿ ತಾನೇನೂ ಕಡಿಮೆ ಇಲ್ಲ ಅನ್ನೋದನ್ನು ತೋರಿಸಿಕೊಳ್ತಿದ್ದಾರೆ. ದರ್ಶನ್ ಅರೆಸ್ಟ್ ಆಗೋದಕ್ಕೂ ಮೊದಲು ವಿಜಯಲಕ್ಷ್ಮೀ ಭರ್ಜರಿ ಫಾರಿನ್ ಟ್ರಿಪ್ ಹೊಡೆದು ಬಂದಿದ್ದರು. ಜಗತ್ತಿನ ಬಹಳ ಸುಂದರವಾದ ಜಾಗಗಳನ್ನು ಸುತ್ತುತ್ತಾ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದಕ್ಕೆ ಠಕ್ಕರ್ ಕೊಡಲು ಪವಿತ್ರ ತಾನು ದರ್ಶನ್ ಜೊತೆಗೆ ಆಪ್ತವಾಗಿರುವ ಫೋಟೋ ಹಾಕ್ಕೊಂಡಿದ್ದರು. ಇದರಿಂದ ಕೆಂಡಾಮಂಡಲವಾದ ವಿಜಯಲಕ್ಷ್ಮೀ ಪವಿತ್ರಾಳ ಮಾಜಿ ಪತಿಯ ಫೋಟೋ ಹಾಕಿ ಸಿಟ್ಟಿನಲ್ಲಿ ಕಾಮೆಂಟ್ ಮಾಡಿದ್ದರು. ಇದು ಸಾಕಷ್ಟು ಸದ್ದು ಮಾಡಿತ್ತು.

ಸ್ನೇಹಿತೆಯ ಬರ್ತಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮೀ ದರ್ಶನ್; ಇಷ್ಟೇ ಕಣ್ರೋ ಜೀವನ ಎಂದ ನೆಟ್ಟಿಗರು!

ಇದೀಗ ಪವಿತ್ರಾ ಮತ್ತು ದರ್ಶನ್ ಜೈಲಿನಲ್ಲಿದ್ದಾರೆ. ವಿಜಯಲಕ್ಷ್ಮೀ ಕಾಸ್ಟ್‌ಲೀ ಡ್ರೆಸ್‌ ಧರಿಸಿ ಸುತ್ತಾಟ ಮುಂದುವರಿಸಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮೀ ದೇವಿಯ ಸನ್ನಿಧಿ ಇರುವ ಕಾಮ್ಯಾಕ್ಯಕ್ಕೆ ವಿಸಿಟ್ ಮಾಡಿದ್ದರು. ಅಲ್ಲಿ ಹೋದದ್ದು ದರ್ಶನ್ ಕಾರಣಕ್ಕಾದರೂ ಅಲ್ಲಿ ಹೋದಾಗ ಆಕೆ ಧರಿಸಿದ್ದ ಕೇಸರಿ ಬಣ್ಣದ ಕುರ್ತಾ ಸದ್ಯ ಸುದ್ದಿಯಲ್ಲಿದೆ. ಇದರ ಬೆಲೆ ಬರೋಬ್ಬರಿ 41,700 ರು. ಆರೆಂಜ್ ಬನಾರಸಿ ಸಿಲ್ಕ್‌ ಕುರ್ತಾದಲ್ಲಿ ಗೋಲ್ಡನ್‌ ಕಲರ್ ಜರಿ ವರ್ಕ್ ಇದೆ.

ವಿಜಯಲಕ್ಷ್ಮೀ ಧರಿಸಿದ್ದ ಈ ಕರ್ತಾ ಭಲೇ ದುಬಾರಿ ಅಂತ ಗೊತ್ತಾಗ್ತಿದ್ದ ಹಾಗೆ ಒಂದಿಷ್ಟು ಮಂದಿ, 'ಅಣ್ಣ ಜೈಲಲ್ಲಿ ಕೊಳೀತಿದ್ರೆ ಅತ್ತಿಗೆ ಕಾಸ್ಟ್‌ಲೀ ಕುರ್ತಾ ತೊಟ್ಟು ಫ್ಯಾಶನ್ ಶೋ' ಮಾಡ್ತಿದ್ದಾರ ಅಂತೆಲ್ಲ ಕುಹಕ ಮಾಡ್ತಿದ್ದಾರೆ.

 

click me!