ನನ್ನ ಲೈಫ್‌ಸ್ಟೈಲ್‌ಗೆ ತಿಂಗಳಲ್ಲಿ 20 ರಿಂದ 30 ಸಾವಿರ ಬೇಕು; ಬಿಗ್ ಬಾಸ್ ಧನುಶ್ರೀ ಸಂಪಾದನೆ ಎಷ್ಟು?

By Vaishnavi ChandrashekarFirst Published Feb 7, 2023, 1:06 PM IST
Highlights

ಸದಾ ಮೇಕಪ್‌ ಹಾಕೊಂಡು ರೀಲ್ಸ್ ಮಾಡುವ ಧನುಶ್ರೀ ಸಂಪಾದನೆ ಎಷ್ಟು ಎಂದು ನೆಟ್ಟಿಗರು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ...

ಸೋಷಿಯಲ್ ಮೀಡಿಯಾ Influencer ಧನುಶ್ರೀ ಬಿಗ್ ಬಾಸ್‌ ಸೀಸನ್‌ 8ರಲ್ಲಿ ಸ್ಪರ್ಧಿಸಿದ ನಂತರ ವೆಬ್‌ ಸೀರಿಸ್‌, ಯೂಟ್ಯೂಬ್ ವ್ಲಾಗ್, ಫೋಟೋಶೂಟ್‌ ಮತ್ತು ರೀಲ್ಸ್‌ ಮಾಡಿಕೊಂಡು ಬ್ಯುಸಿಯಾಗಿರುತ್ತಾರೆ. ಧನು ಚೊಚ್ಚಲ ಸಿನಿಮಾ ಒಂದೊಳ್ಳೆ ಲವ್‌ಸ್ಟೋರಿ ರಿಲೀಸ್‌ಗೆ ಸಜ್ಜಾಗಿದೆ. ಈ ವೇಳೆ ತಮ್ಮ ಸಂಭಾವನೆ ಬಗ್ಗೆ ರಿವೀಲ್ ಮಾಡಿದ್ದಾರೆ. 

'ಬಿ.ಕಾಮ್ ಜೊತೆ ನಾನು ಸಿಎ ಮಾಡುತ್ತಿದ್ದೆ. ಅಕೌಂಟ್ಸ್‌ನಲ್ಲಿ ವೀಕ್‌ ಇದ್ದೆ ಆದರೆ ಮ್ಯಾಥ್ಸ್ ನಲ್ಲಿ ಸ್ಟ್ರಾಂಗ್ ಇದ್ದೆ. ಯಾವಾಗ ಸಿಎ ಸಂಪೂರ್ಣವಾಗಿ ಅಕೌಂಟ್‌ಗಳ ಬಗ್ಗೆ ಇರುವುದು ಎಂದು ತಿಳಿಯಿತ್ತು ಆಗ ನಾನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ತೆಗೆದುಕೊಂಡೆ. ಏಕೆಂದರೆ ನನಗೆ ಆಗುವುದಿಲ್ಲ ಎಂದು ಗೊತ್ತಿದ್ದರೂ ಅದಕ್ಕೆ ಸಮಯ ಇಡುವುದಕ್ಕೆ ನನ್ನಿಂದ ಆಗುವುದಿಲ್ಲ ನನ್ನ ಸಮಯ ಮಾತ್ರವಲ್ಲ ಅಪ್ಪ ಅಮ್ಮ ದುಡ್ಡು ಸುರಿಯುವುದು ನನಗೆ ಇಷ್ಟವಿರಲಿಲ್ಲ. ನಾನು ಸ್ವಲ್ಪ ಫೇಮಸ್‌ ಆದ ಮೇಲೆ ನನ್ನ ಸ್ನೇಹಿತೆ ಹೇಳಿದಳು ನೀನು ಸಿಎ ಮಾಡಬೇಕಿತ್ತು ಎಂದು ಆದರೆ ನನ್ನ ಪ್ರಕಾರ ಸಿಎ ಮಾಡಿದ್ದರೆ ನಾನು ಖುಷಿಯಾಗಿರುತ್ತಿರಲಿಲ್ಲ. ಈಗ ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಕೆಲಸ ಮಾಡುತ್ತಿರುವೆ ನಾನು ಖುಷಿಯಾಗಿ ಮಾಡುತ್ತಿರುವೆ ಎಲ್ಲರೂ  8 ಗಂಟೆ ಕೆಲಸ ಮಾಡಬಹುದು ನಾನು 24 ಗಂಟೆ ಕೆಲಸ ಮಾಡಿದರೂ ಮಾಡುವ ಕೆಲಸದಲ್ಲಿ ಖುಷಿ ಇದೆ. ನಾನು ಇಷ್ಟ ಪಟ್ಟು ಕೆಲಸ ಮಾಡುತ್ತಿರುವೆ. ಫೈನ್ಯಾನ್ಸ್‌ ಸಂಸ್ಥೆಯಲ್ಲಿ ಈ ಹಿಂದೆ ನಾನು ಕೆಲಸ ಮಾಡಿರುವೆ  ದಿನ ಎದ್ದು ಕೆಲಸಕ್ಕೆ ಹೋಗಬೇಕು ಎದ್ದೇಳಬೇಕು ಅನ್ನೋದೇ ಹಿಂಸೆ ಆಗ ನಾನು ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದೆ ಆದರೆ ಈಗ ಖುಷಿಯಿಂದ ಕೆಲಸ ಮಾಡುತ್ತಿರುವೆ' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಧನುಶ್ರೀ ಮಾತನಾಡಿದ್ದಾರೆ.  

ಬಿಗ್ ಬಾಸ್‌ನಿಂದ ಹೊರ ಬರುತ್ತಿದ್ದಂತೆ ಹೊಸ ಕಾರು ಖರೀದಿಸಿದ ಧನುಶ್ರೀ!

'Influencer ಆದ ಮೇಲೆ ದಿನಚರಿ ಬೇರೆ ರೀತಿ ಇರುತ್ತದೆ. ಮೊದಲು ಸಿಕ್ಕಿದೆಲ್ಲಾ ತಿನ್ನುತ್ತಿದೆ ಆದರೆ ಈಗ ಡಯಟ್‌ ಪ್ಲ್ಯಾನ್ ಮಾಡಿರುವೆ. ನನ್ನ ಒಂದೊಳ್ಳೆ ಲವ್‌ಸ್ಟೋರಿ ಸಿನಿಮಾ ಆರಂಭದಲ್ಲೂ ನಾನು ಸಣ್ಣಗಾಗಬೇಕು ಎಂದು ನಿರ್ದೇಶಕರು ಹೇಳಿದ್ದರು. ಎಷ್ಟೇ ಡಯಟ್ ಮಾಡಿದ್ದರೂ ಕೆಲವರ ದೇಹ ತೆಗೆದುಕೊಳ್ಳುವುದಿಲ್ಲ ಜಿಮ್‌ ವರ್ಕೌಟ್ ಸರಿಯಾದ ಸಮಯಕ್ಕೆ ಮಾಡಲು ಆಗುವುದಿಲ್ಲ ಏಕೆಂದರೆ ಒಂದು ದಿನ ಶೂಟಿಂಗ್ ಇರುತ್ತೆ ಮತ್ತೊಂದು ದಿನ ಮೇಕಪ್ ಫೋಟೋಶೂಟ್‌ ಇರುತ್ತೆ ಈಗ ಯೂಟ್ಯೂಬ್ ವ್ಲಾಗ್ ಆರಂಭಿಸಿರುವುದಕ್ಕೆ ಆ ಕೆಲಸ ಕೂಡ ಸೇರಿಕೊಂಡಿದೆ. ಹೆಚ್ಚಿನ ಸಮಯವನ್ನು ವಿಡಿಯೋ ಎಡಿಟಿಂಗ್ ಮಾಡಲು ಬೇಕಾಗುತ್ತದೆ. ವಿಡಿಯೋ ಕೆಲವು ನಿಮಿಷಗಳು ನೋಡಲು ಬೇಕಾಗುತ್ತದೆ ಆದರೆ ಎಡಿಟ್ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ' ಎಂದು ಧನುಶ್ರೀ ಹೇಳಿದ್ದಾರೆ.

'ಬೆಳಗ್ಗೆ ಎದ್ದು ನಾವು ದೇವರ ಫೋಟೋ ನೋಡುವುದಿಲ್ಲ ಬದಲಿಗೆ ಪೋನ್ ನೋಡುವುದು ಏಕೆಂದರೆ ಅದೇ ನಮಗೆ ದೇವರು. ನನಗೆ ಲೈಫ್ ಕೊಟ್ಟಿದ್ದು ನನ್ನ ಫೋನ್, ನಿನ್ನೆ ಅಪ್ಲೋಡ್ ಮಾಡಿರುವುದಕ್ಕೆ ಎಷ್ಟು ವೀಕ್ಷಣೆ ಬಂದಿದೆ ಇಂದು ಎನು ಮಾಡಬೇಕು ಏನೆಂದು ಕಾಮೆಂಟ್ ಬಂದಿದೆ ಎಂದು ಚೆಕ್ ಮಾಡಬೇಕು. ಶೂಟ್‌ಗಳಿದ್ದರೆ ಬೆಳಗ್ಗೆಯಿಂದ ಸಂಜೆವರೆಗೂ ಇರುತ್ತದೆ. ರೀಲ್ಸ್‌ ಮಾಡಲು ಅಥವಾ ವಿಡಿಯೋನ ಬೆಳಗ್ಗೆ ಮಾಡುತ್ತೀವಿ ಏಕೆಂದರೆ ಲೈಟ್ ಅದ್ಭುತವಾಗಿರುತ್ತದೆ ರಾತ್ರಿ ಏನೂ ಶೂಟ್‌ ಮಾಡಲಾಗದು. ನಾವು ಮಿಡಲ್ ಕ್ಲಾಸ್ ಮನೆಯಿಂದ ಬಂದಿರುವುದು ನಮ್ಮ ಕೈಯಲ್ಲಿ ಎಷ್ಟು ಆಗುತ್ತೆ ಅಷ್ಟು ಶ್ರಮ ಹಾಕಬಹುದು ಕೆಲವೊಂದು ಸಲ ಸ್ಥಳ ಚೆನ್ನಾಗಿ ಬರುವುದಿಲ್ಲ ಅದನ್ನು ಹುಡುಕಬೇಕು ಅಲ್ಲಿ ಹೋಗಿ ವಿಡಿಯೋ ಮಾಡಬೇಕು' ಎಂದಿದ್ದಾರೆ ಧನು.  

'ಸಂಜೆ ಜಿಮ್ ಅಥವಾ ಶಾಪಿಂಗ್ ಮಾಡುವೆ ,Influencer ಜೀವನ ಹೇಗೆ ಅಂದ್ರೆ ನಾವು ಒಳ್ಳೆ ಬಟ್ಟೆ ಧರಿಸಬೇಕು ನಮ್ಮನ್ನು ನಾವು ನೀಟ್‌ ಆಗಿ ಕ್ಯಾರಿ ಮಾಡಬೇಕು ಜನ ನಮ್ಮನ್ನು ನೋಡಿ ಫಾಲೋ ಮಾಡುತ್ತಾರೆ. ನಾನೇ ಅದೆಷ್ಟೋ ಜನರನ್ನು ಫಾಲೋ ಮಾಡುವೆ. ನಾನು ತಿಂಗಳಲ್ಲಿ ಮಾಡುವ ಸಂಪಾದನೆ ಇದಕ್ಕೆ ಅಂತ ಇಡಬೇಕು. ಒಂದೊಂದು ತಿಂಗಳು ಒಂದೊಂದು ರೀತಿ ಆದಾಯ ಇರುತ್ತದೆ ಆದರೆ ನನ್ನ ಲೈಫ್‌ ಸ್ಟೈಲ್‌ಗೆಂದು 20-30 ಸಾವಿರ ಹಣ ಬೇಕಾಗುತ್ತದೆ. ಇದೆಲ್ಲಾ ಬಿಟ್ಟು ಮನೆ ಖರ್ಚು ಹೆಚ್ಚಿಗೆ ಇರುತ್ತದೆ. ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದರು ಅದನ್ನು ಬಿಡಿಸಿ ಮನೆ ಖರ್ಚು, ಮನೆ ಲೋನ್‌ ನನ್ನ ಲೋನ್‌ ತುಂಬಾ ಇದೆ ಅದೆಲ್ಲಾ ನೋಡಿಕೊಳ್ಳಬೇಕು' ಎಂದು ಧನುಶ್ರೀ ಹೇಳಿದ್ದಾರೆ. 

click me!