ಈ ಬಾರಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ರಾರಾಜಿಸಲಿದ್ದಾರೆ ರಾಜ್ ಕುಮಾರ್, ಪುನೀತ್

Published : Jul 12, 2022, 06:12 PM IST
ಈ ಬಾರಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ  ರಾರಾಜಿಸಲಿದ್ದಾರೆ ರಾಜ್ ಕುಮಾರ್, ಪುನೀತ್

ಸಾರಾಂಶ

* ಮತ್ತೆ ಬಂದಿದೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ * ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ  ರಾರಾಜಿಸಲಿದ್ದಾರೆ ರಾಜ್ ಕುಮಾರ್, ಪುನೀತ್ * ಕೋವಿಡ್‌ನಿಂದ ಕಳೆಗುಂದಿದ್ದ ಲಾಲ್ ಭಾಗ್ ಫಲಪುಷ್ಪ ಪ್ರದರ್ಶನಕ್ಕೆ ಮತ್ತೆ ಕಳೆ

ಬೆಂಗಳೂರು, (ಜುಲೈ.12): ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಕಳೆಗುಂದಿದ್ದ ಲಾಲ್ ಭಾಗ್ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಮತ್ತೆ ಕಳೆ ಬಂದಿದೆ. 

ಇದೇ  ಆಗಸ್ಟ್ 5 ರಿಂದ 15 ರವರೆಗೆ ನಡೆಯಲಿದ್ದು, ಈ ಭಾರಿ ಫಲಪುಷ್ಪ ಪ್ರದರ್ಶನ ದಲ್ಲಿ ಕರ್ನಾಟಕ ರತ್ನದ್ವಯರಾದ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ರಾರಾಜಿಸಲಿದ್ದಾರೆ.

ಕೋವಿಡ್ ಅಲೆ ಸಂಧರ್ಭದಲ್ಲಿ ಇದ್ದ ನಿಯಮಾವಳಿಗಳಿಂದಾಗಿ ಫಲಪುಷ್ಪ ಪ್ರದರ್ಶನ ಆಲ್ ಮೋಸ್ಟ್ ನಿಂತೇ ಹೋಗಿತ್ತು. ಬೆಂಗಳೂರಿನ ಲಾಲ್‌ಭಾಗ್ ನಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ರಾಜ್ಯದ್ಯಂತ ಬಹಳ ಪ್ರಸಿದ್ಧಿ. ಕಳೆದ ಎರಡು ವರ್ಷಗಳಿಂದ ಫಲಪುಷ್ಪ ಪ್ರದರ್ಶನ ನಡೆದಿರಲಿಲ್ಲ. ಈ ಸಲ ಕೋವಿಡ್ ನಿಯಮಾವಳಿ ಗಳು ಸಡಿಲವಾಗಿರುವ ಕಾರಣದಿಂದ ಪ್ರತಿ ವರ್ಷಕ್ಕಿಂತಲೂ ಈ ಸಲ ಅದ್ದೂರಿಯಾಗಿ ನಡೆಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. 

Bengaluru: ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗೆ ಮತ್ತೆ ಕಳೆ: ಪ್ರವಾಸಿಗರ ಸಂಖ್ಯೆ ಹೆಚ್ಚಳ

ವಿಧಾನಸೌಧದಲ್ಲಿ ಇಂದು(ಮಂಗಳವಾರ) ಈ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕಾ ಸಚಿವ ಮುನಿರತ್ನ ಆಗಸ್ಟ್ ಐದನೇ ತಾರೀಖು  ಅದ್ದೂರಿಯಾಗಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ . ಪ್ರತಿವರ್ಷ ಆಗಸ್ಟ್ ಮೊದಲ ವಾರದಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಆಗಿ ಆಗಸ್ಟ್ ಹದಿನೈದನೇ ತಾರೀಖಿನಂದು ಮುಕ್ತಾಯ ಆಗುತ್ತಿತ್ತು. ಕಳೆದ ಎರಡು ವರ್ಷಗಳ ಕಾಲ ಫಲಪುಷ್ಪ ಪ್ರದರ್ಶನ ಇಲ್ಲದೇ ಇದ್ದ ಕಾರಣ ಈ ಬಾರಿ ಜನರ ನಿರೀಕ್ಷೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಆಗಸ್ಟ್ ಹದಿನೈದನೇ ತಾರೀಖಿನ ಬದಲಾಗಿ ಇನ್ನೂ ಒಂದೆರಡು ದಿನಗಳ ಕಾಲ ವಿಸ್ತರಣೆ ಮಾಡುವ ಚಿಂತನೆಯಲ್ಲಿ ತೋಟಗಾರಿಕಾ ಇಲಾಖೆ ಇದೆ. 

ಡಾ. ರಾಜ್ ಕುಮಾರ್,ಮತ್ತು ಪುನೀತ್ ರಾಜ್ ಕುಮಾರ್
ಈ ಭಾರಿ ಫಲಪುಷ್ಪ ಪ್ರದರ್ಶನ ದಲ್ಲಿ ಕರ್ನಾಟಕ ರತ್ನದ್ವಯರಾದ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ರಾರಾಜಿಸಲಿದ್ದಾರೆ. ಹೂವುಗಳ ಅಲಂಕಾರದಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಗಳನ್ನು ಮಾಡಿ ಪ್ರದರ್ಶನ ಕ್ಕೆ ಇಡುತ್ತಿರುವುದು ಈ ಭಾರಿಯ ವಿಶೇಷ. 

ಗಾಜನೂರಿನಲ್ಲಿ ಇರುವ ಡಾ ರಾಜ್ ಕುಮಾರ್ ಹುಟ್ಟಿದ ಮನೆ ಯ ಮಾದರಿ ಯನ್ನು ಮಾಡಿ ಮನೆಯ ಅಂಗಳದಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕುಳಿತಿರುವ ಮಾದರಿಯಲ್ಲಿ ಪ್ರತಿಮೆಗಳನ್ನು ಮಾಡಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ. ಇದು ಈ ಬಾರಿಯ ಫಲಪುಷ್ಪ ಪ್ರದರ್ಶನದ ಹೈಲೈಟ್ ಆಗಲಿದೆ. ಅದಕ್ಕೂ ಮಿಗಿಲಾಗಿ ಈ ಬಾರಿಯ ಫಲಪುಷ್ಪ ಪ್ರದರ್ಶನ ವನ್ನು ಪುನೀತ್ ರಾಜ್ ಕುಮಾರ್ ಹೆಸರಿನಲ್ಲೇ ಮಾಡಲು ನಿರ್ಧಾರ ಮಾಡಲಾಗಿದೆ. 

ಟಿಕೆಟ್ ದರದಲ್ಲೂ ರಿಯಾಯಿತಿ..?
ಟಿಕೆಟ್ ದರ ನಿಗದಿ ಮಾಡುವ ವಿಚಾರದಲ್ಲಿ ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಸಚಿವ ಮುನಿರತ್ನ ಹೇಳಿದ್ದಾರೆ.  ಶಾಲಾಮಕ್ಕಳಿಗೆ ಫಲಪುಷ್ಪ ಪ್ರದರ್ಶನ ಅಂದ್ರೆ ಸ್ವಲ್ಪ ಹೆಚ್ಚು ಕ್ರೇಜ್ ಇರುತ್ತೆ. ಹಾಗಾಗಿ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವ ಬಗ್ಗೆ ಕೂಡ ಚಿಂತನೆ ನಡೆಸಲಾಗ್ತಿದೆ. ಇದರ ಬಗ್ಗೆ ಕೂಡಾ ಒಂದೆರಡು ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಮುನಿರತ್ನ ಹೇಳಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ವಿದೇಶದಿಂದಲೂ ಹೂವುಗಳು ಬರುತ್ತಿದ್ದು ಈ ಭಾರಿ ಪ್ರಮುಖ ಆಕರ್ಷಣೆ ಆಗಲಿದೆ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?