BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

Kannadaprabha News   | Asianet News
Published : Mar 11, 2022, 11:01 AM IST
BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

ಸಾರಾಂಶ

ಕನ್ನಡ ಸೇರಿದಂತೆ ದೇಶ, ವಿದೇಶಗಳ 27 ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ, ಗೌರವಗಳೊಂದಿಗೆ ಎಂಟು ದಿನಗಳ 13ನೇ ಆವೃತ್ತಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ತೆರೆ ಬಿತ್ತು.

ಬೆಂಗಳೂರು (ಮಾ.11): ಕನ್ನಡ ಸೇರಿದಂತೆ ದೇಶ, ವಿದೇಶಗಳ 27 ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ, ಗೌರವಗಳೊಂದಿಗೆ ಎಂಟು ದಿನಗಳ 13ನೇ ಆವೃತ್ತಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Bengaluru International Film Festival) ಗುರುವಾರ ತೆರೆ ಬಿತ್ತು. 

ಜಪಾನ್‌, ಇರಾನ್‌, ಇಂಡೋನೇಷಿಯಾ, ಇಸ್ರೇಲ್‌, ಕೊರಿಯಾ, ಹಾಂಗ್‌ಕಾಂಗ್‌ ಒಳಗೊಂಡು 60 ಇತರೆ ರಾಷ್ಟ್ರಗಳ 200 ಸಿನಿಮಾಗಳನ್ನು ಸೇರಿದಂತೆ ಒಟ್ಟು 332 ಸಿನಿಮಾಗಳು ಈ ಹೈಬ್ರೀಡ್‌ ಉತ್ಸವದಲ್ಲಿ ಪ್ರದರ್ಶನ ಕಂಡಿವೆ. ಆಜಾದಿ ಕಿ ಅಮೃತ್‌ ಮಹೋತ್ಸವ್‌ ಹಿನ್ನೆಲೆ ಸ್ವಾತಂತ್ರ್ಯಹೋರಾಟಕ್ಕೆ ಸಂಬಂಧಿಸಿದ ಚಲನಚಿತ್ರಗಳು, ತುಳು ಚಿತ್ರರಂಗದ ಸುವರ್ಣ ಮಹೋತ್ಸವ, ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳು ಭಾಗವಹಿಸಿ ಚಿತ್ರ ವೀಕ್ಷಿಸಿದ್ದು ಈ ಬಾರಿ ಉತ್ಸವದ ವಿಶೇಷವಾಗಿತ್ತು. ನಿತ್ಯ ನಡೆಯುತ್ತಿದ್ದ ಸಿನಿಮಾ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಸಿನಿಮಾ ಕಲಿಕಾರ್ಥಿಗಳಿಗೆ ಮಾಹಿತಿ ಕಣಜಗಳಾಗಿದ್ದವು.

ಗುರುವಾರ ಮಲ್ಲೇಶ್ವರದ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ (Thawar Chand Gehlot) ಉತ್ಸವದ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ರಾಜ್ಯಪಾಲರು, ‘ಸಿನಿಮಾವು ವಿಶ್ವದಲ್ಲಿಯೇ ಅತ್ಯುತ್ತಮ ಮನೋರಂಜನಾ ಮಾಧ್ಯಮವಾಗಿದೆ. ಸಾಹಿತ್ಯದ ರೀತಿ ಸಿನಿಮಾವು ಸಮಾಜದ ಪ್ರತಿಬಿಂಬವಾಗಿರುತ್ತದೆ. ಸಾಮಾಜಿಕ ವಿಚಾರ, ಜೀವನಚರಿತ್ರೆ ಆಧಾರಿತ ಸಿನಿಮಾಗಳು ಜನರಲ್ಲಿ ಧನಾತ್ಮಕ ಚಿಂತನೆಯನ್ನು ಬಿತ್ತುತ್ತವೆ. ಸಾಮಾಜಿಕ ಸಮಸ್ಯೆಗಳು, ವೈಶಿಷ್ಯಗಳನ್ನು ಎತ್ತಿ ಹಿಡಿಯಲು, ಶೈಕ್ಷಣಿಕ ಪ್ರಗತಿಗೆ, ಭಾಷಾಕೌಶಲ್ಯ, ರಾಷ್ಟ್ರೀಯಾ ಭಾವೈಕ್ಯತೆ ಹೆಚ್ಚಿಸಲು, ದೇಶ ದೇಶಗಳ ನಡುವೆ ವಿಷಯ ವಿನಿಮಯಕ್ಕೆ ಸಿನಿಮಾ ಅತ್ಯಂತ ಸಹಕಾರಿಯಾಗಿದೆ ಎಂದರು.

BIFFES: ಸುತ್ತೂರು ಮಠದ ಇತಿಹಾಸ ಕುರಿತು ಅನಿಮೇಷನ್ ಸಿನಿಮಾ

ಇಂತಹ ಅಂತಾಷ್ಟ್ರೀಯಾ ಉತ್ಸವಗಳು ವಿವಿಧ ದೇಶಗಳ ಸಿನಿಮಾಗಳ ಪ್ರದರ್ಶನದೊಂದಿಗೆ ವಿಶ್ವದಾದ್ಯಂತ ಮಾನವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಚಯಿಸಿ, ಸಂವೃದ್ಧಿ ಮತ್ತು ಶಾಂತಿಯ ಮಾರ್ಗವನ್ನು ಎತ್ತಿಹಿಡಿಯುತ್ತವೆ. ಕಲಾವಿದರು, ತಂತ್ರಜ್ಞರು ಹೆಚ್ಚಿನ ಶ್ರಮವಹಿಸಿದಾಗ ಅತ್ಯಂತ ಚಿತ್ರಗಳು ಹೊರ ಹೊಮ್ಮುತ್ತವೆ. ಕೊರೋನಾ ಸಂದರ್ಭದಲ್ಲಿಯು ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಯಶಸ್ವಿಯಾಗಿ ಉತ್ಸವವನ್ನು ನಡೆಸಿದೆ ಎಂದು ಶ್ಲಾಘಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ (Sunil Puranik) ಮಾತನಾಡಿ, ಸಂಕಷ್ಟದ ಸಮಯದಲ್ಲಿ ಕೇವಲ 32 ದಿನಗಳಲ್ಲಿಯೇ ಚಿತ್ರೋತ್ಸವ ಆಯೋಜಿಸಿದ್ದೇವೆ. 3 ಸ್ಥಳಗಳ 13 ತೆರೆಗಳಲ್ಲಿ 332 ಚಿತ್ರಗಳು ಪ್ರದರ್ಶನ ಕಂಡಿವೆ. ಆನ್‌ಲೈನ್‌ ಮೂಲಕವು ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಬೆಂಗಳೂರು ಬ್ರಾಂಡ್‌ ಸೃಷ್ಟಿಸುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜಯರಾಜ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌, ವಾರ್ತಾ ಇಲಾಖೆ ಇಲಾಖೆ ಆಯುಕ್ತ ಪಿ.ಎಸ್‌.ಹರ್ಷ ಭಾಗವಹಿಸಿದ್ದರು.

ಪ್ರಶಸ್ತಿಗಳು (ಪ್ರಥಮ, ದ್ವಿತೀಯ, ತೃತೀಯ)
ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗ

-2020ನೇ ಸಾಲು - ಪಿಂಕಿ ಎಲ್ಲಿ?, ದಾರಿ ಯಾವುದಯ್ಯ ವೈಕುಂಠಕ್ಕೆ, ಓ ನನ್ನ ಚೇತನ, ಆಯ್ಕೆ ಸಮಿತಿ ಗುರುತಿಸಿದ ಸಿನಿಮಾ ಮಸಣದ ಹೂ.
-2021ನೇ ಸಾಲು - ದೊಡ್ಡಹಟ್ಟಿಬೋರೇಗೌಡ, ದಂಡಿ, ದೇವಡ ಕಾಡ್‌, ಆಯ್ಕೆ ಸಮಿತಿ ಗುರುತಿಸಿದ ಸಿನಿಮಾ ಕೇಕ್‌.

ಕನ್ನಡದ ಜನಪ್ರಿಯ ಮನರಂಜನೆ ಸಿನಿಮಾ ವಿಭಾಗ: (1-3)
-2020ನೇ ಸಾಲು - ದಿಯಾ, ಶಿವಾಜಿ ಸೂರತ್ಕಲ್‌, ಲವ್‌ಮಾಕ್ಟೈಲ್‌.
-2021ನೇ ಸಾಲು - ಯುವರತ್ನ, ರಾರ್ಬಟ್‌, ಕೋಟಿಗೊಬ್ಬ -3, ಆಯ್ಕೆ ಸಮಿತಿ ಗುರುತಿಸಿದ ಸಿನಿಮಾ ಪೊಗರು

BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣೆ

ಭಾರತೀಯ ಸಿನಿಮಾ ವಿಭಾಗ (ಚಿತ್ರಭಾರತಿ)
-2020ನೇ ಸಾಲು - ಸೇಮ್ಕೋರ್‌, ಥಾಹಿರಾ, ಬ್ರಿಡ್ಜ್‌.
-2021ನೇ ಸಾಲು - ಮೆಪ್ಪಾಡಿಯನ್‌, ಗಾಂಧಿ ಅಂಡ್‌ ಕೋ, ಅಡಿಯಾ ಗೊಡಾರ್ಡ್‌,

ಅತ್ಯುತ್ತಮ ಏಷ್ಯಾ ಸಿನಿಮಾ
-2020ನೇ ಸಾಲು-ದಿ ನ್ಯೂಸ್‌ ಪೇಪರ್‌, ಗಾಡ್‌ ಆನ್‌ ದಿ ಬಾಲ್ಕನಿ. ಆಯ್ಕೆ ಸಮಿತಿ ಗುರುತಿಸಿದ ವಿಶೇಷ ಸಿನಿಮಾ -ದ ವಂಡರ್‌ ಲಸ್ಟ್‌ ಆಫ್‌ ಅಪು.
-2021ನೇ ಸಾಲು - ನಾಟ್‌ ಟುಡೇ, ಆಬ್ಸೆನ್ಸ್‌, ಆಯ್ಕೆ ಸಮಿತಿ ವಿಶೇಷ ಸಿನಿಮಾ-ಟು ಡಾಗ್ಸ್‌ .

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ