ಮಡದಿಯ ಹಾರೈಕೆ ಸೆಲೆಬ್ರಿಟಿಗಳ ಆಶೀರ್ವಾದ...ಗಜ ಮತ್ತೆ ಅಬ್ಬರಿಸಲಿ; ದರ್ಶನ್‌ ಬಗ್ಗೆ ಬಿಗ್ ಬಾಸ್ ಅನುಷಾ ಪೋಸ್ಟ್‌

Published : Dec 16, 2024, 02:04 PM IST
ಮಡದಿಯ ಹಾರೈಕೆ ಸೆಲೆಬ್ರಿಟಿಗಳ ಆಶೀರ್ವಾದ...ಗಜ ಮತ್ತೆ ಅಬ್ಬರಿಸಲಿ; ದರ್ಶನ್‌ ಬಗ್ಗೆ ಬಿಗ್ ಬಾಸ್ ಅನುಷಾ ಪೋಸ್ಟ್‌

ಸಾರಾಂಶ

ನಟಿ ಅನುಷಾ ರೈ, ದರ್ಶನ್‌ಗೆ ಜಾಮೀನು ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರರಂಗಕ್ಕೆ ಮರಳಲಿ, ಮೈಸೂರಿನ ಆರಡಿಯ ತೂಗುದೀಪ ರಾರಾಜಿಸಲಿ ಎಂದು ಆಶಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಅನುಷಾ, ದರ್ಶನ್ ಅಭಿಮಾನಿ. ದರ್ಶನ್ ಬಂಧನದ ವೇಳೆ, ಕಾನೂನು ನೋಡಿಕೊಳ್ಳುತ್ತದೆ, ದರ್ಶನ್ ಕುಟುಂಬಕ್ಕೆ ಶಾಪ ಹಾಕಬೇಡಿ ಎಂದಿದ್ದರು.

ತುಮಕೂರು ಚೆಲುವೆ ಅನುಷಾ ರೈ ಕನ್ನಡ ಚಿತ್ರರಂಗ ಮತ್ತು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇಂಜಿನಿಯರಿಂಗ್‌ ಪದವಿಧರೆ ಆಗಿರುವ ಅನುಷಾ ದಮಯಂತಿ, ಕರ್ಷಣಂ, ಪೆಂಟಗನ್,ಖಡಕ್, ಅಬ್ಬಬ್ಬಾ ಮತ್ತು ಸರ್ವತ್ರ ಸಾಧನಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿ 50 ದಿನಗಳಿಗೆ ಹೊರ ಬಂದಿರುವ ಅನುಷಾ ರೈ ಇದೀಗ ನಟ ದರ್ಶನ್‌ ಬಗ್ಗೆ ಪೋಸ್ಟ್ ಹಾಕಿದ್ದಾರೆ.  ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಜೈಲು ಸೇರಿದ್ದ ದರ್ಶನ್‌ಗೆ ಜಾಮೀನು ಸಿಕ್ಕಿದೆ ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅನುಷಾ ಸಂತಸ ವ್ಯಕ್ತ ಪಡಿಸಿದ್ದಾರೆ.

ಅನುಷಾ ಪೋಸ್ಟ್‌:

'ಕೊನೆಗೂ ಮಡದಿಯ ಹಾರೈಕೆ..ಸೆಲೆಬ್ರಿಟಿಗಳ ಆಶೀರ್ವಾದ ಫಲ ನೀಡಿದೆ. ಬಾಕ್ಸ್‌ ಆಫೀಸ್‌ ಗಜ ಮತ್ತು ಅಬ್ಬರಿಸಲಿ. ಸ್ಯಾಂಡಲ್‌ವುಡ್‌ ಸಾರಥಿಗೆ ಶುಭವಾಗಲಿ. ಮೈಸೂರಿನ ಆರಡಿಯ ತೂಗುದೀಪ ರಾರಾಜಿಸಲಿ. ಕಾಲಾಯ ತಸ್ಮೈ ನಮಃ' ಎಂದು ಅನುಷಾ ರೈ ಬರೆದುಕೊಂಡಿದ್ದಾರೆ. ವರ್ಷ ವರ್ಷವೂ ಅನುಷಾ ತಮ್ಮ ಹುಟ್ಟುಹಬ್ಬದ ದಿನ ಹಾಗೂ ದರ್ಶನ್ ಹುಟ್ಟಹಬ್ಬದ ದಿನ ಭೇಟಿ ಮಾಡುತ್ತಾರೆ. ಈ ವೇಳೆ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಬಿಗ್ ಬಾಸ್ ಸೀಸನ್ 11ಕ್ಕೆ ಅನುಷಾ ಆಯ್ಕೆ ಆಗಲು ಕಾರಣವೇ ದರ್ಶನ್ ವಿಚಾರದಲ್ಲಿ ಧ್ವನಿ ಎತ್ತಿದ್ದಕ್ಕೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. 'ಒಂದು ಮಾತಿನಿಂದ ತುಂಬಾ ತಪ್ಪಾಗಿ ತಿಳಿದುಕೊಂಡಿದ್ವಿ ಆದರೆ ನೀವು ನಿಜವಾದ ಅಭಿಮಾನಿ, ನೀವು ನಿಜವಾದ ಅಭಿಮಾನಿ' ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

ಸಣ್ಣ ಪುಟ್ಟ ವಿಷಯಕ್ಕೂ ಮನಸ್ಥಾಪ ಆಗ್ತಿತ್ತು; ಬ್ರೇಕಪ್ ಕಾರಣ ಬಿಚ್ಚಿಟ್ಟ ಬಿಗ್ ಬಾಸ್ ಪವಿ

ದರ್ಶನ್ ಜೈಲು ಸೇರಿದಾಗ ಬರೆದ ಪೋಸ್ಟ್‌:

'ಅಭಿಮಾನಿಗಳು ನನಗೆ ವರ್ಷದ 365 ದಿನವೂ ಊಟ ಹಾಕ್ತಾರೆ. ಆದ್ರೆ ನಾನು ಹುಟ್ಟುಹಬ್ಬದ ಒಂದು ದಿನ‌ ಮಾತ್ರ ಅವರಿಗೆ ಊಟ ಹಾಕ್ತೀನಿ ಎಂದವರು ದರ್ಶನ್...ಮೈಮೇಲೆ ಆತರ ನನ್ನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಬೇಡಿ ಸಿನಿಮಾ ನೋಡಿ ಸಾಕು, ನಿಮ್ಮ ಅಪ್ಪ ಅಮ್ಮನ‌ ಹೆಸರು ಹಾಕಿಸಿಕೊಳ್ಳಿ ಎನ್ನುತ್ತಾ ತಾವೇ ಎದೆಯ ಮೇಲೆ ನನ್ನ‌ ಸೆಲೆಬ್ರಿಟೀಸ್ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿಗಳ ದಾಸ...ನಾನು ಕಾರಲ್ಲಿ ಸ್ಪೀಡಾಗಿ ಹೋಗೊವಾಗ ಹಿಂದೆ ಬರಬೇಡಿ, ಅಕಸ್ಮಾತ್ ಆಕ್ಸಿಡೆಂಟ್ ಆಗಿ ಹೆಚ್ಚು ಕಮ್ಮಿ ಆದ್ರೆ ನಿಮ್ಮ ಕುಟುಂಬದ ಗತಿ ಏನು?? ಎಂದು ಅಭಿಮಾನಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ಬುದ್ಧಿವಾದ ಹೇಳಿದ್ದ ಈ ಮೈಸೂರಿನ ಆರಡಿಯ ತೂಗುದೀಪ. ಇಂತಹ ವ್ಯಕ್ತಿಯಿಂದ ಇಂತಹ ತಪ್ಪಾಯಿತೆಂದರೆ ನಂಬಲಸಾಧ್ಯ. ಅದೇನೆ ಆದರೂ ಕಾನೂನು ಇದೆ ನೋಡಿಕೊಳ್ಳುತ್ತೆ. ತಪ್ಪು ಮಾಡಿಲ್ಲವಾದರೆ ಅವರ ದಾನಧರ್ಮಗಳೇ ಅವರನ್ನ ಕಾಪಾಡುತ್ತೆ. ಕಾನೂನಿನ ಮುಂದೆ ನಾವೆಲ್ಲರೂ ಚಿಕ್ಕವರೆ. ಸದ್ಯಕ್ಕಿನ್ನು ಆರೋಪಿಯಷ್ಟೆ ಅಪರಾಧಿಯಾಗಿಲ್ಲ...ಮುಂದೆ ಕಾದು ನೋಡೋಣ'

ಈ ಚಿತ್ರದಿಂದ ಬಂದ ಸಂಭಾವನೆಯಲ್ಲಿ ಮದುವೆ ಸಾಲ ತೀರಿಸಿದ್ದ ಡಾ.ರಾಜ್‌ಕುಮಾರ್; ಶಾಕ್ ಆಗ್ಬೇಡಿ

'ಈ ಪ್ರಕರಣದಲ್ಲಿ ದರ್ಶನ್ ಕುಟುಂಬಕ್ಕೆ ಶಾಪ ಹಾಕಿದರೆ ಪ್ರಯೋಜನವೇನು ?? ನನ್ನ ತಂದೆ ಒಬ್ಬ ದೊಡ್ಡ ಸ್ಟಾರ್ ಅನ್ನೋದು ಸಹ ಗೊತ್ತಿಲ್ಲದ ಆ ಹಾಲುಗಲ್ಲದ ಮುದ್ದು ಹುಡುಗ ವಿನೀಶ್ ನೋಡಿದರೆ ಸಂಕಟವಾಗದಿರುವುದೆ? ಫಾದರ್ಸ್ ಡೇ ದಿನ ತಂದೆಯನ್ನು ನೆನೆದು ವಿನೀಶ್ ಹಾಕಿದ ಪೋಸ್ಟ್ ಗೆ ಮನಕಲಕದೆ ಇರುವುದೇ ? ಜೊತೆಗೆ ದರ್ಶನ್ ಜೀವನಕ್ಕೆ 22 ವರ್ಷದಿಂದ ವಿಜಯವೂ ಆಗಿ ಲಕ್ಷ್ಮಿಯೂ ಆಗಿರುವ ವಿಜಯಲಕ್ಷ್ಮಿ ಯವರನ್ನು ತಪ್ಪಿತಸ್ಥರಂತೆ ಕಾಣೋದು ಸರಿಯೇ?? ಇಂತಹ ಸಂದರ್ಭದಲ್ಲಿ ಅವರಿಬ್ಬರಿಗೂ ಧೈರ್ಯ ಹೇಳಬೇಕೇ ಹೊರತು ಹೀಯಾಳಿಸುವುದು ಬೇಡ' 

ಸರಿಗಮಪ ಸೀಸನ್-20 ಅಮೋಘ ಪ್ರಾರಂಭ; ಈ ಬಾರಿ ಶೋಗೆ ನಾದಬ್ರಹ್ಮನ ಎಂಟ್ರಿ ಯಾವಾಗ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?