ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್ ಬಂದಿಲ್ಲ, ಸ್ಪಷ್ಟನೆ ನೀಡಿದ ನಟಿ ಶುಭಾ ಪೂಂಜಾ!

Published : Sep 10, 2024, 11:47 AM ISTUpdated : Sep 10, 2024, 11:56 AM IST
ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್ ಬಂದಿಲ್ಲ, ಸ್ಪಷ್ಟನೆ ನೀಡಿದ ನಟಿ ಶುಭಾ ಪೂಂಜಾ!

ಸಾರಾಂಶ

ರೇಣುಕಾಸ್ವಾಮಿ ಪವಿತ್ರಾ ಗೌಡಾಗೆ ಮಾತ್ರವಲ್ಲ ಇತರ ಕೆಲ ನಟಿಯರಿಗೂ ಅಶ್ಲೀಲ ಮೆಸೇಜ್ ಮಾಡಿದ್ದ ಅನ್ನೋ ಆರೋಪಕ್ಕೆ ಇದೀಗ ನಟಿ ಶುಭಾ ಪೂಂಜಾ ಸ್ಪಷ್ಟನೆ ನೀಡಿದ್ದಾರೆ. 

ಬೆಂಗಳೂರು(ಸೆ.10) ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿನ ಕೆಲ ಮಾಹಿತಿಗಳು ಇದೀಗ ಕೋಲಾಹಲಕ್ಕೆ ಕಾರಣವಾಗಿದೆ. ಈ ಪೈಕಿ ರೇಣುಕಾಸ್ವಾಮಿ ಪವಿತ್ರಾ ಗೌಡಾಗೆ ಮಾತ್ರವಲ್ಲ ಸ್ಯಾಂಡಲ್‌ವುಡ್‌ನ ಕೆಲ ನಟಿಯರಿಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಅನ್ನೋ ಆರೋಪ ಇದೀಗ ಗಂಭೀರವಾಗುತ್ತಿದೆ. ಚಾರ್ಜ್ ಶೀಟ್‌ನಲ್ಲಿ ನಟಿ ಶುಭಾ ಪೂಂಜಾ, ರಾಗಿಣಿಗೂ ಅಶ್ಲೀಲ ಮೆಸೇಜ್ ಕಳುಹಿಸಲಾಗಿತ್ತು ಅನ್ನೋ ಹೇಳಿಕೆ ದಾಖಾಗಿದೆ.ಈ ವಿಚಾರ ಹೊರಬರುತ್ತಿದ್ದಂತೆ ಶುಭಾ ಪೂಂಜಾ ಸ್ಪಷ್ಟನೆ ನೀಡಿದ್ದಾರೆ. ರೇಣುಕಾಸ್ವಾಮಿಯಿಂದ ತನಗೆ ಯಾವುದೇ ಅಶ್ಲೀಲ ಮೇಸೆಜ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಏಷ್ಯಾನೆನಟ್ ಸುವರ್ಣನ್ಯೂಸ್‌ಗೆ ನಟಿ ಶುಭಾ ಪೂಂಜಾ ಸ್ಪಷ್ಟನೆ ನೀಡಿದ್ದಾರೆ. ರೇಣುಕಾಸ್ವಾಮಿಯಿಂದ ತನಗೆ ಅಶ್ಲೀಲ ಮೆಸೇಜ್‌ಗಳು ಬಂದಿಲ್ಲ. ಆದರೆ ದರ್ಶನ್ ಗ್ಯಾಂಗ್ ಚಾರ್ಜ್ ಶೀಟ್‌ನಲ್ಲಿ ತನ್ನ ಹೆಸರು ಯಾಕೆ ಉಲ್ಲೇಖಿಸಿದ್ದಾರೆ ಅನ್ನೋದು ಗೊತ್ತಿಲ್ಲಿ ಎಂದು ಶುಭಾ ಪೂಂಜಾ ಹೇಳಿದ್ದಾರೆ. 

ಖಾಸಗಿ ವಿಡಿಯೋ ಮುಂದಿಟ್ಟು ದರ್ಶನ್‌ಗೆ ಪವಿತ್ರಾ ಬ್ಲಾಕ್‌ಮೇಲ್, ಪತ್ನಿ ವಿಜಯಲಕ್ಷ್ಮಿಯಿಂದ ರಹಸ್ಯ ಬಯಲು!

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿಗಳ ವಿಚಾರಣೆ, ಕಲೆ ಹಾಕಿದ ಸಾಕ್ಷಿ,ಪ್ರತ್ಯಕ್ಷ ಸಾಕ್ಷಿ, ಆರೋಪಿಗಳ ಸ್ವಯಂ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ. ಈ ಪೈಕಿ  ಎ5 ಆರೋಪಿ ನಂದೀಶ್ ನೀಡಿರುವ ಹೇಳಿಕೆಯಲ್ಲಿ ಪವಿತ್ರಾ ಗೌಡ ಜೊತೆಗೆ ರೇಣುಕಾಸ್ವಾಮಿ ಇತರ ನಟಿಯರಿಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ನಟಿ ಶುಭಾ ಪೂಂಜಾ, ನಟಿ ರಾಗಿಣಿಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

ರೇಣುಕಾಸ್ವಾಮಿಯನ್ನು ಪಟ್ಟಗೆರೆ ಶೆಡ್‌ಗೆ ಕರೆದ ತಂದ ದರ್ಶನ್ ಗ್ಯಾಂಗ್ ಆರೋಪಿಗಳು ಬಳಿಕ ದರ್ಶನ್‌ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪವಿತ್ರಾ ಗೌಡ ಜೊತೆ ಶೆಡ್‌ಗೆ ಆಗಮಿಸಿದ್ದ ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಮೊಬೈಲ್ ಪಡೆದು ದರ್ಶನ್ ಪರಿಶೀಲನೆ ನಡೆಸಿದಾಗ ಇತರ ಶುಭಾಪೂಂಜಾ, ರಾಗಿಣಿಗೂ ಮೆಸೇಜ್ ಮಾಡಿದ್ದೀಯಾ? ಎಲ್ಲಾ ನಟಿಯರಿಗೂ ಇದೇ ರೀತಿ ಮೆಸೇಜ್ ಮಾಡುತ್ತಿದ್ದೀಯಾ ಎಂದು ದರ್ಶನ್ , ರೇಣುಕಾಸ್ವಾಮಿಗೆ ಗದರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿ ನಂದೀಶ್ ಹೇಳಿಕೆ ನೀಡಿದ್ದಾರೆ. ಚಾರ್ಜ್‌ಶೀಟ್‌ ಮಾಹಿತಿ ಹೊರಬಂದ ಬೆನ್ನಲ್ಲೇ ಶುಭಾ ಪೂಂಜಾ ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಕುರಿತು ರಾಗಿಣಿ ಯಾವುದೇ ಸ್ಪಷ್ಟನೆ ನೀಡಿಲ್ಲ. 

ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ, ಶಕ್ತಿಪೀಠ ಆಶೀರ್ವಾದದಿಂದ ಸಿಗುತ್ತಾ ಮುಕ್ತಿ?

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿರುವ ಕೆಲ ಮೆಸೇಜ್‌ಗಳು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಪೈಕಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ರೇಣಕಾಸ್ವಾಮಿ ನಿನ್ನ ಜೊತೆ ಲಿವೀಂಗ್ ರಿಲೇಶನ್‌ಶಿಪ್‌ನಲ್ಲಿರುವ ಬಯಕೆಯಾಗಿದೆ. ನನ್ನ ಜೊತೆಗಿದ್ದರೆ ತಿಂಗಳಿಗೆ 10,000 ರೂಪಾಯಿ ಕೊಡುತ್ತೇನೆ ಎಂದು ಮೆಸೇಜ್ ಮಾಡಿದ್ದಾನೆ. ನಕಲಿ ಖಾತೆ ಮೂಲಕ ಮೆಸೇಜ್ ಕಳುಹಿಸಿದ್ದ ಅಸಲಿ ಆರೋಪಿ ಪತ್ತೆ ಹಚ್ಚಲು ಪವಿತ್ರಾ ಗೌಡ ಹಾಗೂ ದರ್ಶನ್ ಗ್ಯಾಂಗ್ ಪ್ಲಾನ್ ಮಾಡಿತ್ತು. ಪವಿತ್ರಾ ಗೌಡ ಚಾಟಿಂಗ್ ಮಾಡಿ ರೇಣುಕಾಸ್ವಾಮಿ ನಂಬರ್ ಪಡೆದುಕೊಂಡು ಆರೋಪಿ ಪತ್ತಹಚ್ಚಲಾಗಿತ್ತು. ಬಳಿಕ ನಡೆದಿದ್ದೇ ದುರಂತ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!